Advertisement

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

04:27 AM Jan 09, 2025 | Team Udayavani |

ಬೆಳಗಾವಿ: ತಾಲೂಕಿನ ಸಾವಗಾಂವ ಗ್ರಾಮದ ಜೀವಂತ ವ್ಯಕ್ತಿಯ ಹೆಸರಿನಲ್ಲಿ ಮರಣ ಪತ್ರ ನೀಡುವ ಮೂಲಕ ತಹಶೀಲ್ದಾರ್‌ ಕಚೇರಿ ಅಧಿಕಾರಿಗಳು ಎಡವಟ್ಟು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಗಣಪತಿ ಖಾಚು ಕಾಕತಕರ (62) ಬದುಕಿದ್ದರೂ ಮರಣ ಪ್ರಮಾಣ ಪತ್ರ ನೀಡಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ದಾಖಲೆಗಳ ತಿದ್ದುಪಡಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಿದ್ದಾರೆ. 1976, ಫೆ. 2ರಂದು ಗಣಪತಿ ಅವರ ಅಜ್ಜ ಮಸನು ಶಟ್ಟು ಕಾಕತಕರ ನಿಧನ ಹೊಂದಿದ್ದರು.

8 ಜನ ಮೊಮ್ಮಕ್ಕಳು ಜಾಗದ ವಾರಸಾ ಮಾಡಿಕೊಳ್ಳಲು ಅಜ್ಜನ ಮರಣ ಪ್ರಮಾಣ ಪತ್ರ ಪಡೆಯಲು ತಹಶೀಲ್ದಾರ್‌ ಕಚೇರಿಗೆ ಹೋಗಿದ್ದರು. ಮೊಮ್ಮಗ ಗಣಪತಿ ಕಾಕತಕರ ತಮ್ಮ ಆಧಾರ್‌ ಕಾರ್ಡ್‌ ನೀಡಿದಾಗ ಅಜ್ಜನ ಮರಣ ಪತ್ರ ನೀಡುವ ಬದಲು ಮೊಮ್ಮಗನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ್ದರಿಂದ ಆಧಾರ್‌ ಕಾರ್ಡ್‌ ಲಾಕ್‌ ಆಗಿ ವೃದ್ಧಾಪ್ಯ ವೇತನ, ವೋಟಿಂಗ್‌ ಕಾರ್ಡ್‌ ರದ್ದಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next