Advertisement

Relay: 0.32 ಸೆಕೆಂಡ್‌ಗಳಿಂದ ಫೈನಲ್‌ನಿಂದ ಹೊರಗುಳಿದ ಭಾರತದ ಪುರುಷರ ತಂಡ

01:28 AM Aug 10, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಎರಡೂ ರಿಲೇ ತಂಡಗಳು ಫೈನಲ್‌ ಅರ್ಹತೆ ಸಂಪಾದಿಸುವಲ್ಲಿ ವಿಫ‌ಲವಾಗಿವೆ. ಅದರಲ್ಲೂ ಪುರುಷರ ತಂಡ ಕೇವಲ 0.32 ಸೆಕೆಂಡ್‌ಗಳಿಂದ ಫೈನಲ್‌ ಅವಕಾಶವನ್ನು ಕಳೆದುಕೊಂಡಿತು. ಅದು 4ಗಿ400 ಮೀ. ರಿಲೇ ಹೀಟ್‌ ರೇಸ್‌ನಲ್ಲಿ 10ನೇ ಸ್ಥಾನಿಯಾದರೆ, ವನಿತಾ ತಂಡ 15ನೇ ಸ್ಥಾನಕ್ಕೆ ಕುಸಿಯಿತು.

Advertisement

ಮುಹಮ್ಮದ್‌ ಅನಾಸ್‌ ಯಾಹಿಯಾ, ಮುಹಮ್ಮದ್‌ ಅಜ್ಮಲ್‌, ಅಮೋಜ್‌ ಜಾಕೋಬ್‌ ಮತ್ತು ರಾಜೇಶ್‌ ರಮೇಶ್‌ ಅವರನ್ನೊಳಗೊಂಡ ಪುರುಷರ ರಿಲೇ ತಂಡ ಹೀಟ್‌ ನಂ.2ರಲ್ಲಿ ಸ್ಪರ್ಧೆಗೆ ಇಳಿದಿತ್ತು. ಸೀಸನ್‌ನಲ್ಲೇ ಅತ್ಯುತ್ತಮವೆನಿಸಿದ 3 ನಿಮಿಷ, 0.58 ಸೆಕೆಂಡ್‌ಗಳ ಸಾಧನೆಯನ್ನು ದಾಖಲಿಸಿಯೂ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಹೀಟ್‌-2ರಲ್ಲಿ ಮೊದಲ 3 ಸ್ಥಾನ ಪಡೆದ ತಂಡಗಳೆಂದರೆ ಫ್ರಾನ್ಸ್‌ (2:59.53), ಬೆಲ್ಜಿಯಂ (2.59.84) ಮತ್ತು ಇಟಲಿ (3:00.26). ಪ್ರತೀ ಹೀಟ್‌ನಲ್ಲಿ ಮೊದಲ 3 ಸ್ಥಾನ ಪಡೆದ ತಂಡಗಳು ಫೈನಲ್‌ ಅರ್ಹತೆ ಪಡೆಯುತ್ತವೆ.

ಭಾರತ ತಂಡ ಏಷ್ಯನ್‌ ದಾಖಲೆಯನ್ನು ಹೊಂದಿತ್ತು (2:59.05). 2023ರ ಬುಡಾಪೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆಗೈದಿತ್ತು. ಆದರೆ ಪ್ಯಾರಿಸ್‌ನಲ್ಲಿ ಇದಕ್ಕೂ ಕಳಪೆ ಪ್ರದರ್ಶನ ನೀಡಿತು.

ವನಿತೆಯರಿಗೂ ಹಿನ್ನಡೆ
ಕರಾವಳಿ ಕನ್ನಡತಿ ಎಂ.ಆರ್‌. ಪೂವಮ್ಮ ಅವರನ್ನೊಳಗೊಂಡ ವನಿತಾ ರಿಲೇ ತಂಡ ಹೀಟ್‌-2ರಲ್ಲಿತ್ತು. ಉಳಿದ ಸದಸ್ಯರೆಂದರೆ ವಿಥ್ಯಾ ರಾಮರಾಜ್‌, ಜ್ಯೋತಿಕಾಶ್ರೀ ದಾಂಡಿ ಮತ್ತು ಶುಭಾ ವೆಂಕಟೇಶನ್‌. ಇವರು 3 ನಿಮಿಷ, 32.51 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 8ನೇ ಸ್ಥಾನಿಯಾದರು. ಒಟ್ಟಾರೆಯಾಗಿ 15ನೇ ಸ್ಥಾನಕ್ಕೆ ಕುಸಿದರು.

Advertisement

Udayavani is now on Telegram. Click here to join our channel and stay updated with the latest news.

Next