Advertisement

ನಾನು ಮಾತನಾಡುವವನಲ್ಲ, ಕೆಲಸ ಮಾಡಿ ತೋರಿಸುವವನು:  ಎಸ್.ಎನ್.ಸುಬ್ಬಾರೆಡ್ಡಿ

05:19 PM Mar 13, 2022 | Team Udayavani |

ಗುಡಿಬಂಡೆ: ಹಲವಾರು ಜನ ನಾನು ಈ ಕೆಲಸ ಮಾಡಿದ್ದೇನೆ, ಈ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ, ಆದರೆ ನಾನು ಅವರ ಹಾಗೆ ಮಾತನಾಡುವವನಲ್ಲ ಕೆಲಸ ಮಾಡಿ ತೋರಿಸಿ ಜನರ ಬಳಿಗೆ ಬರುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನುಡಿದರು.

Advertisement

ತಾಲೂಕಿನ ಹಳೇಯರ್ರಹಳ್ಳಿ ಗ್ರಾಮದಲ್ಲಿ ನಡೆದ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕೆಲಸಮಾಡುವವನೇ ಹೊರತು, ಬೇರೆಯವರ ರೀತಿಯಲ್ಲಿ ನಾನು ಆ ಕೆಲಸ ಮಾಡಿದ್ದೇನೆ, ಈ ಕೆಲಸ ಮಾಡಿದ್ದೇನೆ ಎಂದು ಬೊಬ್ಬೆ ಹೊಡೆಯುವವನು ನಾನಲ್ಲ ಎಂದು ಖಾರವಾಗಿ ನುಡಿದರು, ನಾನು ವಾರದಲ್ಲಿ ಐದು ದಿನ ಬಾಗೇಪಲ್ಲಿ ನನ್ನ ಮನೆಯ ಬಳಿಯೇ ಇರುತ್ತೇನೆ, ಯಾವ ಪಕ್ಷದವರೇ ಅಗಲೀ, ಯಾರೇ ಆಗಲಿ ನನಗೆ ಕಷ್ಟ ಇದೆ, ನನಗೆ ಆರೋಗ್ಯ ಸರಿ ಇಲ್ಲ, ನನಗೆ ಮನೆ ಹಾಕಿಸಿಕೊಡಿ, ಇನ್ನಿತರೇ ವಿಚಾರಗಳಲ್ಲಿ ನನ್ನ ಮನೆಯ ಬಳಿಗೆ ಬಂದವರಿಗೆ ನಾನು ಎಂದು ಸಹ ಇಲ್ಲ ಎಂದು ಬರಿಗೈಯಲ್ಲಿ ಕಳುಹಿಸುವ ಜಾಯಮಾನ ನನಗಿಲ್ಲ, ನನಗೆ ಮಾತನಾಡಲು ಬರುವುದಿಲ್ಲ ಎಂದು ಹೇಳುತ್ತಾರೆ, ಹೌದು ನನಗೆ ಮಾತನಾಡಲು ಬರುವುದಿಲ್ಲ, ಕಾರಣ ಅವರ ಹಾಗೆ ಕ್ಷೇತ್ರದ ಸಮಸ್ಯೆಗಳ ಬಗೆ ಚರ್ಚಿಸುವುದು ಬಿಟ್ಟು ದೇಶ ವಿದೇಶಗಳ ಬಗ್ಗೆ ನನಗೆ ಮಾತನಾಡಲು ಬರುವುದಿಲ್ಲ, ಕೇವಲ ನಾನು ನನ್ನ ಕ್ಷೇತ್ರದ ಜನತೆಗೆ ಕೊಟ್ಟ ಮಾತನನ್ನು ಉಳಿಸಿಕೊಳ್ಳುವ ಬಗ್ಗೆ ಅಷ್ಟೆ ನಾನು ಮಾತನಾಡುತ್ತೇನೆ ಎಂದರು.

ಇನ್ನೂ ಗುಡಿಬಂಡೆ ತಾಲೂಕಿನಲ್ಲಿ ಶೇಕಡ 95 ರಷ್ಟು ರಸ್ತೆಗಳು ದುರಸ್ತಿಯಾಗಿದ್ದು, ೫ರಷ್ಟು ಮಾತ್ರ ಅಲ್ಲಲ್ಲಿ ಉಳಿದು ಕೊಂಡಿರಬಹುದು, ಅವನ್ನು ಸಹ ಈ ಅವಯಲ್ಲಿ ಪೂರ್ಣಗೊಳಿಸಿ, ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು.

ಮುಖಂಡ ಬಾಲೇನಹಳ್ಳಿ ರಮೇಶ್ ಮಾತನಾಡಿ ಸುಮಾರು ದಶಕಗಳಿಂದ ಕೋರೇನಹಳ್ಳಿ ಯಿಂದ ವಯಾ ಹಳೇಯರ್ರಹಳ್ಳಿ ಮುಖಾಂತರ ದೇವರೆಡ್ಡಿಪಲ್ಲಿಗೆ ಹೋಗುವ ರಸ್ತೆ ದುರಸ್ತಿಯಾಗದೇ ಇದ್ದು, ಈ ವಿಚಾರನ್ನು ಗ್ರಾಮಸ್ಥರು ಶಾಸಕರ ಬಳಿ ಕೇಳಲಾಗಿ ನಾನು ನಿಮ್ಮ ಗ್ರಾಮದ ರಸ್ತೆಯನ್ನು ದುರಸ್ತಿ ಪಡಿಸಿಯೇ ನಿಮ್ಮ ಮನೆ ಮುಂದೆ ಬರುತ್ತೇನೆ, ಇಲ್ಲದಿದ್ದರೇ ನಾನು ಬರುವುದಿಲ್ಲ ಎಂದು ಹೇಳಿದ್ದರು, ಅದರಂತೆ ಶಾಸಕರು ಅವರು ಕೊಟ್ಟ ಮಾತಿನಂತೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಪಾವಜೇನಹಳ್ಳಿ ನಾಗರಾಜರೆಡ್ಡಿ, ಕಡೇಹಳ್ಳಿ ಬಾಲಕೃಷ್ಣಾರೆಡ್ಡಿ, ಪ.ಪಂ. ಮಾಜಿ ಅಧ್ಯಕ್ಷ ರಿಯಾಜ್ ಪಾಷ, ಬ್ರಾಹ್ಮಣರಹಳ್ಳಿ ನರಸಿಂಹಮೂರ್ತಿ, ಬೀರಪ್ಪ, ನರಸಿಂಹಪ್ಪ, ಮುಂತಾದವರು ಉಪಸ್ಥಿತರಿದ್ದರು.

Advertisement

೧೨ಜಿಯುಡಿ೧: ಗುಡಿಬಂಡೆ ತಾಲೂಕಿನ ಕೋರೇನಹಳ್ಳಿ ಯಿಂದ ವಯಾ ಹಳೇಯರ್ರಹಳ್ಳಿ ಮುಖಾಂತರ ದೇವರೆಡ್ಡಿಪಲ್ಲಿಗೆ ಹೋಗುವ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next