ಬೆಳ್ಮಣ್: 39 ವರ್ಷಗಳ ಶಿಕ್ಷಕ ವೃತ್ತಿಜೀವನ ನಡೆಸಿ ವಯೋನಿವೃತ್ತಿ ಹೊಂದಿದ ಬಿ. ಪುಂಡಲೀಕ ಮರಾಠೆಯವರಿಗೆ ಬೆಳ್ಮಣ್ ಸಂತ ಜೋಸೆಫ್ ಹಿ.ಪ್ರಾ. ಶಾಲೆಯಲ್ಲಿ ಸೋಮವಾರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿ ಹೆತ್ತವರು, ಬೆಳ್ಮಣ್‌ನ ಸಾರ್ವಜನಿಕ ಸಮಾಜ ಸೇವಾ ಸಂಘಟನೆಗಳು, ನಾಗರಿಕರು ಸಂಯುಕ್ತ ವಾಗಿ ಏರ್ಪಡಿಸಿದ ಸಮ್ಮಾನ, ಬೀಳ್ಕೊಡುಗೆ ಸಮಾ ರಂಭದಲ್ಲಿ ಪುಂಡಲೀಕ ಮರಾಠೆ ಹಾಗೂ ಉಷಾ ಮರಾಠೆ ದಂಪತಿಯನ್ನು ಗೌರವಿಸಲಾಯಿತು.
ಶಾಲಾ ಸಂಚಾಲಕರು ಹಾಗೂ ಬೆಳ್ಮಣ್ ಸಂತ ಜೋಸೆಫ್ ಧರ್ಮಕೇಂದ್ರದ ಹಿರಿಯ ಧರ್ಮಗುರುಗಳಾದ ರೆ|ಫಾ| ಎಡ್ವಿನ್ ಡಿ’ಸೋಜಾ ಆಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಮಾಜಿ ಸಂಚಾಲಕ ರೆ|ಫಾ| ಲಾರೆನ್ಸ್ ಬಿ’ಡಿಸೋಜಾ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕ್ಸೇವಿಯರ್ ಡಿಮೆಲ್ಲೊ ,ರೆ|ಫಾ|ವಿಲ್ಸನ್ ಡಿಸೋಜ, ರೆ|ಫಾ| ಲೂವಿಸ್ ಡೇಸಾ, ರೆ|ಫಾ| ಲಾರೆನ್ಸ್ ರೊಡ್ರಿಗಸ್, ಗ್ರೆಗರಿ ಮಿನೇಜಸ್, ಸಿಲ್ವೆಸ್ಟರ್ ಡಿಮೆಲ್ಲೊ, ಪ್ರೊ| ರಾಬರ್ಟ್ ಡಿ’ಸೋಜಾ, ಮಲ್ಲಿಕಾ ರಾವ್, ಆಶಾದೇವೇಂದ್ರ ಶೆಟ್ಟಿ, ದೇವೇಂದ್ರ ಶೆಟ್ಟಿ, ಪ್ರಕಾಶ್‌ಚಂದ್ರ, ರವಿರಾಜ್ ಶೆಟ್ಟಿ, ಸಿಸ್ಟರ್ ಮೋನಿಕಾ ಮೊಂತೇರೊ, ಸಿಸ್ಟರ್ ಉಷಾ ಸ್ಟೆಲ್ಲಾ, ಪ್ರಭಾಕರ ಶೆಟ್ಟಿ, ಎರಿಕ್ ಒಝೇರಿಯೊ, ಕುಂದಾಪುರ ನಾರಾಯಣ ಖಾರ್ವಿ, ರೊಯ್ ಕೆಸ್ತಲಿನೊ, ಪ್ರೊ| ವೈ.ಭಾಸ್ಕರ ಶೆಟ್ಟಿ, ಶಂಭುದಾಸ್ ಗುರೂಜಿ, ಕಡಾರಿ ರವೀಂದ್ರ ಪ್ರಭು, ದೇವೇಂದ್ರ ನಾಯಕ್, ಜಯರಾಮ ಪ್ರಭು, ಎಸ್.ಕೆ.ಸಾಲಿಯಾನ್, ಸೂರ್ಯಕಾಂತ್ ಶೆಟ್ಟಿ, ಲಕ್ಷ್ಮೀಕಾಂತ್ ಭಟ್, ವಿ.ಕೆ. ರಾವ್ ನಂದಳಿಕೆ, ಪƒಥ್ವಿರಾಜ್ ಜೈನ್, ಲವಿನಾ ಪಿಂಟೊ, ದಿವ್ಯಾ, ಪತ್ರಕರ್ತರ ಸಂಘದ ಪದಾ ಧಿಕಾರಿಗಳು, ವಿವಿಧ ಸಂಘಟನೆಗಳ ಪದಾ ಧಿಕಾರಿಗಳು ಉಪಸ್ಥಿತರಿದ್ದರು.
ಗುರುವಿಗೆ ಸಮ್ಮಾನ
ತನ್ನ ಬಾಲ್ಯದ ಒಂದನೇತರಗತಿಯಲ್ಲಿ ಅಕ್ಷರಾಭ್ಯಾಸ ಕಲಿಸಿದ ಪ್ರಸ್ತುತ 80 ರ ಹರೆಯದ ನಿವೃತ್ತ ಶಿಕ್ಷಕಿ ಲೀಲಾವತಿ ಲಕ್ಷ್ಮೀನಾರಾಯಣ ಪಾಟ್ಕರ್ ಅವರನ್ನು ಸಮ್ಮಾನಿಸಿದರು. ತನ್ನ ಆಧ್ಯಾತ್ಮಗುರು ಶ್ರೀಕ್ಷೇತ್ರ ಬಂಟಕಲ್ಲು ದೇವಳದಲ್ಲಿ 75 ವರ್ಷಗಳಿಂದ ಅರ್ಚಕರಾಗಿ ವಯೋನಿವೃತ್ತಿ ಹೊಂದಿದ 88ರ ಹರೆಯದ ವೇದಮೂರ್ತಿ ಕೆ.ವೇದವ್ಯಾಸರಾಯ ಭಟ್‌ರವರನ್ನು ಗೌರವಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ಬಂಟಕಲ್ಲು, ಕಾರ್ಕಳದ ಹಿರ್ಗಾನ ಕಾನಂಗಿ ಮಂಗಿಲಾರು, ಬೆಳ್ಮಣ್ ಸಂತ ಜೋಸೆಫ್ ಶಾಲೆಯಲ್ಲಿ ಸಹೋದ್ಯೋಗಿಗಳಾಗಿ ಸೇವೆ ನೀಡಿದ ಎಲ್ಲ ಶಿಕ್ಷಕರನ್ನು ಪುಷ್ಪ ನೀಡಿ ಗೌರವಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಲೂಸಿ ಪಿರೇರಾ ಸ್ವಾಗತಿಸಿ, ಜುಲಿಯಾನಾ ಮೊರಾಸ್ ಸಮ್ಮಾನಪತ್ರ ವಾಚಿಸಿದರು. ವಿದ್ಯಾರ್ಥಿನಿ ದಿಶಾ ಯು.ಶೆಟ್ಟಿ,ಶಿಕ್ಷಕ ವಿನ್ಸೆಂಟ್ ಪಿಂಟೊ ಶುಭ ಕೋರಿದರು. ಶಿಕ್ಷಕಿ ಲಿಲ್ಲಿ ಡಿ’ಸೋಜಾ ವಂದಿಸಿದರು.ವಿನ್ಸೆಂಟ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.