Advertisement

ಫ್ಲೆಕ್ಸ್ ಬ್ಯಾನರ್‌ಗಳಿಗೆ ಕಡಿವಾಣ ಹಾಕಲು ಮನವಿ

02:47 PM Apr 12, 2022 | Team Udayavani |

ಸಿರುಗುಪ್ಪ: ನಗರದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಕೆ.ಸುಶೀಲಮ್ಮ ಅಧ್ಯಕ್ಷತೆಯಲ್ಲಿ ಸರ್ವಸದಸ್ಯರ ಸಾಮಾನ್ಯ ಸಭೆ ಸೋಮವಾರ ನಡೆಯಿತು.

Advertisement

ನಗರದಲ್ಲಿ ಬೇಕಾಬಿಟ್ಟಿಯಾಗಿ ಅಳವಡಿಸುವ ಫ್ಲೆಕ್ಸ್‌, ಬ್ಯಾನರ್‌ಗಳಿಗೆ ಕಡಿವಾಣ ಹಾಕಬೇಕು, ಎಲ್ಲೆಂದರಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸುವುದರಿಂದ ಅಪಘಾತಗಳು ನಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಸಲು ಜಾಗಗಳನ್ನು ನಿಗದಿ ಮಾಡಬೇಕೆಂದು ಸದಸ್ಯರಾದ ಮುರಳಿಮೋಹನ್‌ರೆಡ್ಡಿ, ಮೇಕೇಲಿ ವೀರೇಶ, ರಾಮಕೃಷ್ಣ, ಮಲ್ಲಿಕಾರ್ಜುನ, ಮಂಜುನಾಥ ಒತ್ತಾಯಿಸಿದರು.

ಪೌರಾಯುಕ್ತ ಪ್ರೇಮ್‌ಚಾರ್ಲ್ಸ್‌ ಮಾತನಾಡಿ, ನಗರದ ಗಾಂಧಿವೃತ್ತದಲ್ಲಿ ಯಾವುದೇ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗುವುದು. ಸದ್ಯ ಗಾಂಧಿ ಪ್ರತಿಮೆ ಕಾಣದಂತೆ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಗಾಂಧಿ ವೃತ್ತವು ಪ್ರಮುಖ ಕೂಡು ರಸ್ತೆಯ ವೃತ್ತವಾಗಿದ್ದು, ಬ್ಯಾನರ್‌ ಅಳವಡಿಕೆಯಿಂದ ಅಪಘಾತಗಳಾಗುವ ಸಾಧ್ಯತೆ ಇರುತ್ತದೆ, ಆದ್ದರಿಂದ ನಗರದ ಟಿಪ್ಪುಸುಲ್ತಾನ್‌ ವೃತ್ತ, ಬಸ್‌ಸ್ಟಾಂಡ್‌ ಮುಂದುಗಡೆ, ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದ ಮುಂದೆ, ತಾಲೂಕು ಕ್ರೀಡಾಂಗಣದ ಮುಂದೆ ಫ್ಲೆಕ್ಸ್‌,ಬ್ಯಾನರ್‌ಗಳನ್ನು ಅಳವಡಿಸಲು ಸ್ಥಳ ನಿಗದಿಪಡಿಸಲಾಗುವುದು, ಇದಕ್ಕೆ ಸರ್ವಸದಸ್ಯರು ಅನುಮತಿ ನೀಡಬೇಕೆಂದು ಹೇಳಿದರು.

ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವವರು ಕಡ್ಡಾಯವಾಗಿ ರಸೀದಿಯನ್ನು ಪಡೆದು ಅದನ್ನು ಬ್ಯಾನರ್‌ನಲ್ಲಿ ಪ್ರಕಟಿಸಬೇಕು. ಅನುಮತಿ ಪಡೆದ ದಿನದಷ್ಟು ಮಾತ್ರ ಬ್ಯಾನರ್‌ ಗಳು ಇರಬೇಕು. ನಂತರ ಅವನ್ನು ತೆರವುಗೊಳಿಸಬೇಕು, ಈಬಗ್ಗೆ ಬ್ಯಾನರ್‌ ಅಳವಡಿಸುವವರಿಗೆ ಕಡ್ಡಾಯವಾಗಿ ಸೂಚನೆ ನೀಡಿ ಎಂದು ಸದಸ್ಯ ಮುರಳಿ ಮೋಹನ ರೆಡ್ಡಿ ಒತ್ತಾಯಿಸಿದರು.

ಫ್ಲೆಕ್ಸ್‌, ಬ್ಯಾನರ್‌ ಅಳವಡಿಸುವವರು ಕಡ್ಡಾಯವಾಗಿ ನಗರಸಭೆಯಿಂದ ಅನುಮತಿಯನ್ನು ಪಡೆಯಬೇಕು, ಇಂತಿಷ್ಟು ದಿನಕ್ಕೆ ಇಂತಿಷ್ಟು ಹಣವನ್ನು ನಿಗಮಾಡಲಾಗಿದೆ. ಆ ಹಣವನ್ನು ತುಂಬಿದವರಿಗೆ ಮಾತ್ರ ಬ್ಯಾನರ್‌ ಅಳವಡಿಸಲು ಅವಕಾಶ ಮಾಡಿಕೊಡುವುದಾಗಿ ಪೌರಾಯುಕ್ತರು ತಿಳಿಸಿದರು.

Advertisement

ಕುಡಿಯುವ ನೀರು, ಚರಂಡಿ ದುರಸ್ತಿ ಕುರಿತು, 2021-22ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಕೈಗೆತ್ತಿಕೊಳ್ಳಬೇಕಾದ ಕಾಮಗಾರಿಗಳಿಗೆ ಅನುಮತಿ ನೀಡುವ ಬಗ್ಗೆ ಹಾಗೂ ನಿವೃತ್ತ ಯೋಧರೊಬ್ಬರಿಗೆ ನಿವೇಶನ ನೀಡುವ ಕುರಿತು ಚರ್ಚೆನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next