ದೇವದುರ್ಗ: ಸ್ವಾತಂತ್ರ್ಯ ನಂತರ ಸರಕಾರಿ ಶಾಲೆಗಳಕಟ್ಟಡ ನಿರ್ಮಿಸಲು ದಾನಿಗಳು ಜಾಗ ನೀಡಿದ್ದು,ಶಾಲೆಯ ಹೆಸರಿಗೆ ನೋಂದಣಿ ಆಗದೇ ಇರುವಶಾಲೆಗಳನ್ನು ಕಲಂ 11ರಲ್ಲಿ ನೋಂದಣಿ ಮಾಡಿಸುವ ಪ್ರಕ್ರಿಯೆ ಚುರುಕಾಗಿ ನಡೆದಿದೆ.
ತಾಲೂಕಿನಲ್ಲಿ 348 ಶಾಲೆಗಳಿದ್ದು, ಅದರಲ್ಲಿ 241 ಶಾಲೆ ಹೆಸರಲ್ಲಿ ನೋಂದಣಿ ಆಗಿವೆ. ನೂರಕ್ಕೂ ಅಧಿಕ ಶಾಲೆಗಳು ಕಲಂ 9ರ ದಾನಿಗಳ ಹೆಸರಿನಲ್ಲಿದ್ದು, ಶಾಲೆಗಳ ಹೆಸರಿಗೆ ಸರ್ವೇ ನೋಂದಣಿ ಪ್ರಕ್ರಿಯೆನಡೆದಿದೆ. 1956ರಿಂದ ಇಲ್ಲಿಯವರೆಗೆ ಬಹುತೇಕಶಾಲೆಗಳು ದಾನಿಗಳ ಹೆಸರಿನಲ್ಲಿವೆ. ಶಾಲಾ ಮುಖ್ಯಶಿಕ್ಷಕರು ಆಸ್ತಿ ವರ್ಗಾಯಿಸಲು ವಿಫಲವಾದ ಕಾರಣಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆನ್ನತ್ತಿದ್ದಾರೆ. ಶಾಲೆಗೆ ನಿವೇಶನ ನೀಡಿರುವ ದಾನಿಗಳ ಹೆಸರಿನಲ್ಲಿರುವಆಸ್ತಿಯನ್ನು ಕಂದಾಯ ಭೂ ದಾಖಲೆಯಲ್ಲಿ ನೋಂದಣಿ ಮಾಡುವ ಕಾರ್ಯ ನಡೆದಿದೆ.
ಪಟ್ಟಣ ಸೇರಿ ತಾಲೂಕಿನಾದ್ಯಂತ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿ ದಾಖಲಾತಿಗಳ ವರದಿಯನ್ನು ಸಹಾಯಕ ಆಯುಕ್ತರಿಗೆ ರವಾನಿಸಲಾಗುತ್ತಿದೆ. ಆಯುಕ್ತರು ಅನುಮೋದನೆನಂತರ ಕಲಂ 11ರಲ್ಲಿ ಸರಕಾರಿ ಶಾಲೆಯ ಹೆಸರಿನಲ್ಲಿ ನೋಂದಣಿ ಆಗುತ್ತದೆ. ನೂರಕ್ಕೂ ಅಧಿಕ ಶಾಲೆಗಳಸಮಸ್ಯೆ ಈಗಾಗಲೇ 44 ಶಾಲೆಗಳು ಆಯುಕ್ತರಅನುಮೋದನೆ ಪಡೆದು ಶಾಲೆ ಹೆಸರಿನಲ್ಲಿ ಪಹಣಿ ಆಗಿವೆ. ಪಟ್ಟಣದಲ್ಲಿ 11, ಜಾಲಹಳ್ಳಿ 8, ಗಬ್ಬೂರು 8,ಅರಕೇರಾ 17 ನೋಂದಣಿ ಪ್ರಕ್ರಿಯೆ ಮುಗಿದಿವೆ.ಪಟ್ಟಣದ ಕೆಇಬಿ ಶಾಲೆ, ಜನತಾ ಕಾಲೋನಿ,ನಗರಗುಂಡ, ಮರಿಗೆಮ್ಮದಿಬ್ಬಿ ತಾಂಡಾ, ಖಾನಪುರು, ಮಸೀದಪುರು, ಗಲಗ, ಲಿಂಗದಹಳ್ಳಿ, ಬಸ್ಸಾಪುರು, ಬೋಗಿರಾಮನಗುಂಡ, ಕ್ಯಾದಿಗೇರಾ, ಶಿವಂಗಿ,ಅಮರಾಪುರು ಸೇರಿ ಇತರೆ ಸರಕಾರಿ ಶಾಲೆಗಳು ಜಾಗ ನೀಡಿದ ದಾನಿಗಳ ಹೆಸರಿನಲ್ಲಿವೆ. ಚುರುಕಾಗಿಸರ್ವೇ ಮಾಡಲು ತಹಶೀಲ್ದಾರ್ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶಾಲಾ ಮುಖ್ಯಶಿಕ್ಷಕರೊಂದಿಗೆ ಸರ್ವೇ ಕಾರ್ಯ ನಡೆಯುತ್ತಿದೆ.
ಸರಕಾರಿ ಶಾಲೆಗಳಿಗೆ ಉಚಿತ ಜಾಗ ನೀಡಿರುವ ಬಹುತೇಕ ದಾನಿಗಳು ಮೃತಪಟ್ಟಿದ್ದಾರೆ. ಸರ್ವೇನೋಂದಣಿ ಪ್ರಕ್ರಿಯೆಗೆ ದಾನಿಗಳ ಸಂಬಂಧಿಕರು ಯಾವುದೇ ತಕರಾರು ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಹಳೆ ಜೀವಕ್ಕೆ ಹೊಸ ಕಳೆ ಬಂದಂತಾಗಿದೆ. ಸರ್ಕಾರಿ ಆಸ್ತಿ ಯಾವುದೇ ಕಾರಣಕ್ಕೆ ಒತ್ತುವರಿ ಆಗದಂತೆ ದಾನಿಗಳ ಹೆಸರಿನಲ್ಲಿರುವ ಜಾಗ ಶಾಲೆಗಳ ಹೆಸರಿಗೆ ನೋಂದಣಿ ಮಾಡಲಾಗುತ್ತಿದೆ. ಕಳೆದ ಎರಡ್ಮೂರು ತಿಂಗಳಿಂದ ಇಂತಹ ಪ್ರಕರಣಗಳ ಪತ್ತೆಗಾಗಿ ಅಧಿಕಾರಿಗಳು ಸಿಆರ್‌ಪಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಹಲವು ಬಾರಿ ಮೀಟಿಂಗ್‌ನಲ್ಲಿ ಶಾಲಾಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿತ್ತು. ತಡವಾಗಿಎಚ್ಚೆತ್ತಗೊಂಡ ಶಿಕ್ಷಕರು ಜಾಗ ಸರ್ವೇ ಮಾಡಲು ಕಂದಾಯ ಅಧಿಕಾರಿಗಳ ಜತೆ ಕೈಜೋಡಿಸಿದ್ದಾರೆ. ಸ್ವಾತಂತ್ರ್ಯ ನಂತರ ದಾನಿಗಳು ನೀಡಿದ ಜಾಗ ಸುಮಾರು ವರ್ಷಗಳ ಬಳಿಕ ಶಾಲೆ ಹೆಸರಿಗೆ ನೋಂದಣಿ ಪ್ರಕ್ರಿಯೆ ನಡೆದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ದಾನಿಗಳ ಹೆಸರಿನಲ್ಲಿರುವ ಆಸ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಟ್ಟಿ ನೀಡಿದ್ದು, ಕಲಂ 11ರಲ್ಲಿ ಶಾಲೆ ಹೆಸರಿಗೆ ನೋಂದಣಿ ಪ್ರಕ್ರಿಯೆ ನಡೆದಿದೆ. 44 ಶಾಲೆಗಳ ಪಹಣಿ ಮಾಡಲಾಗಿದೆ.
–ಮಧುರಾಜ ಯಾಳಗಿ, ತಹಶೀಲ್ದಾರ್
147 ಸರಕಾರಿ ಶಾಲೆಗಳು ಆಸ್ತಿ ದಾನಿಗಳ ಹೆಸರಿನಲ್ಲಿದ್ದು, ಕಂದಾಯ ಇಲಾಖೆಯಿಂದ ಸರ್ವೇ ನಡೆಸಿ ಶಾಲೆಗಳ ಹೆಸರಿಗೆ ನೋಂದಣಿ ಮಾಡಲಾಗುತ್ತಿದೆ. ಶೇ.80 ಕೆಲಸ ಆಗಿದ್ದು, ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿದ್ದಾರೆ.
–ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ