ತಾಂಡಾದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯವಸ್ತಗೊಂಡಿದೆ. ಭಾರೀ ಸುರಿದ ಮಳೆಯಿಂದ ಯರಗೋಳ ಗ್ರಾಮದಿಂದ ತಾನು ನಾಯಕ ತಾಂಡಾಕ್ಕೆ ಹೋಗುವ ರಸ್ತೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
Advertisement
ವಿದ್ಯಾರ್ಥಿಗಳು, ಸಾರ್ವಜನಿಕರು, ವಾಹನ ಸವಾರರು ಸಂಚಾರಕ್ಕೆ ಪರದಾಡಿದ ಘಟನೆ ಕೂಡ ನಡೆದಿದೆ. ಈ ರಸ್ತೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಹಳ್ಳದ ನೀರು ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನೂ ಕೆಲವರು ವಿದ್ಯಾರ್ಥಿಗಳು, ಜನರು ನೀರನ್ನು ದಾಟಿಕೊಂಡು ಹೋಗಿದ್ದಾರೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಹೋಗಿದ್ದಾರೆ. ನೀರು ಹರಿಯುವ ಹಳ್ಳ ದಾಟಿ ಜನರು ಓಡಾಡುತ್ತಿದ್ದು, ಅನಾಹುತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಮೇಲ್ದಜೇಗೇರಿಸಿ, ಸೇತುವೆ ನಿರ್ಮಿಸಿ ಹಳ್ಳದ ನೀರು ಸಾರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ತಾಂಡಾದ ನಿವಾಸಿ ಶ್ರೀನಿವಾಸ ನಾಯಕ ಆಗ್ರಹಿಸಿದ್ದಾರೆ.