Advertisement

ರೀಷ್ಮಾ ಈಗ ಮಚ್‌ ಲಕ್ಷ್ಮೀ

04:20 PM Apr 29, 2023 | Team Udayavani |

ಪ್ರೇಮ್‌ ನಿರ್ದೇಶನದ “ಕೆಡಿ’ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಇದರ ಜೊತೆಗೆ ನಿರ್ದೇಶಕ ಪ್ರೇಮ್‌ ಚಿತ್ರದ ಒಂದೊಂದೇ ಪಾತ್ರಗಳನ್ನು ಪರಿಚಯಿಸುತ್ತಿದ್ದಾರೆ. ಈಗ ಚಿತ್ರದ “ಮಚ್‌ಲಕ್ಷ್ಮೀ’ ಎಂಬ ಪಾತ್ರ ಪರಿಚಯ ಮಾಡಿದ್ದಾರೆ.

Advertisement

ರೀಷ್ಮಾ ನಾಣಯ್ಯ “ಕೆಡಿ’ಯಲ್ಲಿ ಮಚ್‌ಲಕ್ಷ್ಮೀಯಾಗಿ ಕಾಣಿಸಿಕೊಳ್ಳುತ್ತಿ ದ್ದಾರೆ. ಅವರ ಪಾತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿದ್ದು, ಸಖತ್‌ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಅವರನನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕೂಡಾ ಪ್ರೇಮ್‌. ತಮ್ಮ “ಏಕ್‌ಲವ್ಯ’ ಚಿತ್ರದಲ್ಲಿ ರೀಷ್ಮಾಗೆ ನಾಯಕಿಯಾಗಿ ಅವಕಾಶ ನೀಡಿದ್ದರು. ಈಗ ಮತ್ತೂಮ್ಮೆ “ಕೆಡಿ’ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಇನ್ನು, ಇದಲ್ಲದೇ ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ ಕೂಡಾ ಪ್ರೇಮ್‌ ನಿರ್ದೇಶನದ “ಕೆಡಿ’ ಚಿತ್ರದಲ್ಲಿ ನಟಿಸಿದ್ದು, ಯುಗಾದಿ ಹಬ್ಬದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಪಾತ್ರವನ್ನು ಅನಾವರಣಗೊಳಿಸಿದೆ.

ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಸತ್ಯವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿರುವ ಅವರ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. “ಕೆವಿಎನ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಕೆ. ಡಿ’ ಸಿನಿಮಾವನ್ನು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಧ್ರುವ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ ಆರನೇ ಸಿನಿಮಾ ಇದಾಗಿದ್ದು, 1970ರ ದಶಕದ ಒಂದಷ್ಟು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದುಕೊಂಡು ತಯಾರಾ ಗುತ್ತಿರುವ “ಕೆ. ಡಿ’ ಬಿಗ್‌ ಬಜೆಟ್‌ನಲ್ಲಿ ತಯಾರಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next