ನವದೆಹಲಿ: ಜಿಯೋ ಟೆಲಿಕಾಂ ಸಂಸ್ಥೆ ತನ್ನ ಮೊಬೈಲ್ ಸೇವೆಗಳ ಮೇಲಿನ ದರವನ್ನು ಶೇ.12ರಿಂದ ಶೇ.27 ರಷ್ಟು ಏರಿಕೆ ಮಾಡಿದೆ
ಎಂದು ಸಂಸ್ಥೆ ಅಧ್ಯಕ್ಷ ಆಕಾಶ್ ಅಂಬಾನಿ ತಿಳಿಸಿದ್ದಾರೆ. ಜಿಯೋನ ಎಲ್ಲ ಪ್ಲ್ಯಾನ್‌ನ ದರಗಳನ್ನು ಏರಿಸಲಾಗಿದೆ. ಜು.3ರಿಂದ ಪರಿಷ್ಕೃತ ದರ ಅನ್ವಯವಾಲಿದೆ .
ಇದನ್ನೂ ಓದಿ:Land Scam Case: 6 ತಿಂಗಳ ಬಳಿಕ ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್‌ಗೆ ಜಾಮೀನು
ಒಂದು ತಿಂಗಳ 155 ರೂ. ಪ್ಲ್ಯಾನ್ ನ ಬೆಲೆ 189 ರೂ.ಗೆ ಏರಿಕೆಯಾಗಿದೆ. ಎರಡು ತಿಂಗಳ 470 ರೂ. ಪ್ಲ್ಯಾನ್ ಅನ್ನು 579 ರೂ.ಗೆ ಹೆಚ್ಚಳ ಮಾಡಲಾಗಿದೆ. 3 ತಿಂಗಳ 395 ರೂ. ಪ್ಲ್ಯಾನ್ ಅನ್ನು 479 ರೂ.ಗೆ ಏರಿಕೆಯಾಗಿದೆ.
ಅದರಂತೆ 1 ಜಿಬಿ ಡೇಟಾ 15ರೂ.ನಿಂದ 19ರೂ.ಗೆ ಏರಿಸಲಾಗಿದೆ. 399ರೂ.ನ 75 ಜಿಬಿ ಪೋಸ್ಟ್ ಪೇಯ್ಡ ಪ್ಲ್ಯಾನ್ ಬೆಲೆ 449 ರೂ.ಗೆ, 666 ರೂ.ನ 84 ದಿನಗಳ ಅನ್‌ಲಿಮಿಟೆಡ್ ಪ್ಲ್ಯಾನ್ 799ರೂ.ಗೆ, ವಾರ್ಷಿಕ ರಿಚಾರ್ಜ್ ದರ 1,559ರೂ. ನಿಂದ 1,899ರೂ. 2,999ರೂ.ನಿಂದ 3,599ರೂ.ಗೆ ಏರಿಸಲಾಗಿದೆ.