Advertisement

ಗೋವಾ ಪ್ರವಾಸದಲ್ಲಿ ರಿಷಿ ಸುನಕ್ ಪತ್ನಿ ಅಕ್ಷತಾ ಮತ್ತು ಮಕ್ಕಳು

06:35 PM Feb 16, 2023 | Team Udayavani |

ಪಣಜಿ: ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ತಮ್ಮ ಕುಟುಂಬದೊಂದಿಗೆ ರಜೆಯನ್ನು ಆನಂದಿಸಲು ಗೋವಾಕ್ಕೆ ಆಗಮಿಸಿದ್ದಾರೆ.

Advertisement

ಗೋವಾದ ಬಾಣಾವಲಿ ಕಡಲತೀರದಲ್ಲಿ  ರಿಷಿ ಸುನಕ್ ಅವರ ಮಕ್ಕಳು, ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಸುಧಾಮೂರ್ತಿ ಇದ್ದರು. ಸುನಕ್ ಅವರ ಕುಟುಂಬವು ಸಮುದ್ರಕ್ಕೆ ಜೆಟ್ ಸ್ಕೀ ಪ್ರವಾಸ ಕೈಗೊಂಡಿತು. ಅಕ್ಷತಾ ಮತ್ತು ಗೋವಾದ ಸ್ಥಳೀಯ ಉದ್ಯೋಗಸ್ಥರ  ನಡುವೆ ಸಂಭಾಷಣೆ ನಡೆಯಿತು. ಸದ್ಯ ಯುಕೆ ಪ್ರಧಾನಿ ಪತ್ನಿ ಗೋವಾ ಭೇಟಿ ಸಾಮಾಜಿಕ ತಾಣದದಲ್ಲಿ ವೈರಲ್ ಆಗಿದೆ.

ಗೋವಾ ಮೂಲದ ಪೀಲೆ ಫರ್ನಾಂಡಿಸ್ ಅವರು ಮೀನುಗಾರಿಕೆ ಸೇರಿದಂತೆ ಜಲ ಕ್ರೀಡೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಪೀಲೆ ಮತ್ತು ಅಕ್ಷತಾ ಮೂರ್ತಿ ನಡುವಿನ ಸಂಭಾಷಣೆ ವೈರಲ್ ಆಗಿದೆ. ಗೋವಾದಲ್ಲಿ ಜೆಟ್ ಸ್ಕೀ ರೈಡ್ ಬಗ್ಗೆ ಅಕ್ಷತಾ ಮೂರ್ತಿ ಅವರು ಪ್ರಶ್ನೆ ಕೇಳಿದರು. ಅದಕ್ಕಿಂತ ಹೆಚ್ಚಾಗಿ, ಗೋವಾದಲ್ಲಿ ಇಂತಹ ಜಲ ಕ್ರೀಡೆಗಳು ಸುರಕ್ಷಿತವೇ ಎಂದು ಕೇಳಿದರು. 100 ರಷ್ಟು ಸುರಕ್ಷಿತವಾಗಿದ್ದೇನೆ ಎಂದು ಫರ್ನಾಂಡಿಸ್ ಉತ್ತರಿಸಿದರು. ಬೋಟ್‍ನಲ್ಲಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರುವುದಾಗಿ ಗೋವಾದ ಪೀಲೆ ರವರು ಅಕ್ಷತಾ ಮೂರ್ತಿ ರವರಿಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next