Advertisement

ಆಸೀಸ್‌ ರೀತಿ ಸಾಮಾಜಿಕ ಜಾಲತಾಣ ಬಳಕೆ ಬ್ಯಾನ್‌ ಮಾಡಿಲ್ಲ: ಐಟಿ ಕಾರ್ಯದರ್ಶಿ

01:51 AM Jan 07, 2025 | Vishnudas Patil |

ಹೊಸದಿಲ್ಲಿ: ಮಕ್ಕಳು ಸಾಮಾಜಿಕ ಜಾಲತಾಣ ಬಳಸು­ವುದಕ್ಕೆ ಆಸ್ಟ್ರೇಲಿಯಾ ಪೂರ್ಣವಾಗಿ ನಿಷೇಧ ಹೇರಿದೆ. ಆದರೆ ನಾವು ಈ ರೀತಿ ಮಾಡಿಲ್ಲ. ಬದಲಾಗಿ ಪೋಷ­ಕರಿಂದ ಪರಿಶೀಲಿಸಬಹುದಾದ ಒಪ್ಪಿಗೆಯನ್ನು ಮಾತ್ರ ಪಡೆದುಕೊಂಡಿದ್ದೇವೆ ಎಂದು ಐಟಿ ಸಚಿವಾಲಯದ ಕಾರ್ಯ­ದರ್ಶಿ ಎಸ್‌.ಕೃಷ್ಣನ್‌ ಅವರು ಹೇಳಿದ್ದಾರೆ. ಯಾವುದನ್ನು ನಿಷೇಧಿಸಬೇಕು ಅಥವಾ ನಿಷೇಧಿ­ಸಬಾರದು ಎಂಬುದು ಅಲ್ಲಿನ ಸಮಾಜವನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ ಬಹುತೇಕ ಶಿಕ್ಷಣ ಆನ್‌ಲೈನ್‌ ಮೂಲಕ ನೀಡಲಾಗುತ್ತದೆ. ಒಂದು ವೇಳೆ ಸಂಪೂರ್ಣವಾಗಿ ಬಳಕೆಯನ್ನು ನಿಷೇಧಿಸಿದರೆ ಮಕ್ಕಳಿಗೆ ಆ ಸೌಲಭ್ಯ ದೊರೆಯದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next