Advertisement

Bengaluru: ಅನಧಿಕೃತ ಕಾಲ್‌ಸೆಂಟರ್‌ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

03:54 PM Jan 04, 2025 | Team Udayavani |

ಬೆಂಗಳೂರು: ಯಾವುದೇ ಪರವಾನಗಿ ಪಡೆಯದೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಗ್ರಾಹಕರಿಗೆ ಕರೆ ಮಾಡುತ್ತಿದ್ದ ಅನಧಿಕೃತ ಕಾಲ್‌ ಸೆಂಟರ್‌ ಮೇಲೆ ಹುಳಿಮಾವು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಕಾಲ್‌ಸೆಂಟರ್‌ ಮಾಲಿಕ ಜಿತೇಂದ್ರ ಕುಮಾರ್‌ ಮತ್ತು ಪಾಲುದಾರ ಚಂದನ್‌ ಕುಮಾರ್‌ ಬಂಧಿತರು. ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 15 ಮಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಹುಳಿಮಾವು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರ್ಷದ ಹಿಂದೆ ತೆರೆಯಲಾಗಿದ್ದ ಕಾಲ್‌ ಸೆಂಟರ್‌ ಅನ್ನು ಅಧಿಕೃತವಾಗಿ ನೋಂದಣಿ ಮಾಡಿರಲಿಲ್ಲ. ಇಲ್ಲಿ 7ಯುವತಿಯರು, 8 ಯುವಕರು ಕಾರ್ಯ ನಿರ್ವಹಿಸುತ್ತಿದ್ದರು. ಗ್ರಾಹಕರಿಗೆ ಕರೆ ಮಾಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಕಾಲ್‌ ಸೆಂಟರ್‌ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ನೌಕರರ ವಿಚಾರಣೆ ನಡೆಸಲಾಗುತ್ತಿದೆ. ಈವರೆಗೆ ಯಾವೆಲ್ಲ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವಂತೆ ಗ್ರಾಹಕರಿಗೆ ಕರೆ ಮಾಡಿ ಒತ್ತಾಯ ಮಾಡಲಾಗಿದೆ. ಅದರಿಂದ ಕಾಲ್‌ಸೆಂಟರ್‌ ಮಾಲಿಕರಿಗೆ ಏನೆಲ್ಲ ಲಾಭವಿದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next