Advertisement

ರಿಕಿ ಪಾಂಟಿಂಗ್‌ ಭಾರತದ ಸ್ಲಿಪ್‌ ಫೀಲ್ಡಿಂಗ್‌ ಕೋಚ್‌!

07:45 AM Dec 16, 2017 | |

ಹೊಸದಿಲ್ಲಿ: ಭಾರತಕ್ಕೆ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಉತ್ತಮ ಸ್ಲಿಪ್‌ ಫೀಲ್ಡಿಂಗ್‌ ಕೋಚ್‌ ಆಗಬಲ್ಲರು ಎಂದು ಅದೇ ನಾಡಿನ ಮಾಜಿ ಆರಂಭಕಾರ ಮ್ಯಾಥ್ಯೂ ಹೇಡನ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ ಭಾರತದ ಸ್ಲಿಪ್‌ ಫೀಲ್ಡಿಂಗ್‌ ಸಂಕಟವನ್ನು ಗಮನಿಸಿದ ಹೇಡನ್‌ ಇಂಥದೊಂದು ಸಲಹೆ ನೀಡಿದ್ದಾರೆ.

“ಈವರೆಗೆ ಸ್ಲಿಪ್‌ ಫೀಲ್ಡಿಂಗ್‌ ಕೋಚ್‌ ಬಗ್ಗೆ ಕ್ರಿಕೆಟ್‌ ಜಗತ್ತು ಯೋಚಿಸಿಲ್ಲ. ಇದಕ್ಕೊಬ್ಬ ತರಬೇತುದಾರ ಅಗತ್ಯವೆಂದಾದಲ್ಲಿ ರಿಕಿ ಪಾಂಟಿಂಗ್‌ಗಿಂತ ಮಿಗಿಲಾದ ಹೆಸರು ಕಾಣಿಸದು. ಅವರ ಸ್ಲಿಪ್‌ ಕ್ಷೇತ್ರರಕ್ಷಣೆ ಅಸಾಮಾನ್ಯ ಮಟ್ಟದ್ದು. ಭಾರತ ಈ ನಿಟ್ಟಿನಲ್ಲಿ ಯೋಚಿಸಬಹುದು…’ ಎಂದು ಹೇಡನ್‌ ಹೇಳಿದರು.

“ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಟಗಾರನೊಬ್ಬನ ಫೀಲ್ಡಿಂಗ್‌ ಜಾಗವನ್ನು ಪದೇಪದೆ ಬದಲಾಯಿಸುವುದು ತಪ್ಪು. ಒಬ್ಬ ಕ್ಷೇತ್ರರಕ್ಷಕ ಮೊದಲ ಸ್ಲಿಪ್‌ನಲ್ಲಿ ನಿಂತರೆ ಆತನನ್ನು ಅದೇ ಜಾಗದಲ್ಲಿ ಮುಂದುವರಿಸಬೇಕು. ಇದರಿಂದ ಆತನಿಗೆ ಹಾಗೂ ತಂಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ’ ಎಂಬುದು ಹೇಡನ್‌ ನೀಡಿದ ಸಲಹೆ.

Advertisement

Udayavani is now on Telegram. Click here to join our channel and stay updated with the latest news.

Next