Advertisement

Madras: ಮರಿಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಮತ್ತೆ ಭೇಟಿ ಮಾಡಬಹುದು: ಹೈಕೋರ್ಟ್

05:46 PM Nov 07, 2024 | Team Udayavani |

ಚೆನ್ನೈ: ಕೊಯಮತ್ತೂರಿನಲ್ಲಿ 10 ತಿಂಗಳ ಕಾಲ ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಮರಿ ಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರ ಜತೆ ಮತ್ತೆ ಸೇರಲು ಅನುಮತಿಯನ್ನು ನೀಡಿ ಮದ್ರಾಸ್‌ ಹೈಕೋರ್ಟ್‌ (Madras High Court) ಗುರುವಾರ (ಸೆ.07) ತೀರ್ಪು ನೀಡಿದೆ.

Advertisement

ಕೊಯಮತ್ತೂರಿನಲ್ಲಿ ಹಲವು ನಾಯಿಗಳ ದಾಳಿಗೆ ಸಿಲುಕಿ ಬದುಕುಳಿದ ಮರಿ ಕೋತಿಯ ಆರೋಗ್ಯವನ್ನು ಪರಿಗಣಿಸದೆ ಇತ್ತೀಚೆಗೆ ಅರಣ್ಯ ಅಧಿಕಾರಿಗಳು ಚೆನ್ನೈನ ಅರಿಗ್ನಾರ್ ಅಣ್ಣಾ ಝೂಲಾಜಿಕಲ್‌ ಪಾರ್ಕ್‌ ಗೆ ವರ್ಗಾಯಿಸಿದ್ದಾರೆ ಎಂದು ಅರ್ಜಿದಾರರು ಕೋರ್ಟ್‌ ಗೆ ದೂರು ಸಲ್ಲಿಸಿದ್ದರು.

ಗಾಯಗೊಂಡ ಮರಿ ಕೋತಿಯು ಪೂರ್ಣವಾಗಿ ಚೇತರಿಕೊಂಡಿಲ್ಲ, ಅದಕ್ಕೆ ನಿರಂತರ ಆರೈಕೆಯ ಅಗತ್ಯವಿದೆ ಎಂದೂ ಪಶುವೈದ್ಯ ಡಾ ವೆಲ್ಲೈಯಪ್ಪನ್‌ ವಾದಿಸಿದ್ದರು. ನ್ಯಾಯಾಲಯವು ವೆಲ್ಲೈಯಪ್ಪನ್‌ ಅವರು ಶನಿವಾರ ಕೋತಿಯನ್ನು ಕಂಡು ಅದರ ಆರೋಗ್ಯದ ವರದಿಯನ್ನು ನೀಡುವಂತೆ ತಿಳಿಸಿದೆ. ಈ ವರದಿಯ ಮೇರೆಗೆ ತೀರ್ಪನ್ನು ನೀಡಲಾಗುತ್ತದೆ.

ಕಳೆದ ವರ್ಷ ಡಿಸೆಂಬರ್‌ ನಿಂದ ಈ ವರ್ಷ ಅಕ್ಟೋಬರ್‌ ನವರೆಗೆ ಪಶುವೈದ್ಯ ವೆಲ್ಲೈಯಪ್ಪನ್‌ ಕೋತಿಗೆ ಚಿಕಿತ್ಸೆ ನೀಡುತ್ತಿದ್ದರು. 15 ದಿನಗಳ ಹಿಂದೆ ಅಧಿಕಾರಿಗಳು ಕೋತಿಯನ್ನು ವನ್ಯಜೀವಿ ಪಾರ್ಕ್‌ಗೆ ಸ್ಥಳಾಂತರಿಸಿದ್ದರು. ವೈದ್ಯ ಹಾಗೂ ಕೋತಿಯ ನಡುವಿನ ಬಾಂಧವ್ಯವನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಲಯವು ತೀರ್ಪನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next