Advertisement

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

08:28 PM Dec 27, 2024 | Team Udayavani |

ಬೆಂಗಳೂರು: ಕಾರು ಢಿಕ್ಕಿ ಹೊಡೆದ ಪರಿಣಾಮ ಪದ್ಮನಾಭನಗರ ನಿವಾಸಿ, ಸಾಫ್ಟ್‌ವೇರ್‌ ಎಂಜಿನಿಯರ್‌ ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಶಿವಮೊಗ್ಗ ಮೂಲದ ಗುರುದತ್‌ (38) ಮೃತ ಟೆಕಿ ಎಂದು ಗುರುತಿಸಲಾಗಿದೆ. ಇವರು ನಗರದ ಇಟ್ಟಮಡುವಿನಲ್ಲಿ ವಾಸವಾಗಿದ್ದರು.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಗುರುದತ್‌ ಅವರು ತಮ್ಮ  ಸ್ನೇಹಿತರ ಜೊತೆಗೆ  ಕಾಫಿ ಕುಡಿಯಲು ರಾತ್ರಿ ಪದ್ಮನಾಭನಗರದ ಹೋಟೆಲ್‌ಗೆ ಬಂದಾಗ ದುರ್ಘ‌ಟನೆ ನಡೆದಿದೆ. ಗುರುದತ್‌ ಅವರು ಹೋಟೆಲ್‌ ಸಮೀಪದ ರಸ್ತೆ ಬದಿಯಲ್ಲಿ ತಮ್ಮ ದ್ವಿಚಕ್ರ ವಾಹನ  ನಿಲ್ಲಿಸಿಕೊಂಡು ನಿಂತಿದ್ದರು. ಇದೇ ಸಂದರ್ಭದಲ್ಲಿ ಎದುರುಗಡೆಯಿಂದ ಅತಿ ವೇಗವಾಗಿ ಬಂದ ಕಾರು ಗುರುದತ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗುರುದತ್‌ ತಲೆಗೆ ತೀವ್ರ ಪೆಟ್ಟಾಗಿ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ಬನಶಂಕರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next