Advertisement

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

09:16 PM Apr 25, 2024 | Team Udayavani |

ಹೊಸದಿಲ್ಲಿ: ಗುಜರಾತ್‌ ಟೈಟಾನ್ಸ್‌ ವಿರುದ್ಧದ ಪಂದ್ಯದ ವೇಳೆ, ವಿಕೆಟ್‌ ಕಿತ್ತ ವೇಳೆ ಎಲ್ಲೆ ಮೀರಿ ಸಂಭ್ರಮಾಚರಣೆ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ ವೇಗಿ ರಸಿಕ್‌ ಸಲಾಂ ಅವರಿಗೆ ಐಪಿಎಲ್‌ ಛೀಮಾರಿ ಹಾಕಿದೆ. ಎಲ್ಲೆ ಮೀರಿ ವರ್ತಿಸುವ ಮೂಲಕ ರಸಿಕ್‌ ನಿಯಮ ಉಲ್ಲಂ ಸಿದ್ದಾರೆ ಎಂದು ಐಪಿಎಲ್‌ ಪ್ರಕಟನೆ ತಿಳಿಸಿದೆ.

Advertisement

ಬುಧವಾರದ ಪಂದ್ಯದಲ್ಲಿ ರಸಿಕ್‌ ಸಲಾಂ ಉತ್ತಮ ಬೌಲಿಂಗ್‌ ನಡೆಸಿದ್ದರು. 4 ಓವರ್‌ಗಳಲ್ಲಿ ಅವರು 44 ರನ್‌ ನೀಡಿ 3 ವಿಕೆಟ್‌ ಉರುಳಿಸಿದರು. ರಸಿಕ್‌ ದಾಳಿಗೆ ಸಾಯಿ ಸುದರ್ಶನ್‌, ಶಾರುಖ್‌ ಖಾನ್‌ ಮತ್ತು ಸಾಯಿ ಕಿಶೋರ್‌ ಬಲಿಯಾಗಿದ್ದರು. ಆದರೆ ವಿಕೆಟ್‌ ಕಿತ್ತ ವೇಳೆ ಮಿತಿ ಮೀರಿ ಸಂಭ್ರಮಾಚರಿಸುವ ಮೂಲಕ ಐಪಿಎಲ್‌ ನಿಯಮ ಉಲ್ಲಂಘಿಸಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next