ಕೆ.ಆರ್.ನಗರ: ಬೇಸಿಗೆ ಸಮಯದಲ್ಲಿಯೂ ರೈತರ ಪಂಪ್ ಸೆಟ್‌ಗಳಿಗೆ ಸಮರ್ಪಕ ವಾಗಿ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಗಳಿಗೆ 600 ಟಿಸಿ (ಟ್ರಾನ್ಸ್‌ಫಾರ್ಮರ್) ಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತಾಲೂಕುಗಳಿಂದ 590 ಮಂದಿ ರೈತರು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಸೆಸ್ಕ್ಗೆ ಹಣ ಕಟ್ಟಲಾಗಿದ್ದು ಅವರಿಗೆ ಸಮರ್ಪಕ ವಿದ್ಯುತ್ ನೀಡುವ ಸಲುವಾಗಿ ಅಗತ್ಯ ಟಿಸಿ ಅಳವಡಿಸಲು 18 ಕೋಟಿ ರೂ. ಗಳನ್ನು ಮಂಜೂರು ಮಾಡಿಸ ಲಾಗಿದೆ. ಟಿಸಿ ಅಳವಡಿಕೆ ಪ್ರಕ್ರಿಯೆ ಶೀಘ್ರ ಪ್ರಾರಂಭವಾಗಲಿದೆ ಎಂದರು.
ಪಂಪ್‌ಸೆಟ್‌ಗಳಿಗೆ ರೈತರ ಅವಶ್ಯಕತೆಗೆ ತಕ್ಕಂತೆ ವಿದ್ಯುತ್ ಸರಬರಾಜು ಮಾಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ರೈತರು ಒಂದು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಸೆಸ್ಕ್ಗೆ 20 ಸಾವಿರ ಮಾತ್ರ ಸಂದಾಯ ಮಾಡುತ್ತಿದ್ದು, ಟಿಸಿ ಅಳವಡಿಸಲು 5 ಲಕ್ಷ ರೂ.ಗಳು ಬೇಕಾಗಿರುವು ದರಿಂದ ರೈತರ ಬೇಡಿಕೆಯನ್ನು ಸರ್ಕಾರದಿಂದ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಹಂಪಾಪುರ, ಮೇಲೂರು, ಮಾರ ಗೌಡನ ಹಳ್ಳಿ, ಹೆಬ್ಟಾಳು, ಹನಸೋಗೆ ಗ್ರಾಮಗಳಲ್ಲಿ ಐದು ವಿದ್ಯುತ್ ಉಪ ಕೇಂದ್ರಗಳನ್ನು ಆರಂಭಿಸಿ ಜನತೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
10 ಎಕರೆ ಸರ್ಕಾರಿ ಜಮೀನು ಗುರುತು: 120 ಕೋಟಿ ರೂ.ಗಳಲ್ಲಿ 220 ಕೆ.ವಿ. ವಿದ್ಯುತ್ ಕೇಂದ್ರ ಆರಂಭಿಸಲು ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಎರಡೂ ತಾಲೂಕುಗಳಿಗೆ ಅನುಕೂಲ ವಾಗುವಂತೆ ಮಿರ್ಲೆ ಗ್ರಾಮ ಪಂಚಾಯ್ತಿಗೆ ಸೇರಿದ ಮಾಳನಾಯಕನಹಳ್ಳಿ ಗ್ರಾಮದಲ್ಲಿ 10 ಎಕರೆ ಸರ್ಕಾರಿ ಜಮೀನು ಗುರುತಿಸಲು ಅಧಿ ಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ನಿರಂತರ ವಿದ್ಯುತ್ ಮತ್ತು ಎಕ್‌ಲೈನ್ ವಿದ್ಯುತ್ ಸಂಪರ್ಕ ಕಲ್ಪಿಸಲಾ ಗಿದ್ದು, ಕುಡಿಯುವ ನೀರು ಸರಬರಾಜು ಮಾಡಲು ಬೇಸಿಗೆ ಕಾಲವಾದರೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸೆಸ್ಕ್ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಆಂಜನೇಯ ಬಡಾವಣೆಯ ಗಾವಡಗೆರೆ ಗುರುಲಿಂಗ ಜಂಗಮ ಮಠದ ಶಾಲೆಯ ರಸ್ತೆಗೆ ಒಂದು ಕೋಟಿ ರೂ., ಮುಸ್ಲಿಂ ಬಡಾವಣೆಗೆ 50 ಲಕ್ಷ, ಬನ್ನಿಮಂಟಪ ಬಡಾವಣೆಗೆ 50 ಲಕ್ಷ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡ ಲಾಗುತ್ತಿದೆ ಎಂದರು.
ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜಸ್ವಾಮೀಜಿ, ಪುರಸಭೆ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ, ಸೆಸ್ಕ್ನ ಇಇ ಚಂದ್ರಶೇಖರ್, ಎಇಇ ಅರ್ಕೇಶ್‌ಮೂರ್ತಿ, ಎಂಜಿನಿಯರ್ ಪ್ರಸನ್ನ, ಕಾಶಿರಾವ್, ಪುರಸಭೆ ಸದಸ್ಯರಾದ ಸಂತೋಷ್‌ಗೌಡ, ಉಮೇಶ್, ಬಿ.ಎಸ್.ತೋಂಟ ದಾರ್ಯ ಇತರರು ಇದ್ದರು.