ರಾವಲ್ಪಿಂಡಿ: ಇಂಗ್ಲೆಂಡ್ನ ಬೃಹತ್ ಮೊತ್ತಕ್ಕೆ ದಿಟ್ಟ ರೀತಿಯಲ್ಲಿ ಪ್ರತ್ಯುತ್ತರ ನೀಡಿರುವ ಪಾಕಿಸ್ತಾನ, ರಾವಲ್ಪಿಂಡಿ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 499 ರನ್ ಗಳಿಸಿದೆ. ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 657 ರನ್ ಪೇರಿಸಿತ್ತು.
ಆಂಗ್ಲರ ಸರದಿಯಲ್ಲಿ ನಾಲ್ವರಿಂದ ಶತಕ ದಾಖಲಾದರೆ, ಪಾಕ್ ಇನಿಂಗ್ಸ್ನಲ್ಲಿ ಮೂವರು ಶತಕ ಬಾರಿಸಿ ಮಿಂಚಿದರು. ಆರಂಭಿಕರಾದ ಅಬ್ದುಲ್ ಶಫೀಕ್ 114, ಇಮಾಮ್ ಉಲ್ ಹಕ್ 121 ಮತ್ತು ನಾಯಕ ಬಾಬರ್ ಆಜಂ 136 ರನ್ ಹೊಡೆದರು. ಶಫೀಕ್-ಹಕ್ ಮೊದಲ ವಿಕೆಟಿಗೆ 225 ರನ್ ಪೇರಿಸಿ ಇಂಗ್ಲೆಂಡ್ ಬೌಲರ್ಗಳಿಗೆ ಬೆವರಿಳಿಸಿದರು.
ಪಾಕಿಸ್ತಾನವಿನ್ನೂ 158 ರನ್ನುಗಳ ಹಿನ್ನಡೆಯಲ್ಲಿದೆ. ರಾವಲ್ಪಿಂಡಿ ಪಿಚ್ ಇದೇ ರೀತಿ ಬ್ಯಾಟಿಂಗ್ ಸ್ನೇಹಿಯಾಗಿ ಪರಿಣಮಿಸಿದರೆ ಪಂದ್ಯ ಡ್ರಾಗೊಳ್ಳುವುದು ಖಚಿತ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-657. ಪಾಕಿಸ್ತಾನ-7 ವಿಕೆಟಿಗೆ 499 (ಬಾಬರ್ ಆಜಂ 136, ಇಮಾಮ್ ಉಲ್ ಹಕ್ 121, ಅಬ್ದುಲ್ ಶಫೀಕ್ 114, ವಿಲ್ ಜಾಕ್ಸ್ 132ಕ್ಕೆ 3, ಜಾಕ್ ಲೀಚ್ 160ಕ್ಕೆ 2).