Advertisement
ಯೋಜನೆಯನ್ನು ಹೊಗಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಈ ಯೋಜನೆ ಯು ಭಾರತೀಯ ಯುವ ಸಮುದಾಯ ವನ್ನು ಶಿಸ್ತುಬದ್ಧ, ಕೌಶಲಯುತ, ಸದೃಢವಾಗಿ ಸುವುದರ ಜತೆ ಆರ್ಥಿಕವಾಗಿಯೂ ಸ್ವಾವ ಲಂಬಿಗಳಾಗಿಸುತ್ತದೆ. ಇದು ಆತ್ಮನಿರ್ಭರ ಭಾರತದ ನಿಜವಾದ ಅಡಿಪಾಯವಾಗಲಿದೆ. ಈ ಯೋಜನೆಯಿಂದಾಗಿ ಯುವಕರಿಗೆ ಉತ್ತಮ ಭವಿಷ್ಯದ ಬಾಗಿಲು ತೆರೆದು ಕೊಳ್ಳ ಲಿದೆ’ ಎಂದಿದ್ದಾರೆ. ಹಾಗೆಯೇ ಸರಕಾರಿ ಇಲಾಖೆ ಮತ್ತು ಸಚಿವಾಲಯಗಳಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಪ್ರಧಾನಿಯವರ ಆಶ್ವಾಸನೆಯನ್ನೂ ಶಾ ಕೊಂಡಾಡಿದ್ದಾರೆ.
“ಅಗ್ನಿಪಥ ಯೋಜನೆಯಿಂದಾಗಿ ದೇಶದ ಸಶಸ್ತ್ರ ಪಡೆಯು ತಾಂತ್ರಿಕ ಪರಿಣತಿ ಪಡೆದಿರುವ ಯುವಕರನ್ನು ಸೇರಿಸಿ ಕೊಳ್ಳಲಿದ್ದು, ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿ ಕೊಳ್ಳಲಿದೆ. ಪಡೆಗಳಲ್ಲಿ ಸೇವೆ ಸಲ್ಲಿಸಿ, ಶಿಸ್ತು, ಸಂಯಮ ಮತ್ತು ಕೌಶಲಯುತವಾಗುವ ಯುವಕರು ಸಮಾಜಕ್ಕೆ ವಾಪಸಾದಾಗ ಅವರು ದೇಶದ ಆಸ್ತಿಯಾಗದ್ದಾರೆ’ ಎಂದು ರಕ್ಷಣ ಸಚಿವ ರಾಜನಾಥ ಸಿಂಗ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕೂಡ ಯೋಜನೆಯನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.
Related Articles
Advertisement