Advertisement

ಕಬ್ಬನ್‌ಪಾರ್ಕ್‌ ಸಪ್ತ ಬಾವಿಗಳ ಪುನಶ್ಚೇತನ

12:35 PM May 08, 2017 | |

ಬೆಂಗಳೂರು: ಕಬ್ಬನ್‌ಪಾರ್ಕ್‌ನ ಸಪ್ತ ಬಾವಿಗಳಲ್ಲಿ ಅಂತರ್ಜಲ ಸಮೃದ್ಧವಾಗಿ ಇರುವುದನ್ನು ಗುರುತಿಸಿರುವ ಜಲತಜ್ಞರು ಅವುಗಳ ಪುನಶ್ಚೇತನಕ್ಕೆ ಮುಂದಾಗಿದ್ದಾರೆ. ಕಬ್ಬನ್‌ ಪಾರ್ಕ್‌ನಲ್ಲಿ 45 ರಿಂದ 55 ವರ್ಷಗಳಷ್ಟು ಹಳೆಯದಾದ ಹಲವು ಬಾವಿಗಳಿವೆ. ಅವುಗಳು ಸುಮಾರು 40 ರಿಂದ 50 ಅಡಿ ಆಳವಿದ್ದು, ಸಮೃದ್ಧ ನೀರಿನ ಸೆಲೆ ಹೊಂದಿವೆ.

Advertisement

ಈ ತೆರೆದ ಬಾವಿಗಳನ್ನು ಪುನಶ್ಚೇತನಗೊಳಿಸಿದರೆ ಕಬ್ಬನ್‌ಪಾರ್ಕ್‌ನ ನಿರ್ವಹಣೆಗೆ ಅಗತ್ಯವಾದ ಸುಮಾರು ಶೇ.50ರಿಂದ ಶೇ.70ರಷ್ಟು ನೀರು ಲಭ್ಯ ವಾಗಲಿದೆ ಎಂದು ಅಂದಾಜಿಸಲಾಗಿದೆ. ಹಡ್ಸನ್‌ ವೃತ್ತದ ಕಡೆಯಿಂದ ಕಬ್ಬನ್‌ ಪಾರ್ಕ್‌ ಪ್ರವೇಶಿಸುವ ಗೇಟ್‌ ಸಮೀಪ ವಿರುವ “ಕರಗದಕುಂಟೆ’ಯನ್ನು ಪ್ರಾಯೋಗಿಕವಾಗಿ ಸ್ವತ್ಛಗೊಳಿಸಲಾಗಿದ್ದು, ಸುಮಾರು 7 ಅಡಿಗಳಷ್ಟು ಹೂಳು ತೆರವುಗೊಳಿಸ ಲಾಗಿದೆ.

ಉಳಿದಂತೆ ಲೋಕೋಪಯೋಗಿ ಇಲಾಖೆ ಕಚೇರಿ, ಆರ್‌ಬಿಐ ಕಚೇರಿ ಹಿಂಭಾಗ ಮತ್ತು ಕೇಂದ್ರ ಸಾರ್ವಜನಿಕ ಗ್ರಂಥಾಲಯ ಸಮೀಪವಿರುವ ಆರು ಬಾವಿಗಳಲ್ಲಿ ತಲಾ 5ರಿಂದ 6 ಅಡಿಗಳಷ್ಟು ಹೂಳು ತುಂಬಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

3 ಹಂತದ ಕಾರ್ಯ: ಬಾವಿಗಳಲ್ಲಿರುವ ನೀರನ್ನು ಹೊರ ತೆಗೆದು ಬಳಿಕ ಹೂಳು ತೆರವುಗೊಳಿಸಿ ಸ್ವತ್ಛಗೊಳಿಸುವ ಕಾರ್ಯ ಮೊದಲ ಹಂತದಲ್ಲಿ ನಡೆಯಲಿದೆ. 2ನೇ ಹಂತದಲ್ಲಿ ಬಾವಿಗಳ ಸಮೀಪದಲ್ಲಿ ಸುಮಾರು 12 ಇಂಗು ಗುಂಡಿಗಳ ನಿರ್ಮಾಣ ಕಾರ್ಯ ನಡೆಯಲಿದೆ. ಸ್ವತ್ಛಗೊಂಡ ಬಾವಿಗಳಿಗೆ ಒಂದಕ್ಕೊಂದು ಸಂಪರ್ಕ ಇರುವಂತೆ ಪೈಪ್‌ಲೈನ್‌ ವ್ಯವಸ್ಥೆ ಮಾಡಲಾಗುವುದು ಎಂದು “ಫ್ರೆಂಡ್ಸ್‌ ಆಫ್ ಲೇಕ್ಸ್‌’ ಸಂಸ್ಥೆಯ ಮುಖ್ಯಸ್ಥ ರಾಮ್‌ಪ್ರಸಾದ್‌ ಹೇಳಿದ್ದಾರೆ.

ತಲಾ 10 ಎಚ್‌ಪಿ ಸಾಮರ್ಥಯದ ಪಂಪ್‌ ಸೆಟ್‌ ಬಳಸಿ ಬಾವಿ ನೀರನ್ನು ಕೇಂದ್ರ ಗ್ರಂಥಾ ಲಯ ಸಮೀಪದ ರೋಸ್‌ಗಾರ್ಡನ್‌ ನಲ್ಲಿ ನಿರ್ಮಿಸಲಾಗಿರುವ ತೊಟ್ಟಿಗೆ ಪಂಪ್‌ ಮಾಡಲಾಗುವುದು. ಬಳಿಕ ಕಬ್ಬನ್‌ಪಾರ್ಕ್‌ ನಲ್ಲಿರುವ ತುಂತುರು ನೀರಾವರಿ ವ್ಯವಸ್ಥೆಗೆ (ಸ್ಪ್ರಿಂಕ್ಲರ್‌) ಸಂಪರ್ಕಿಸಿ, ನೀರನ್ನು ಹಾಯಿಸುವ ಯೋಜನೆ ರೂಪಿಸಲಾಗಿದೆ. ಕೊನೆಯ ಹಂತದಲ್ಲಿ ಪಾರ್ಕ್‌ನ 3 ಕೊಳವೆ ಬಾವಿಗಳನ್ನು ಪುನಶ್ಚೇತನಗೊಳಿಸಿ ಬಳಕೆಗೆ ಯೋಗ್ಯವಾಗುವಂತೆ ಮಾಡಲಾಗುವುದು ಎಂದು ರಾಮ್‌ಪ್ರಸಾದ್‌ ತಿಳಿಸಿದ್ದಾರೆ. 

Advertisement

ಈ ಕಾರ್ಯಕ್ಕೆ ಟಿಸಿಎಸ್‌ ಕಂಪನಿ ಸುಮಾರು 25ರಿಂದ 30 ಲಕ್ಷ ರೂ. ನೆರವು ನೀಡುತ್ತಿದೆ. ಇಂಡಿಯಾ ಕೇರ್ ಫೌಂಡೇ ಷನ್‌ ಸಂಸ್ಥೆ, ಬಯೋಮ್‌ ಸಂಸ್ಥೆ ಹಾಗೂ ಫ್ರೆಂಡ್ಸ್‌ ಆಫ್ ಲೇಕ್ಸ್‌ ಸಂಸ್ಥೆಗಳ ಸಹಯೋ ಗದಲ್ಲಿ ಸಪ್ತ ಬಾವಿಗಳ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ಜತೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡ ಅಗತ್ಯ ನೆರವು ಒದಗಿಸುತ್ತಿದ್ದಾರೆ.

ಬಾವಿ ಸ್ವತ್ಛತೆ: ಏಳು ಬಾವಿಗಳು ಬಹಳ ಆಳವಾಗಿದ್ದು, ಹೂಳು ತೆಗೆಯಲು 12-15 ಮಂದಿ ನುರಿತ ಕೆಲಸಗಾರರು ಶ್ರಮಿಸುತ್ತಿ ದ್ದಾರೆ. ಹೂಳು ತೆಗೆದು ಅಂತರ್ಜಲ ಸುಲಭವಾಗಿ ಮೇಲೆ ಬರುವಂತೆ ವ್ಯವಸ್ಥೆ ಮಾಡಲಾಗುವುದು. ನಂತರ ನೀರು ಶುದ್ಧವಾಗಲು ಸುಣ್ಣ, ಆಲಂ ಅಥವಾ ಅವಶ್ಯಕತೆ ಇದ್ದರೆ ಪೊಟ್ಯಾಷಿಯಂ ಪರಮಾಗ್ನೆಟ್‌ ಬಳಸುತ್ತೇವೆ. ಬಾವಿಗೆ ಎರಡು ರೀತಿಯ ಜಾಲರಿಗಳನ್ನು ಅಳವಡಿ ಸಲಾಗುವುದು. ಮೊದಲು ಕಸ, ಎಲೆ ಇತ್ಯಾದಿ ಬೀಳದಂತೆ ಎಚ್ಚರಿಕೆ ಕ್ರಮವಾಗಿ ಚಿಕ್ಕದಾದ ಜಾಲರಿ ಹಾಗೂ ಮನುಷ್ಯರು ಬಾವಿಗೆ ಬೀಳದಂತೆ ದೊಡ್ಡ ಜಾಲರಿ ಹಾಕಿ ಮುಚ್ಚಲಾಗುವುದು ಎಂದು ಜಲತಜ್ಞ ವಿಶ್ವನಾಥ್‌ ಮಾಹಿತಿ ನೀಡಿದ್ದಾರೆ.

ಯಥೇತ್ಛ ನೀರು: ಮೇ ತಿಂಗಳ ಅವಧಿಯನ್ನು ಅತ್ಯಂತ ಬರದ ಪರಿಸ್ಥಿತಿ ಎನ್ನಬ ಹುದು. ಬಹುತೇಕ ಬಾವಿ, ಕೆರೆಗಳು ಬರಿದಾಗುವ ಸಮಯವಿದು. ಆದರೆ ಕಬ್ಬನ್‌ ಪಾರ್ಕ್‌ನಲ್ಲಿ ಇರುವ ಈ ನಿರ್ಲಕ್ಷಿéತ ಬಾವಿಗಳಲ್ಲಿ ಈಗಲು 7ರಿಂದ 9 ಅಡಿಗಳಷ್ಟು ನೀರು ತುಂಬಿಕೊಂಡಿದೆ. ಹೂಳು ತೆಗೆದು, ಇಂಗು ಗುಂಡಿಗಳ ಮೂಲಕ ಮಳೆ ನೀರನ್ನು ಇಂಗಿಸಿದರೆ, ಮರುಪೂರಣಗೊ ಳ್ಳುವುದು ಖಚಿತ ಎಂದು ಹೇಳಲಾಗಿದೆ.

ಎಸ್‌ಟಿಪಿ ಘಟಕಕ್ಕೆ ತಿಂಗಳಿಗೆ 8ರಿಂದ 9ಲಕ್ಷ ರೂ. ಕೊಟ್ಟು ಪಾರ್ಕ್‌ ನಿರ್ವಹಣೆ ಗೆಂದು ವರ್ಷಕ್ಕೆ 1 ಕೋಟಿ ರೂ.ಗಳಿಗೂ ಅಧಿಕ ಹಣ ಪಾವತಿಸುತ್ತಿರುವ ತೋಟಗಾ ರಿಕೆ ಇಲಾಖೆ ಈ ಬಾವಿಗಳ ನೀರನ್ನು ಯಥೇತ್ಛವಾಗಿ ಬಳಕೆ ಮಾಡಿಕೊಳ್ಳ ಬಹುದು. ಇದರಿಂದ ಜಲಮಂಡಳಿಗೆ ಪಾವತಿಸುತ್ತಿರುವ ಶುಲ್ಕದಲ್ಲಿ ಶೇ.60ರಿಂದ ಶೇ.70ರಷ್ಟು ಕಡಿಮೆ ಮಾಡಿಕೊಳ್ಳ ಬಹುದು ಎಂಬ ಲೆಕ್ಕಾಚಾರ ನಡೆದಿದೆ. ಇದರಿಂದ ತೋಟಗಾರಿಕೆ ಇಲಾಖೆಗೂ ಮಿತವ್ಯಯಕಾರಿಯಾಗಲಿದೆ.

ಬಾವಿಗಳ ಪುನಶ್ಚೇತನಕ್ಕೆ ಸಂಘ, ಸಂಸ್ಥೆಗಳು ಮುಂದಾಗಿದ್ದು, ಅವುಗಳಿಗೆ ಇಲಾಖೆ ಅಗತ್ಯ ನೆರವು ನೀಡಲಿದೆ. ಬಾವಿಗಳಲ್ಲಿ ನೀರಿನ ಲಭ್ಯತೆಯಿಂದ ಜಲಮಂಡಳಿಯಿಂದ ನೀರು ಖರೀದಿಸುವ ಅಗತ್ಯ ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ಬಾವಿಗಳ ಸ್ವತ್ಛತೆ ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
-ಮಹಾಂತೇಶ್‌ ಮುರುಗೋಡು, ಉಪನಿರ್ದೇಶಕ, ಕಬ್ಬನ್‌ಪಾರ್ಕ್‌ 

Advertisement

Udayavani is now on Telegram. Click here to join our channel and stay updated with the latest news.

Next