Advertisement

England Cricket; ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ಮೊಯಿನ್‌ ಅಲಿ

11:13 AM Sep 08, 2024 | Team Udayavani |

ಲಂಡನ್:‌ ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ ರೌಂಡರ್‌ ಮೊಯಿನ್‌ ಅಲಿ (Moeen Ali) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ದದ ಸೀಮಿತ ಓವರ್‌ ಕ್ರಿಕೆಟ್‌ ಸರಣಿಗೆ ತಮ್ಮನ್ನು ಕೈಬಿಟ್ಟ ಬಳಿಕ ಅಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

Advertisement

ಐಸಿಸಿ ಪುರುಷರ ಟಿ20 ವಿಶ್ವಕಪ್‌ ನ ಜೂನ್ 27 ರಂದು ಗಯಾನಾದಲ್ಲಿ ನಡೆದ ಭಾರತದ ವಿರುದ್ಧ ಸೆಮಿಫೈನಲ್‌ ನಲ್ಲಿ ಇಂಗ್ಲೆಂಡ್‌ ಪರವಾಗಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.

37 ವರ್ಷದ ಮೊಯಿನ್‌ ಅಲಿ ಅವರು ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯಲು ಮತ್ತು ಯುವಕರು ಇಂಗ್ಲೆಂಡ್ ಕ್ರಿಕೆಟ್‌ನ ಹಿಡಿತವನ್ನು ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು ಹೇಳಿದ್ದಾರೆ.

‘ಇಂಗ್ಲೆಂಡ್ ಪರ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಇದು ಮುಂದಿನ ಪೀಳಿಗೆಯ ಸಮಯ, ಅದನ್ನು ನನಗೆ ವಿವರಿಸಲಾಗಿದೆ. ಸಮಯ ಸರಿಯಿದೆ ಅನ್ನಿಸಿತು” ಎಂದು 2014ರಲ್ಲಿ ಇಂಗ್ಲೆಂಡ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದ್ದ ಮೊಯಿನ್ ಹೇಳಿದರು.

Advertisement

ಎಡಗೈ ಬ್ಯಾಟರ್‌ ಮತ್ತು ಸ್ಪಿನ್‌ ಬೌಲರ್‌ ಆಗಿದ್ದ ಅಲಿ ಇಂಗ್ಲೆಂಡ್‌ ಪರ ಮೂರು ಮಾದರಿ ಕ್ರಿಕೆಟ್‌ ಆಡಿದ್ದಾರೆ. ಅವರು 68 ಟೆಸ್ಟ್, 138 ಏಕದಿನ ಮತ್ತು 92 ಟಿ20 ಪರವಾಗಿ ಆಡಿದ್ದಾರೆ. ಅವರು ಇಂಗ್ಲೆಂಡ್‌ ಪರವಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ 6678 ರನ್‌ ಗಳು, ಎಂಟು ಶತಕಗಳು, 28 ಅರ್ಧಶತಕಗಳು ಮತ್ತು 366 ವಿಕೆಟ್‌ಗಳೊಂದಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪೂರ್ಣಗೊಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ ತೊರೆದರೂ, ತಾನು ಫ್ರಾಂಚೈಸಿ ಕ್ರಿಕೆಟ್‌ ನಲ್ಲಿ ಮುಂದುವರಿಯುವುದಾಗಿ ಮೊಯಿನ್‌ ಅಲಿ ಹೇಳಿದರು. ಮೊಯಿನ್ ಪ್ರಸ್ತುತ ಸಿಪಿಎಲ್ 2024 ರಲ್ಲಿ ಹಾಲಿ ಚಾಂಪಿಯನ್ ಗಯಾನಾ ಅಮೆಜಾನ್ ವಾರಿಯರ್ಸ್‌ ಪರ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.