Advertisement

England vs Australia: ಲಿವಿಂಗ್‌ಸ್ಟೋನ್‌ ಅಬ್ಬರ; ಆಸೀಸ್‌, ಇಂಗ್ಲೆಂಡ್‌ ಟಿ20 ಸರಣಿ ಸಮಬಲ

09:29 PM Sep 14, 2024 | Team Udayavani |

ಕಾರ್ಡಿಫ್: ಲಿಯಮ್‌ ಲಿವಿಂಗ್‌ಸ್ಟೋನ್‌ ಪ್ರಚಂಡ ಆಲ್‌ರೌಂಡ್‌ ಪ್ರದರ್ಶನದೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯನ್ನು ಇಂಗ್ಲೆಂಡ್‌ 1-1ರ ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಕಾರ್ಡಿಫ್ನಲ್ಲಿ ನಡೆದ 2ನೇ ಪಂದ್ಯವನ್ನು ಇಂಗ್ಲೆಂಡ್‌ 3 ವಿಕೆಟ್‌ಗಳಿಂದ ಜಯಿಸಿತು.

Advertisement

ಆಸ್ಟ್ರೇಲಿಯಾ 6 ವಿಕೆಟಿಗೆ 193 ರನ್‌ ಪೇರಿಸಿದರೆ, ಇಂಗ್ಲೆಂಡ್‌ 19 ಓವರ್‌ಗಳಲ್ಲಿ 7 ವಿಕೆಟಿಗೆ 194 ರನ್‌ ಬಾರಿಸಿತು. ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 28 ರನ್ನುಗಳಿಂದ ಜಯಿಸಿತ್ತು. ಸರಣಿ ನಿರ್ಣಾಯಕ ಪಂದ್ಯ ಭಾನುವಾರ ಓಲ್ಡ್‌ ಟ್ರಾಫ‌ರ್ಡ್‌ನಲ್ಲಿ ನಡೆಯಲಿದೆ.

87 ರನ್‌ ಮತ್ತು 2 ವಿಕೆಟ್‌:

ದೊಡ್ಡ ಮೊತ್ತವನ್ನು ಬೆನ್ನಟ್ಟುವ ವೇಳೆ ಲಿವಿಂಗ್‌ಸ್ಟೋನ್‌ 47 ಎಸೆತಗಳಿಂದ 87 ರನ್‌ ಬಾರಿಸಿ ತಂಡವನ್ನು ದಡ ಸೇರಿಸಿದರು. ಸಿಡಿಸಿದ್ದು 5 ಸಿಕ್ಸರ್‌ ಹಾಗೂ 6 ಬೌಂಡರಿ. ಇದಕ್ಕೂ ಮುನ್ನ 16 ರನ್ನಿಗೆ 2 ವಿಕೆಟ್‌ ಉಡಾಯಿಸಿದ್ದರು.

ಸಂಕ್ಷಿಪ್ತ ಸ್ಕೋರ್‌:

Advertisement

ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 193/6 (ಮೆಕ್‌ಗರ್ಕ್‌ 50, ಇಂಗ್ಲಿಸ್‌ 42, ಲಿವಿಂಗ್‌ಸ್ಟೋನ್‌ 16ಕ್ಕೆ 2), ಇಂಗ್ಲೆಂಡ್‌ 19 ಓವರ್‌ಗಳಲ್ಲಿ 194/7 (ಲಿವಿಂಗ್‌ಸ್ಟೋನ್‌ 87, ಬೆಥೆಲ್‌ 44, ಅಬೋಟ್‌ 37ಕ್ಕೆ 2)

ಪಂದ್ಯಶ್ರೇಷ್ಠ: ಲಿಯಮ್‌ ಲಿವಿಂಗ್‌ಸ್ಟೋನ್‌.

 

Advertisement

Udayavani is now on Telegram. Click here to join our channel and stay updated with the latest news.