Advertisement

ಸಾರ್ವಜನಿಕ ಇ-ಗ್ರಂಥಾಲಯಕ್ಕೆ ನೋಂದಾಯಿಸಿಕೊಳ್ಳಿ

01:57 PM Nov 18, 2020 | Suhan S |

ರಾಮನಗರ: ರಾಜ್ಯದ ಸಾರ್ವಜನಿಕ ಗ್ರಂಥಾಲಯ ಆರಂಭಿಸಿರುವ ಇ-ಗ್ರಂಥಾಲಯಕ್ಕೆ ಜಿಲ್ಲೆಯ ಬಹಳಷ್ಟು ಮಂದಿ ಆಸಕ್ತರು ನೋಂದಾಯಿಸಿಕೊಂಡಿದ್ದಾರೆ, ನೋಂದಣಿಗೆಇನ್ನುಅವಕಾಶವಿದ್ದು,ಜಿಲ್ಲೆಯ ನಾಗರಿಕರು ಇ-ಗ್ರಂಥಾಲಯ ವ್ಯವಸ್ಥೆ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಮಮತಾಕರೆ ನೀಡಿದರು.

Advertisement

ನಗರದ ಜಿಲ್ಲಾ ಗ್ರಂಥಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ಗ್ರಂಥ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಕೋವಿಡ್‌ ಲಾಕ್‌ಡೌನ್‌ ಕಾರಣ ಗ್ರಂಥಾಲಯಗಳು ಸಹ ಬಾಗಿಲು ಮುಚ್ಚಿದ್ದವು. ಆದರೆ ಈ ಸಮಯದಲ್ಲಿ ಓದುಗರಿಗೆ ಪುಸ್ತಕಗಳನ್ನು ಓದುವ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳಲು ತಮ್ಮ ಇಲಾಖೆ ಇ-ಗ್ರಂಥಾಲಯ ವ್ಯವಸ್ಥೆ ಆರಂಭಿಸಿತ್ತು. ಇ-ಗ್ರಂಥಾಲಯ ನೋಂದಣಿಆಂದೋಲನ ಇನ್ನು ಜಾರಿಯಲ್ಲಿದೆ ಎಂದು ತಿಳಿಸಿದರು.

ಗ್ರಂಥಾಲಯ ಸಪ್ತಾಹದ ಪ್ರಾಮುಖ್ಯತೆ ಬಗ್ಗೆ ತಿಳಿಸಿದ ಅವರು ಗ್ರಂಥಾಲಯ ಸೇವೆಗಳ ಬಗ್ಗೆ ಮಾಹಿತಿ, ಪುಸ್ತಕ ಓದುವ ಹವ್ಯಾಸವನ್ನು ರೂಢಿಸುವ ಸಲುವಾಗಿಯೇ 1968ರಿಂದ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ. ನ.20 ರವರೆಗೆ ಈ ಸಪ್ತಾಹ ನಡೆಯಲಿದೆ. ಜಿಲ್ಲಾ ಕೇಂದ್ರ ಸೇರಿದಂತೆ ಇತರೆ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕ ದಾಸ್ತಾನು, ಸಾರ್ವಜನಿಕರ ಸ್ಪಂದನೆ, ಓದುಗರ ಅಭಿಪ್ರಾಯ ಸಂಗ್ರಹಣೆ ಮುಂತಾದ ವಿಚಾರಗಳಲ್ಲಿ ಮಾಹಿತಿಯನ್ನು ಕಲೆ ಹಾಕಲಾಗುವುದು ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿಯೂ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಸಾರ್ವಜನಿಕರಿಗೆಉಪಯೋಗವಾಗಲಿರುವ ಪುಸ್ತಕಗಳುಇವೆ.ಇವುಗಳನ್ನು ಎಲ್ಲರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು. ಓದುಗ ಹರೀಶ್‌ ಮಾತನಾಡಿ, ರಾಮನಗರ ಜಿಲ್ಲಾ ಗ್ರಂಥಾಲಯಹೆಸರಿಗೆಜಿಲ್ಲಾಕೇಂದ್ರ ಗ್ರಂಥಾಲಯ, ಆದರೆ ಇದಕ್ಕೆ ತಕ್ಕ ಅನುಕೂಲಗಳು ಇಲ್ಲಿಲ್ಲ. ಗ್ರಂಥಾಲಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು. ಸರ್ಕಾರಿ ಗ್ರಂಥಾಲಯಗಳನ್ನು ಬಳಸುವವರು ಬಡವರ್ಗದವರೇ ಹೆಚ್ಚಾಗಿದ್ದಾರೆ.

ಕೋವಿಡ್‌ ನಿಯಮಾನುಸಾರ ಬಳಕೆ ಮಾಡಲು ಹೆಚ್ಚು ಉತ್ತೇಜನ ನೀಡಬೇಕು ಎಂದು ಮನವಿಮಾಡಿದರು. ನೆರೆದಿದ್ದ ಗ್ರಂಥಾಲಯ ಬಳಕೆದಾರರು ಶೌಚಾಲಯ ಸಮಸ್ಯೆ ನೀಗಿಸುವಂತೆ ಮತ್ತು ಕೆಲವು ಪುಸ್ತಕಗಳ ಅಗತ್ಯವನ್ನು ಮುಂದಿಟ್ಟರು. ಗ್ರಂಥಾಲಯ ಸಿಬ್ಬಂದಿ ಜಯರಾಮು, ಸದಾಶಿವ, ಮಹದೇವ ಸ್ವಾಮಿ, ಸುಮಲತಾ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next