Advertisement

Road accident: ಹೆದ್ದಾರಿಯಲ್ಲಿ ದಟ್ಟ ಮಂಜು: ಸರಣಿ ಅಪಘಾತ

01:50 PM Dec 28, 2023 | Team Udayavani |

ಬೆಂಗಳೂರು/ನೆಲಮಂಗಲ:  ಬೆಂಗಳೂರು-­ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದಟ್ಟ ಮಂಜು ಆವರಿಸುತ್ತಿದ್ದು, ವಾಹನ ಓಡಾಟಕ್ಕೆ ತೀವ್ರ ತೊಂದರೆ ಆಗಿದೆ. ಬುಧವಾರ ಬೆಳಗಿನ ಜಾವ ದಟ್ಟ ಮಂಜಿನಲ್ಲಿ ಮುಂಭಾಗದಲ್ಲಿ ಸಾಗುತ್ತಿದ್ದ ಕ್ಯಾಂಟರ್‌ಗೆ ಬಸ್‌ಗಳು ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಇದರಿಂದ 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ನೆಲಮಂಗಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತುಮಕೂರು ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಕ್ಯಾಂಟರ್‌ ಹಾಗೂ ಟಿ.ಬೇಗೂರು ಸಮೀಪದ ತೋಣಚಿನಕುಪ್ಪೆ ಬಳಿ ನಿಧಾನವಾಗಿ ಚಲಿಸು­ತ್ತಿದ್ದವು. ಈ ವೇಳೆ, ವೇಗವಾಗಿ ಬಂದ ಬಸ್‌ಗಳು ದಟ್ಟ ಮಂಜಿನಲ್ಲಿ ಕ್ಯಾಂಟರ್‌ ನೋಡದೆ ಡಿಕ್ಕಿ ಹೊಡೆದಿವೆ. ಬಸ್‌ ಹಿಂದೆಯೇ ಬರುತ್ತಿದ್ದ ಬಸ್‌ಗಳೂ ಡಿಕ್ಕಿ ಹೊಡೆದುಕೊಂಡಿವೆ. ಬೆಳಗಿನ ಜಾವ ನಿದ್ದೆಯಲ್ಲಿದ್ದ ಬೆಂಗಳೂರಿಗೆ ಬರುತ್ತಿದ್ದ ಕೆಲ ಪ್ರಯಾಣಿಕರಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದರೆ, ಮತ್ತೆ ಕೆಲವರು ಅದೃಷ್ಟವಶಾತ್‌ ಯಾವುದೇ ಸಮಸ್ಯೆಯಾಗದೆ ಮನೆ ಸೇರಿದ್ದಾರೆ.

ಒಟ್ಟಾರೆ 3 ಬಸ್‌, 1ಕ್ಯಾಂಟರ್‌ ಡಿಕ್ಕಿಯಾಗಿದ್ದು, ಬೆಳಗಿನ ಜಾವ ಸರಣಿ ಅಪಘಾತಕ್ಕೆ ಕಾರಣ­ವಾಗಿದೆ.

ಟ್ರಾಫಿಕ್‌ ಜಾಮ್‌: ಮುಂಜಾನೆಯೇ ದಟ್ಟ ಮಂಜಿ­ನಲ್ಲಿ ಅಪಘಾತವಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ಜಾಮ್‌ ಉಂಟಾಯಿತು. ಟ್ರಾಫಿಕ್‌ ಪೊಲೀಸರು ಬರಲು ಸ್ವಲ್ಪ ತಡವಾದ ಪರಿಣಾಮ ಕೆಲಗಂಟೆ ಕಾಲ 5-6 ಕಿ.ಮೀ. ಸಂಚಾರ ವ್ಯತ್ಯಯವಾಯಿತು. ಪೊಲೀಸರು ಸಂಚಾರ ನಿಯಂತ್ರಣಕ್ಕೆ ಹರ ಸಾಹಸಪಟ್ಟರು.

ಬೆಳಗ್ಗೆ 9 ಗಂಟೆಯಾದ್ರೂ ಕರಗದ ಮಂಜು: ನಗರ ಹೊರವಲಯದಲ್ಲಿ  ಚಳಿಯ ಜೊತೆಗೆ ದಟ್ಟ ಮಂಜು ಆವರಿಸುತ್ತಿದ್ದು, ಬೆಳಗ್ಗೆ 9 ಗಂಟೆ ಯಾದ್ರೂ ಮಂಜು ಕರುತ್ತಿಲ್ಲ, ಇದರಿಂದ ರೈತರು, ಜನ ಸಾಮಾನ್ಯರು ತತ್ತರಿಸಿದ್ದಾರೆ.

Advertisement

ಹೊಸಕೋಟೆ ಬಳಿ ಸರಣಿ ಅಪಘಾತ: ನಗರದ ವ್ಯಕ್ತಿ ಸಾವು

ಹೊಸಕೋಟೆ: ಹೊಸಕೋಟೆ ತಾಲೂಕಿನ ನಂದಗುಡಿಯ ರಾಜ್ಯ ಹೆದ್ದಾರಿ ಶಿವನಾಪುರ ಕ್ರಾಸ್‌ ಬಳಿ ನಡೆದ ಸರಣಿ ಅಪಘಾತದಲ್ಲಿ ಬೆಂಗಳೂರಿನ ಗೋವಿಂದಪುರ ನಿವಾಸಿ ನಯಾಜ್‌ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಬೈಕ್‌ ಸವಾರರಾದ ಕಿರಣ್‌(23), ಪ್ರತಾಪ್‌ (26), ಆಟೋದಲ್ಲಿದ್ದ ನಯಾಜ್‌ (47) ಮೃತರು.

ಚಿಂತಾಮಣಿ-ಹೊಸಕೋಟೆ ರಾಜ್ಯ ಹೆದ್ದಾರಿಯಲ್ಲಿ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಹೊಸಕೋಟೆ ಕಡೆಯಿಂದ ವೇಗವಾಗಿ ಬರುತ್ತಿದ್ದ ಆಟೋ ಡಿಕ್ಕಿ ಹೊಡೆದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಸಂದರ್ಭದಲ್ಲಿ 3 ಬೈಕ್‌ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಸರಣಿ ಅಪಘಾತ ನಡೆದಿದೆ.  ಬೈಕ್‌ ಸವಾರ ಕಿರಣ್‌ (23) ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಬೆಂಗಳೂರಿನ ನಿಮ್ಹಾನ್ಸ್‌ ಹಾಗೂ ಬೌರಿಂಗ್‌ ಆಸ್ಪತ್ರೆಗೆ ರವಾನಿಸಿದ್ದ ಪ್ರತಾಪ್‌ (26), ಆಟೋದಲ್ಲಿದ್ದ ನಯಾಜ್‌ (47) ಚಿಕಿತ್ಸೆ ಫ‌ಲಿಸದೇ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next