Advertisement

ಪಾಕ್‌ ಪ್ರಯಾಣ ಮರು ಪರಿಶೀಲಿಸಿ: ಅಮೆರಿಕನ್ನರಿಗೆ ಸೂಚನೆ

11:55 AM Jan 11, 2018 | udayavani editorial |

ವಾಷಿಂಗ್ಟನ್‌ : ಪಾಕಿಸ್ಥಾನ ಜತೆಗಿನ ತನ್ನ ದ್ವಿಪಕ್ಷೀಯ ಸಂಬಂಧಗಳು ಈಚಿನ ದಿನಗಳಲ್ಲಿ ತೀವ್ರವಾಗಿ ಹದಗೆಟ್ಟಿರುವುದರಿಂದ ಆ ದೇಶದ ಉಗ್ರರಿಂದ ತನ್ನ ಪ್ರಜೆಗಳಿಗೆ ಇರುವ ಬೆದರಿಕೆಗಳ ಪುನರವಲೋಕನ ನಡೆಸಿರುವ ಅಮೆರಿಕ, ಪಾಕ್‌ ಪ್ರವಾಸ ಕೈಗೊಳ್ಳುವ ತನ್ನ ಪ್ರಜೆಗಳಿಗೆ ತಮ್ಮ ಪ್ರಯಾಣವನ್ನು ಮರು ಪರಿಶೀಲಿಸುವಂತೆ ಕೇಳಿಕೊಂಡಿದೆ. 

Advertisement

ಅಮೆರಿಕದ ವಿದೇಶಾಂಗ ಇಲಾಖೆ ತನ್ನ ಪ್ರಜೆಗಳಿಗೆ ನೀಡಿರುವ ಈ ಮಾರ್ಗದರ್ಶಿ ಸೂತ್ರಗಳು ಕೇವಲ ಪಾಕ್‌ ಪ್ರವಾಸಕ್ಕೆ ಮಾತ್ರವೇ ಸಂಬಂಧಿಸಿಲ್ಲ; ಬದಲು ಅದರ ಇತರ ಪ್ರಾಂತ್ಯಗಳಾಗಿರುವ ಬಲೂಚಿಸ್ಥಾನ, ಖೈಬರ್‌ ಫ‌ಕೂ¤ನ್‌ ಖ್ವಾ ಮತ್ತು ಪಾಕ್‌ ಒಕ್ಕೂಟ ಆಡಳಿತೆಗೆ ಒಳಪಟ್ಟ ಬುಡಕಟ್ಟು ಪ್ರದೇಶಗಳಿಗೆ ಕೂಡ ಸಂಬಂಧಿಸಿದೆ. 

ಪಾಕಿಸ್ಥಾನ ಮತ್ತು ಅದರ ಇತರ ಪ್ರಾಂತ್ಯಗಳಲ್ಲಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ; ಅವರು ಯಾವುದೇ ಪೂರ್ವ ಎಚ್ಚರಿಕೆಗಳನ್ನು ನೀಡದೆಯೇ ವಿದೇಶಿ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆಯೇ ದಾಳಿ ನಡೆಸುವ ಅಪಾಯವಿದೆ; ಆದುದರಿಂದ ಪಾಕ್‌ ಸಹಿತ ಅದರ ಇತರ ಪ್ರಾಂತ್ಯಗಳಿಗೆ ಪ್ರಯಾಣಿಸುವದನ್ನು ಅಮೆರಿಕನ್‌ ಪ್ರಜೆಗಳು ಪುನರ್‌ ಪರಿಶೀಲಿಸಬೇಕು ಎಂದು ವಿದೇಶಾಂಗ ಇಲಾಖೆ ಸೂಚಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next