Advertisement

ಸಮಯ ವ್ಯರ್ಥ ಮಾಡದೆ ಓದಿ

07:04 AM Mar 08, 2019 | Team Udayavani |

ಕೂಡ್ಲಿಗಿ: ವಿಜ್ಞಾನ ಜಗತ್ತಿನ ವಿಕಾಸಕ್ಕೆ ನಾಂದಿಯಾಗುವ ಬದಲು ನಾಶ ಮಾಡುವತ್ತ ಸಾಗಿರುವುದು ದುರಂತವೇ ಸರಿ ಎಂದು ದಾವಣಗೆರೆ ಜಿಲ್ಲಾ ಕರ್ನಾಟಕ ವಿಜ್ಞಾನ ಪರಿಷತ್‌ ಕಾರ್ಯಕಾರಿ ಕಾರ್ಯದರ್ಶಿ ಗುರುಸಿದ್ದಯ್ಯ ಸ್ವಾಮಿ ಆತಂಕವ್ಯಕ್ತಪಡಿಸಿದರು. 

Advertisement

ತಾಲೂಕಿನ ನಿಂಬಳಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಹಾಗೂ ಜಿಎಂಸಿ ಟ್ರಸ್ಟ್‌ ಮಂಗಾಪುರದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತರುವ ಕೆಲಸ ಶಿಕ್ಷಕರದಾಗಿದೆ. ವಿದ್ಯಾರ್ಥಿಗಳು ಸೃಜನಶೀಲತೆ ಮೈಗೂಡಿಸಿಕೊಂಡು ವೈಜ್ಞಾನಿಕವಾಗಿ ಅಭಿವೃದ್ಧಿಯಾಗಬೇಕಿದೆ ಎಂದರು.

ವಿಜ್ಞಾನ ಮತ್ತು ಧರ್ಮಗಳು ಎರಡು ಒಂದೆ. ಆದರೆ ದಾರಿಗಳು ಬೇರೆಯಾಗಿವೆ. ಧರ್ಮವೂ ಹಳೆಯ ವಿಷಯಗಳೊಂದಿಗೆ ಮುಂದುವರಿದರೆ, ವಿಜ್ಞಾನವೂ ಪ್ರಸ್ತುತ ವಿಷಯಗಳ ಕುರಿತು ಅಧ್ಯಯನ ಮಾಡುತ್ತಾ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತ ಹೋಗುತದೆ ಎಂದರು. ಕಿರಿಯ ವಿಜ್ಞಾನಿ
ಪುರಸ್ಕೃತ ಡಾ|ಪ್ರವೀಣ್‌ಕುಮಾರ್‌ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಅಧ್ಯಯನದ ಕಡೆ ಹೆಚ್ಚು ಗಮನ ಹರಿಸಬೇಕು. 

ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅಭ್ಯಸಿಸುವುದನ್ನು ರೂಢಿಕೊಳಬೇಕು. ಪುಸ್ತಕವನ್ನು ಪ್ರೀತಿಸುವ ಜತೆಗೆ ಪುಸ್ತಕದ ಜತೆಗೆ ಸಂವಾದಕ್ಕಿಳಿದು ಅಭ್ಯಸಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ವಿಜ್ಞಾನ ವಿಷಯವು ಅಷ್ಟೇ ಸುಲಭವಾಗಿದ್ದು, ಕುತೂಹಲ ಹಾಗೂ ಆಲೋಚನೆಯಿಂದ ವಿಮರ್ಶಿಸಿದರೆ ವಿಜ್ಞಾನ ಸರಳವಾಗಲಿದೆ. ಹೆಚ್ಚಿನದಾಗಿ ವಿಜ್ಞಾನಿಗಳು ಬಡತನದಿಂದ ಬಂದವರಾಗಿದ್ದಾರೆ. ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯವಾಗಲಿದೆ. ಅದರಂತೆ ಬದ್ಧತೆ ಮತ್ತು ಕುತೂಹಲ ಇರುವವರು ಸಂಶೋಧನೆ ಮಾಡಲು ದಾರಿಯಾಗುತ್ತದೆ ಎಂದರು.

Advertisement

ಮುಖ್ಯ ಶಿಕ್ಷಕ ಫಕ್ಕೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಜ್ಞಾನ ಪರಿಷತ್‌ ಕಾರ್ಯಕಾರಿ ಸದಸ್ಯ ಎಸ್‌.ಎಂ.ಕೊಟ್ರಸ್ವಾಮಿ, ಜೆಎಂಸಿ ಟ್ರಸ್ಟ್‌ನ ಎಂ.ಅಶೋಕ, ಗ್ರಾಪಂ ಅಧ್ಯಕ್ಷ ಮಹಾಂತೇಶ, ಗ್ರಾಪಂ ಸದಸ್ಯರಾದ ಗುರುಬಸವರಾಜ, ವಿ.ಎಂ.ವೀರೇಶಕುಮಾರ್‌, ನಿಲಯ ಪಾಲಕ ಬಸವರಾಜ, ಶಿಕ್ಷಕರಾದ ಪತ್ರೇಶ್‌, ಮಹಾಂತೇಶ್‌, ನಾಗರಾಜ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next