Advertisement

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

05:10 PM Apr 18, 2024 | Team Udayavani |

ಮುಂಬೈ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಟೆಸ್ಟ್ ಸರಣಿ ನಡೆಸುವ ಯೋಜನೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹಮತ ವ್ಯಕ್ತಪಡಿಸಿದ್ದಾರೆ.

Advertisement

ಭಾರತ- ಪಾಕ್ ನಡುವೆ ರಾಜಕೀಯ ಕಾರಣಗಳಿಂದ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ. ಕೇವಲ ಐಸಿಸಿ ವಿಶ್ವಕಪ್ ಅಥವಾ ಏಷ್ಯಾ ಕಪ್ ಗಳಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತವೆ.

ಪಾಡ್ ಕಾಸ್ಟ್ ಒಂದರಲ್ಲಿ ಭಾಗವಹಿಸಿದ್ದ ರೋಹಿತ್ ಶರ್ಮಾ ಅವರಿಗೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರು ಪ್ರಶ್ನೆ ಕೇಳಿದ್ದಾರೆ. “ಭಾರತ ಮತ್ತು ಪಾಕಿಸ್ತಾನ ನಿಯಮಿತವಾಗಿ ಆಡಿದರೆ ಟೆಸ್ಟ್ ಕ್ರಿಕೆಟ್‌ ಗೆ ಉತ್ತಮವಲ್ಲವೇ” ಎಂದು ವಾನ್ ಕೇಳಿದ್ದಾರೆ.

ಅದಕ್ಕೆ ಉತ್ತರಿಸಿದ ರೋಹಿತ್, “ನಾನು ಸಂಪೂರ್ಣವಾಗಿ ಅದನ್ನು ಒಪ್ಪುತ್ತೇನೆ. ಅವರದ್ದು ಉತ್ತಮ ತಂಡ. ಭಾರತ ಮತ್ತು ಪಾಕ್ ನಡುವೆ ಬಹುಶಃ 2006-2008ರಲ್ಲಿ ಕೊನೆಯ ಟೆಸ್ಟ್ ಪಂದ್ಯ ನಡೆದಿದೆ. ಆಗ ಕೋಲ್ಕತ್ತಾ ಪಂದ್ಯದಲ್ಲಿ ವಾಸಿಂ ಜಾಫರ್ ದ್ವಿಶತಕ ಹೊಡೆದಿದ್ದರು” ಎಂದು ರೋಹಿತ್ ಹೇಳಿದ್ದಾರೆ.

“ಕೊನೆಗೆ ನಾವು ಸ್ಪರ್ಧೆಯಲ್ಲಿರಲು ಬಯಸುತ್ತೇವೆ. ಎರಡು ತಂಡಗಳ ನಡುವೆ ದೊಡ್ಡ ಸ್ಪರ್ಧೆಯಾಗಲಿದೆ ಎಂದು ನಾನು ಭಾವಿಸುತ್ತೇನೆ. ನಾವು ಹೇಗಿದ್ದರೂ ಐಸಿಸಿ ಟೂರ್ನಿಗಳಲ್ಲಿ ಅವರ ವಿರುದ್ಧ ಆಡುತ್ತೇವೆ. ನಾನು ನೋಡುತ್ತಿರುವುದು ಶುದ್ಧ ಕ್ರಿಕೆಟ್. ನನಗೆ ಬೇರೆ ಯಾವುದರಲ್ಲೂ ಆಸಕ್ತಿ ಇಲ್ಲ. ಶುದ್ಧ ಕ್ರಿಕೆಟ್ ಅಷ್ಟೇ. ಬ್ಯಾಟ್ ಮತ್ತು ಬಾಲ್ ನಡುವಿನ ಯುದ್ಧ. ಇದು ಉತ್ತಮ ಸ್ಪರ್ಧೆ, ಆದ್ದರಿಂದ ಏಕೆ ಮಾಡಬಾರದು” ಎಂದು ರೋಹಿತ್ ಹೇಳಿದರು.

Advertisement

2007ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕೊನೆಯ ಟೆಸ್ಟ್ ಸರಣಿ ನಡೆದಿತ್ತು. ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ತಂಡವು 1-0 ಅಂತರದಿಂದ ಸರಣಿ ಸೋಲು ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next