ನವದೆಹಲಿ: ರಾಜಸ್ಥಾನದ ಸುಮರ್ಪುರ್ ಮರ್ಕೆಂಟೈಲ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಪರವಾನಿಗೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರದ್ದುಗೊಳಿಸಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:Vijayapura; ಚಾಲಕನೇ ಇಲ್ಲದ ಹಳೆವಾಹನ ನೀಡಿದ್ದಕ್ಕೆ ಮೇಯರ್ ವಿನೂತನ ಪ್ರತಿಭಟನೆ
ಲೈಸೆನ್ಸ್ ರದ್ದು ಹಿನ್ನೆಲೆಯಲ್ಲಿ 2024 ಫೆಬ್ರವರಿ 28ರಿಂದ ಅನ್ವಯವಾಗುವಂತೆ ಬ್ಯಾಂಕ್ ನ ಎಲ್ಲಾ ವಹಿವಾಟು ಕಾರ್ಯ ಸ್ಥಗಿತಗೊಳ್ಳಲಿದೆ ಎಂದು ಆರ್ ಬಿಐ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದೆ.
ಬ್ಯಾಂಕ್ ನ ವಹಿವಾಟು ಸ್ಥಗಿತಗೊಳಿಸುವಂತೆ ರಾಜಸ್ಥಾನದ ಸಹಕಾರ ಸಂಘಗಳ ರಿಜಿಸ್ಟ್ರಾರ್ ಗೆ ಆರ್ ಬಿಐ ಮನವಿ ಮಾಡಿಕೊಂಡಿದ್ದು, ಬ್ಯಾಂಕ್ ಗೆ ಲಿಕ್ವಿಡೇಟರ್ (ಬ್ಯಾಂಕ್ ನ ಲೀಗಲ್ ಅಥಾರಿಟಿ) ಅನ್ನು ನೇಮಕ ಮಾಡುವಂತೆ ಆರ್ ಬಿಐ ಸೂಚನೆ ನೀಡಿದೆ.
ಸಮರ್ಪುರ್ ಮರ್ಕೈಂಟೈಲ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ಪರವಾನಿಗೆ ರದ್ದುಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ರೀತಿಯ ವಹಿವಾಟು ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
1949ರ ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆಯ ಅನ್ವಯ ತಕ್ಷಣವೇ ಜಾರಿಗೆ ಬರುವಂತೆ ಠೇವಣಿ ಸಂಗ್ರಹ, ಠೇವಣಿ ಮರುಪಾವತಿ ಸೇರಿದಂತೆ ಯಾವುದೇ ಬ್ಯಾಂಕಿಂಗ್ ವಹಿವಾಟು ನಡೆಸುವಂತಿಲ್ಲ ಎಂದು ಆರ್ ಬಿಐ ತಿಳಿಸಿದೆ.
ಪ್ರತಿಯೊಬ್ಬ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್ ನಿಂದ 5,00,000 ಲಕ್ಷದವರೆಗಿನ ವಿತ್ತೀಯ ಸೀಲಿಂಗ್ ವರೆಗಿನ ಠೇವಣಿಯ ಠೇವಣಿ ವಿಮಾ ಕ್ಲೈಮ್ ಮೊತ್ತ ಸ್ವೀಕರಿಸಲು ಅರ್ಹರಾಗಿರುತ್ತಾರೆ ಎಂದು ಆರ್ ಬಿಐ ಹೇಳಿದೆ.