Advertisement

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

08:02 PM Oct 28, 2021 | Team Udayavani |

ಚಂಡೀಗಡ: ಇಬ್ಬರು ಮಕ್ಕಳು ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದಾಗ, ರಸ್ತೆ ಕುಸಿದು ಹೋಗಿ ದೊಡ್ಡ ಗುಂಡಿಯಾಗಿ, ಅದಕ್ಕೆ ಮಕ್ಕಳು ಬಿದ್ದಿದ್ದಾರೆ. ಪಂಜಾಬ್‌ನ ಲುಧಿಯಾನದಲ್ಲಿ ಗುರುವಾರ ಈ ಘಟನೆ ನಡೆದಿದೆ.

Advertisement

ಮಕ್ಕಳಿಗೆ ಪ್ರಾಣಾಪಾಯವಾಗಿಲ್ಲ, ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆ ದೊಡ್ಡ ಗುಂಡಿಯಲ್ಲಿದ್ದ ನೀರಿನ ಪೈಪು ಒಡೆದು ನೀರು ಕ್ರಮೇಣ ತುಂಬಲಾರಂಭಿಸಿ ಮಕ್ಕಳಿಗೆ ಅಪಾಯವಾಗಿ ಪರಿಣಮಿಸಿತ್ತು.

ತಕ್ಷಣವೇ ವ್ಯಕ್ತಿಯೊಬ್ಬ ಬಂದು ಕಬ್ಬಿಣದ ಏಣಿಯನ್ನು ಗುಂಡಿಗೆ ಇಳಿಸಿ ಮಕ್ಕಳು ಮೇಲೆ ಬರಲು ಸಹಾಯ ಮಾಡಿದ್ದಾನೆ. ಇಷ್ಟಾದ ಬಳಿಕ ಸ್ಥಳೀಯಾಡಳಿತ ಗುಂಡಿ ಮುಚ್ಚಲು ಮುಂದಾಗಿದೆ.

ಇದನ್ನೂ ಓದಿ : ಸರ್ಕಾರದಿಂದ ಕುಡಿಯುವ ನೀರೂ ಮಾರಾಟ: ಆರೋಪ-ವಿರೋಧ

Advertisement

Udayavani is now on Telegram. Click here to join our channel and stay updated with the latest news.

Next