ತಿಪಟೂರು: ಸ್ತನ್ಯಪಾನ ಮಾಡಿಸುವುದು ನೈಸರ್ಗಿಕ ಕ್ರಿಯೆಯಾಗಿದ್ದು, ಮಗುವು ಮುಂದೆ ಸಧೃಢ ಹಾಗೂ ಸತøಜೆಯಾಗಿ ಬೆಳೆಯಲು ತಾಯಿಯ ಎದೆಹಾಲು ಅತ್ಯಂತ ಅವಶ್ಯಕವಾಗಿದ್ದು, ತಪ್ಪದೆ ತಾಯಂದಿರು ತಮ್ಮ ಮಕ್ಕಳಿಗೆ ಎದೆಹಾಲು ನೀಡಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಬಿ.ಎನ್.ಪ್ರೇಮಾ ಹೇಳಿದರು. ತಾಲೂಕಿನ ಹೊನ್ನವಳ್ಳಿಯ ಐಟಿಐ ಕಾಲೇಜಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಪೋಷಣ್
ಅಭಿಯಾನ ಯೋಜನೆಯಡಿ ನವಜಾತ ಶಿಶುಗಳಿಗೆ ಸ್ತನ್ಯಪಾನ ಉಣಿಸುವ ವಿಧಾನಗಳ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಪೌಷ್ಟಿಕತೆ ಹೋಗಲಾಡಿಸಲು ಹಾಗೂ ಮಗುವಿನ ಆರೋಗ್ಯ ಸುಧಾರಣೆಗೆ ತಾಯಿಯ ಎದೆ ಹಾಲು ಅತ್ಯಮೂಲ್ಯವಾದುದು. ತಾಯಂದಿರು ಎದೆ ಹಾಲುಣಿಸುವ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಬಿಟ್ಟು ಮಗು ಜನಿಸಿದ ಅರ್ಧ ಗಂಟೆಯೊಳಗೆ ಹಾಲುಣಿಸಬೇಕು. ನಂತರದ 6 ತಿಂಗಳಿಂದ ಕನಿಷ್ಟ 2 ವರ್ಷಗಳವರೆಗೆ ಮೇಲು ಆಹಾರ ಜೊತೆ ಎದೆಹಾಲು ಮುಂದುವರಿಸಬೇಕು.
ಇದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದ ಅವರು ಮಕ್ಕಳು, ಗರ್ಭಿಣಿ ಬಾಣಂತಿಯರು, ಕಿಶೋರಿ ಯರಿಗೆ ಪೌಷ್ಟಿಕಾಂಶವುಳ್ಳ ಸಮತೋಲನ ಆಹಾರ ಅತ್ಯಗತ್ಯ ವಾಗಿದ್ದು, ಸ್ಥಳಿಯವಾಗಿ ದೊರೆಯುವ ಸೊಪ್ಪು, ತರಕಾರಿ, ಹಣ್ಣುಗಳ ಸೇವನೆ ಯಿಂದ ಉತ್ತಮ ಪೌಷ್ಟಿಕ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಈ ಮಾಹಿತಿಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಸೂಚಿಸಿದರು.
ಇದನ್ನೂ ಓದಿ:ಬಾಪೂಜಿ ಶಾಲೆಯಲ್ಲಿ ಗುರುವಂದನೆ-ಸ್ನೇಹ ಸಮ್ಮಿಲನ
ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಲಕ್ಷ್ಮೀ, ಮಕ್ಕಳ ಪೋಷಕರು, ತಾಯಂ ದಿರು ಭಾಗವಹಿಸಿದ್ದರು. ಮನೆ ಮನೆಗಳಿಗೆ ಭೇಟಿ ಮಾಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಎದೆಹಾಲಿನ ಮಹತ್ವ ಸೇರಿದಂತೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಯಿತು. ಮಾಹಿತಿ ಕುರಿತು ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.