Advertisement

ಗೃಹಸ್ಥರಿಂದಲೇ ಧರ್ಮ ಉಳಿವು

05:29 PM Apr 16, 2018 | Team Udayavani |

ಹುಬ್ಬಳ್ಳಿ: ಧರ್ಮ ಇರುವುದು ಗೃಹಸ್ಥರಿಗೆ ಮಾತ್ರ. ಗೃಹಸ್ಥರಿಂದ ಧರ್ಮ ಉಳಿಯುತ್ತದೆ, ಸನ್ಯಾಸಿಗಳಿಂದಲ್ಲ ಎಂದು ಮುಂಡರಗಿ ತೋಂಟದಾರ್ಯ ಶಾಖಾಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ವೀರಾಪುರ ರಸ್ತೆಯಲ್ಲಿರುವ ಶ್ರೀ ಗುರು ಬಸವ ಮಂಟಪದಲ್ಲಿ ವಿಶ್ವಗುರು ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಸವಣ್ಣ ಸ್ಥಾಪಿಸಿದ ಗೃಹಸ್ಥ ಧರ್ಮ. ಧರ್ಮ ಇರುವುದು ಗೃಹಸ್ಥರಿಗೆ. ಪ್ರವಾದಿ ಪೈಗಂಬರರು, ಬಸವಣ್ಣನವರ ಗೃಹಸ್ಥರಾಗಿದ್ದರು. ಅವರಿಂದಲೇ ಧರ್ಮ ಉಳಿದಿರುವುದು ಬೆಳೆದಿರುವುದು ಎಂದರು.

ಪ್ರಜಾಪ್ರಭುತ್ವ ಕ್ಕೆ ಇನ್ನೊಂದು ಹೆಸರು ಬೇಕಾಗಿದೆ ಅದು ಲಿಂಗಾಯತ. ಈ ಕುರಿತು ಎಲ್ಲರಿಗೆ ಸ್ಪಷ್ಟತೆ ಇದೆ. ಆದರೂ ಧೈರ್ಯ ಮಾಡುತ್ತಿಲ್ಲ. ಇಂದಿನ ಸ್ಥಿತಿ ನೋಡಿ ಬಸವಣ್ಣನು ನೆನೆಸಿದರೆ ಅಯ್ಯೋ ಎನಿಸುತ್ತಿದೆ. ಎಲ್ಲೊ  ಒಂದು ಕಡೆ ಬಸವಣ್ಣ ಒಬ್ಬನೇ ಆಗಿದ್ದಾ ನೆ. ಬಸವಣ್ಣ ಎಲ್ಲರಿಗೂ ಬೇಕು.
ಅವನಿಲ್ಲದೆ ಏನೂ ಇಲ್ಲ. ಸಂಕ್ರಮಣ ಕಾಲದಲ್ಲಿ ಬಸವಣ್ಣನವರು ನಿಂತಿದ್ದಾರೆ ಎಂದರು.

ಇಂದು ಕೆಲ ಮಠಗಳಲ್ಲಿ ಅಣ್ಣ, ಅಕ್ಕ, ತಂಗಿಯರನ್ನು ಮಠದ ವ್ಯವಸ್ಥಾಪಕರನ್ನಾಗಿ ಮಾಡಿಕೊಳ್ಳಾಗಿದೆ. ಇಂದಿನ ಸಮಾಜದಲ್ಲಿರುವ ಮೂಢನಂಬಿಕೆ, ಅಂಧಶ್ರದ್ಧೆಯಿಂದ ಎಲ್ಲರೂ ಹೊರ ಬರಬೇಕಾಗಿದೆ. ಧಾರ್ಮಿಕ ಮುಖಂಡರು ದಾರಿ ತಪ್ಪಿದಾಗ ಸಮಾಜವೇ ಅವರನ್ನು ಸರಿದಾರಿಗೆ ತರಬೇಕು ಎಂದರು.

ಚಿಂತಕ ಸಿದ್ದಣ್ಣ ಲಂಗೋಟಿ ಅವರು ವಿಶ್ವಗುರು ಬಸವೇಶ್ವರರ ಸಾರ್ವಕಾಲಿಕ ಸಂದೇಶದ ಕುರಿತು ಅನುಭಾವ ನೀಡಿದರು. ಬಸವ ಕಿರಣ ಕಾರ್ಯಕ್ರಮ ಉದ್ಘಾಟಿಸಿದರು. ಚಂದ್ರಶೇಖರ ಕರವೀರಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಲಿಂಗಶೆಟ್ಟರ, ಸುಲೋಚನಾ ಭೂಸನೂರ, ಅನಸೂಯಾ ಸಾದರಹಳ್ಳಿ, ರಾಮನಗೌಡ್ರ ಪಾಟೀಲ, ಜಿ.ಸಿ.ಹರ್ತಿ, ಶಶಿಧರ ಹರ್ತಿ ಸೇರಿದಂತೆ ಮೊದಲಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next