Advertisement

ಮೀಸಲಾತಿ ಪಟ್ಟಿ ಪ್ರಕಟ

12:13 PM Aug 03, 2018 | |

ಮಹಾನಗರ : ರಾಜ್ಯ ಚುನಾವಣ ಆಯೋಗವು ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2018ಕ್ಕೆ ಸಂಬಂಧಿಸಿ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

Advertisement

ಮೂಲ್ಕಿ ನಗರ ಸಭೆ: 18 ವಾರ್ಡ್‌
ಈವರೆಗೆ ಮೂಲ್ಕಿ ನಗರ ಪಂಚಾಯತ್‌ಗೆ 17 ಸದಸ್ಯರ ಬಲವಿದ್ದ ಆಡಳಿತಕ್ಕೆ ಕಾರ್ನಾಡು ಸದಾಶಿವ ರಾವ್‌ ನಗರ ವ್ಯಾಪ್ತಿಗೆ ಒಂದು ಸದಸ್ಯ ಬಲವನ್ನು ಹೆಚ್ಚಿಸಿ ಸರಕಾರ 18 ವಾರ್ಡ್‌ಗಳ ಚುನಾವಣ ಮೀಸಲಾತಿಯನ್ನು ಪ್ರಕಟಿಸಿದೆ.

16 ಸದಸ್ಯ ಬಲದ ಮೂಲ್ಕಿ ನಗರ ಪಂಚಾಯತ್‌ ಕಾರ್ನಾಡು ಗ್ರಾಮದ ಒಂದು ಭಾಗವಾಗಿರುವ ಕಾರ್ನಾಡು ಸದಾಶಿವ ರಾವ್‌ ನಗರದಲ್ಲಿ ಜನ ಸಂಖ್ಯೆಯ ಆಧಾರದ ಮೇಲೆ ಒಂದು ವಾರ್ಡ್‌ ಹೆಚ್ಚುವರಿಯಾಗಿ ಸೃಷ್ಠಿಸುವ ಮೂಲಕ ನ.ಪಂ. ವ್ಯಾಪ್ತಿಯಲ್ಲಿ ಒಟ್ಟು 18 ಸದಸ್ಯರ ಸಂಖ್ಯಾಬಲವನ್ನು ಪಡೆದಿದೆ.

ಉಳ್ಳಾಲ ನಗರ ಸಭೆ: 31 ವಾರ್ಡ್‌
ಇಲ್ಲಿ 31 ವಾರ್ಡ್‌ಗಳ ವಾರ್ಡುವಾರು ಮೀಸಲಾತಿಯ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು ಆ. 29ರಂದು ಉಳ್ಳಾಲ ನಗರಸಭೆಗೆ ಚುನಾವಣೆ ನಡೆಯಲಿದೆ. ನಗರಸಭೆ ವ್ಯಾಪ್ತಿಯಲ್ಲಿರುವ 31 ವಾರ್ಡ್‌ಗಳಲ್ಲಿ 10 ಸಾಮಾನ್ಯ, 9 ಸಾಮಾನ್ಯ ಮಹಿಳೆ 1ಹಿಂದುಳಿದ ವರ್ಗ(ಬಿ,) ಮಹಿಳೆ, 1 ಹಿಂದುಳಿದ ವರ್ಗ(ಬಿ,), 4 ಹಿಂದುಳಿದ ವರ್ಗ (ಎ.), 4 ಹಿಂದುಳಿದ ವರ್ಗ (ಎ.) ಮಹಿಳೆ , 1 ಪರಿಶಿಷ್ಟ ಪಂಗಡ, 1 ಪರಿಶಿಷ್ಟ ಜಾತಿಗೆ ಮೀಸಲಾತಿ ನೀಡಲಾಗಿದೆ.

ಉಳ್ಳಾಲ ನಗರಸಭೆಗೆ ಮೊದಲ ಚುನಾವಣೆ 
ನಗರ ಪಂಚಾಯತ್‌ ಆಗಿದ್ದ ಉಳ್ಳಾಲ ಇದೀಗ ನಗರಸಭೆಯಾಗಿ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದೆ. ಹಿಂದಿನ ಚುನಾವಣೆ ಉಳ್ಳಾಲ ಪುರಸಭೆಗೆ ನಡೆದಿದ್ದು 27 ಸದಸ್ಯಬಲವಿದ್ದರೆ ಮೇಲ್ದರ್ಜೆಗೇರಿರುವ ಉಳ್ಳಾಲ ನಗರ ಸಭೆಯಲ್ಲಿ 31 ಸದಸ್ಯ ಬಲವನ್ನು ಹೊಂದಲಿದ್ದು, ನಾಲ್ಕು ಮಂದಿಗೆ ಹೆಚ್ಚುವರಿ ಅವಕಾಶ ಲಭಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next