ಬೆಂಗಳೂರು: ನಾರಾಯಣ ಗುರು, ಭಗತ್ ಸಿಂಗ್ ರನ್ನ ಪಠ್ಯದಿಂದ ತೆಗೆದು ಹಾಕಿಲ್ಲ. ಕೆಲವರು ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಗುರುವಾರ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಡ್ಗೆವಾರ್ ಭಾಷಣವನ್ನ ಪಠ್ಯದಲ್ಲಿ ಸೇರಿಸಿದರೆ ತಪ್ಪೇನಿದೆ ? ಅಷ್ಟಕ್ಕೂ ಕಾಂಗ್ರೆಸ್ ಗೆ ಹೆಡ್ಗೆವಾರ್ ಕಂಡರೆ ಭಯ ಯಾಕೆ ? ಎಂದು ಪ್ರಶ್ನಿಸಿದರು.
ಹೆಡ್ಗೆವಾರ್ ಅವರ ಪ್ರೇರಣೆಯಿಂದಲೇ ಕೋಟ್ಯಂತರ ಜನ ದೇಶಪ್ರೇಮದ ಕೆಲಸ ಮಾಡುತ್ತಿದ್ದಾರೆ. ಅವರ ಪ್ರೇರಣೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಅದು ನಮ್ಮ ಬದ್ಧತೆ ಎಂದರು.
ಪಠ್ಯದಿಂದ ನಾರಾಯಣ ಗುರುಗಳನ್ನ ಕೈಬಿಟ್ಟಿಲ್ಲ, ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಬಗ್ಗೆ ನಾನೇ ಸ್ವತಃ ಶಿಕ್ಷಣ ಸಚಿವರು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನ್ನಾಡಿದ್ದೇನೆ ಎಂದರು.
ಇದನ್ನೂ ಓದಿ : ಆರ್ ಎಸ್ಎಸ್ ಬಗ್ಗೆ ಮಾತಾಡದಿದ್ದರೆ ಕಾಂಗ್ರೆಸ್ ಗೆ ನಿದ್ದೆ ಬರಲ್ಲ: ಹಾಲಪ್ಪ ಆಚಾರ್
ಚಕ್ರವರ್ತಿ ಸೂಲಿಬೆಲೆ ಅವರು ತಾಯಿ ಭಾರತಿಗೆ ವಂದಿಸುವೆ ಎಂದು ಲೇಖನ ಬರೆದಿದ್ದಾರೆ. ಅದರಲ್ಲಿ ತಪ್ಪೇನಿದೆ? ತಾಯಿ ಭಾರತಿ ಎಂಬ ವಿಚಾರವನ್ನೂ ವಿರೋಧಿಸುವುದು ಯಾಕೆ? ಎಂದು ಪ್ರಶ್ನಿಸಿದರು.