Advertisement

Retirement: ಟಿ20 ಕ್ರಿಕೆಟಿನ ನಂಬರ್‌ ವನ್‌ ಬ್ಯಾಟರ್‌ ಡೇವಿಡ್‌ ಮಲಾನ್‌ ವಿದಾಯ

11:24 PM Aug 28, 2024 | Team Udayavani |

ಲಂಡನ್‌: ಟಿ20 ಕ್ರಿಕೆಟಿನ ನಂಬರ್‌ ವನ್‌ ಬ್ಯಾಟರ್‌ ಆಗಿದ್ದ ಇಂಗ್ಲೆಂಡ್‌ನ‌ ಡೇವಿಡ್‌ ಮಲಾನ್‌ ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು.
36 ವರ್ಷದ ಡೇವಿಡ್‌ ಮಲಾನ್‌ ಇಂಗ್ಲೆಂಡ್‌ ಪರ ಮೂರೂ ಮಾದರಿಗಳಲ್ಲಿ ಶತಕ ಸಿಡಿಸಿದ ಸಾಧಕರಾಗಿದ್ದರು. “ದಿ ಟೈಮ್ಸ್‌ ಆಫ್ ಲಂಡನ್‌’ ಪತ್ರಿಕೆಯೊಂದಿಗೆ ಮಾತಾಡಿದ ಮಲಾನ್‌, “ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೇನೋ ನಿರೀಕ್ಷಿತ ಪ್ರದರ್ಶನ ನೀಡಿದ್ದೇನೆ. ಆದರೆ ಟೆಸ್ಟ್‌ ಕ್ರಿಕೆಟ್‌ನ ತೀವ್ರತೆಯನ್ನು ನಿಭಾಯಿಸಲಾಗಲಿಲ್ಲ. ಸುದೀರ್ಘ‌ ಟೆಸ್ಟ್‌ ಸರಣಿಯ ಕೊನೆಯ ಹಂತದಲ್ಲಿ ನನ್ನ ಸಾಧನೆಯ ಮಟ್ಟ ಕುಸಿಯುತ್ತಿತ್ತು’ ಎಂದಿದ್ದಾರೆ.

Advertisement

ಕಳೆದ ಏಕದಿನ ವಿಶ್ವಕಪ್‌ನಲ್ಲಿ ಅವರು ಕೊನೆಯ ಸಲ ಇಂಗ್ಲೆಂಡ್‌ ಪರ ಆಡಿದ್ದರು. ಮುಂಬರುವ ಆಸ್ಟ್ರೇಲಿಯ ಎದುರಿನ ಏಕದಿನ ಸರಣಿಗೆ ಪರಿಗಣಿಸದ ಕಾರಣ ನಿವೃತ್ತಿ ಪ್ರಕಟಿಸಿದರು.

ಡೇವಿಡ್‌ ಮಲಾನ್‌ 22 ಟೆಸ್ಟ್‌, 30 ಏಕದಿನ ಹಾಗೂ 62 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಕ್ರಮವಾಗಿ 1,074 ರನ್‌ 1,450 ಹಾಗೂ 1,892 ರನ್‌ ಬಾರಿಸಿದ್ದಾರೆ. ಟೆಸ್ಟ್‌ ಹಾಗೂ ಟಿ20ಯಲ್ಲಿ ಒಂದು, ಏಕದಿನದಲ್ಲಿ 6 ಶತಕ ಬಾರಿಸಿದ್ದಾರೆ. ಟಿ20 ಕ್ರಿಕೆಟಿನ ನಂಬರ್‌ ವನ್‌ ಬ್ಯಾಟರ್‌ ಎನಿಸಿದ್ದು, ಇಂಗ್ಲೆಂಡ್‌ನ‌ 2022ರ ಟಿ20 ವಿಶ್ವಕಪ್‌ ವಿಜೇತ ತಂಡದ ಸದಸ್ಯನಾಗಿದ್ದುದು ಮಲಾನ್‌ ಹೆಗ್ಗಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next