ಜಿನೇವಾ: ರೋಗದ ಲಕ್ಷಣವೇ ಇಲ್ಲದಂತೆ ಕೋವಿಡ್ ಒಬ್ಬರಿಂದ ಒಬ್ಬರಿಗೆ ಹರಡುವ ಕ್ರಮ ಅತಿ ಅಪರೂಪ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ರೋಗ ಲಕ್ಷಣಗಳೇ ಇಲ್ಲದ, ಕೋವಿಡ್ ಸೋಂಕಿತರು ಜಗತ್ತಿನಾದ್ಯಂತ ಪತ್ತೆಯಾಗುತ್ತಿರುವಾಗಲೇ ರೋಗ ಲಕ್ಷಣವೇ ಇಲ್ಲದೆ ಕೋವಿಡ್ ಹರಡದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದು ಮಹತ್ವದ್ದಾಗಿದೆ.
ಹಲವು ದೇಶಗಳಲ್ಲಿ ಜನರಿಗೆ ಕೋವಿಡ್ ರೀತಿಯ ಲಕ್ಷಣಗಳಿದ್ದು, ಪರಿಪೂರ್ಣವಾದ ರೋಗ ಲಕ್ಷಣಗಳು ಕಂಡು ಬರದೆ ಪಾಸಿಟಿವ್ ಆಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿರುವ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥರಾದ ಮರಿಯಾ ವಾನ್ ಕೆಖೋìವೆ ಎಂಬವರು ಇಂತಹ ಪ್ರಕರಣಗಳ ಬಗ್ಗೆ ಕೂಲಂಕಷವಾಗಿ ಗಮನಿಸಿದಾಗ ಮತ್ತು ಹೆಚ್ಚು ಪ್ರಶ್ನೆಗಳನ್ನು ರೋಗಿಗಳ ಬಳಿ ಕೇಳಿದಾಗ ಅವರಿಗೆ ಕೋವಿಡ್‌ನ ರೋಗಲಕ್ಷಣಗಳು ಅಲ್ಪಪ್ರಮಾಣದಲ್ಲಾದರೂ ಇರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ರೋಗ ಲಕ್ಷಣಗಳು ಇಲ್ಲದ ಕೋವಿಡ್ ರೋಗ ಪೀಡಿತ ಎನ್ನಲಾದ ವ್ಯಕ್ತಿಯ ಇತಿಹಾಸವನ್ನು ಹಲವು ತಿಂಗಳುಗಳಿಂದ ಕೆದಕಿದರೆ ಆತನಿಗೆ ವಿವಿಧ ಅವಧಿಯಲ್ಲಿ ಕಡಿಮೆ ಪ್ರಮಾಣದ ವಿವಿಧ ರೋಗ ಲಕ್ಷಣಗಳು ಇದ್ದದ್ದು ಗೊತ್ತಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ರೋಗ ಲಕ್ಷಣಗಳಿಲ್ಲದೇ ಹರಡುತ್ತಿರುವ ವಿಚಾರದಲ್ಲಿ ನಾವು ಹೆಚ್ಚೆಚ್ಚು ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದ ಅಧ್ಯಯನ ನಡೆಸುತ್ತಿದ್ದೇವೆ. ಅಲ್ಲದೇ ವಿವಿಧ ದೇಶಗಳ ಬಳಿ ಈ ಕುರಿತಾಗಿ ಉತ್ತರಗಳನ್ನೂ ಕೇಳಿದ್ದೇವೆ. ಆದರೂ ರೋಗ ಲಕ್ಷಣಗಳು ಇಲ್ಲದೇ ಹರಡುತ್ತಿರುವುದರ ಬಗ್ಗೆ ಹೇಳಲಾಗುವುದಿಲ್ಲ ಹೀಗೆ ರೋಗ ಲಕ್ಷಣಗಳಿಲ್ಲದೆ ಹರಡುವ ಪ್ರಮಾಣ ಹೆಚ್ಚೆಂದರೆ ಶೇ.6ರಷ್ಟು ಇರಬಹುದು ಎಂದು ಹೇಳಿದ್ದಾರೆ. ಆದರೂ ಅಮೆರಿಕ, ಬ್ರಿಟನ್ ಸೇರಿದಂತೆ ವಿವಿಧ ದೇಶಗಳು ಕೋವಿಡ್ ಯಾವುದೇ ರೋಗ ಲಕ್ಷಣಗಳಿಲ್ಲದೆ ಪಸರಿಸುತ್ತಿದೆ ಎಂದು ಜನರಿಗೆ ಎಚ್ಚರಿಸಿವೆ.