Advertisement

ರವೀಂದ್ರ ಸಹೋದರಿಗೆ ರಾಜ್ಯ ಕಾರ್ಯದರ್ಶಿ ಹುದ್ದೆ

10:47 AM Mar 14, 2019 | |

ಹರಪನಹಳ್ಳಿ: ಅಖೀಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಶ್ಮತಾದೇವ್‌ ಆದೇಶದ ಮೇರೆಗೆ ಸಜ್ಜನ ರಾಜಕಾರಣಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ ಅವರ ಹಿರಿಯ ಪುತ್ರಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರನ್ನು ಪ್ರದೇಶ ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಹುದ್ದೆ ನೀಡಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್‌ ಆದೇಶ ಹೊರಡಿಸಿದ್ದಾರೆ.

Advertisement

ಅಖಲ ಭಾರತ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ರಾಹುಲ್‌ಗಾಂಧಿ ನೇತೃತ್ವದಲ್ಲಿ ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಅರ್ಥಿಕವಾಗಿ ದೇಶದ ಆಡಳಿತದ ಮುಖ್ಯವಾಹಿನಿಗೆ ತರಲು ಹಾಗೂ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ
ದುಡಿಯುತ್ತೀರೆಂದು ನಂಬಿ ನಾನು ಈ ಜವಾಬ್ಟಾರಿಯನ್ನು ವಹಿಸುತ್ತೀನೆ ಎಂದು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್‌ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
 
ಕಳೆದ ನ.3ರಂದು ಮಾಜಿ ಶಾಸಕ ಎಂ.ಪಿ.ರವೀಂದ್ರ ನಿಧನ ನಂತರ ಆವರ ಸಹೋದರಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಜೊತೆಗೆ ಗುರುತಿಸಿಕೊಂಡು ಪಕ್ಷದ ಚಟುವಟಿಯಲ್ಲಿ ತೊಡಗಿಸಿಕೊಂಡು ತಮ್ಮನ ಸ್ಥಾನ ತುಂಬಿದ್ದರು. ಕಾಂಗ್ರೆಸ್‌ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಎಂ.ಪಿ.ಲತಾ ಯಾರು? ಪಕ್ಷದಲ್ಲಿ ಅವರ ಸ್ಥಾನಮಾನ ಏನು ಎಂದು ಸ್ವಯಪಕ್ಷಿಯರೇ ಕೆಲವರು ಪ್ರಶ್ನಿಸುತ್ತಿದ್ದರು. ಇದೀಗ ಪಕ್ಷದಲ್ಲಿ ಹುದ್ದೆ ನೀಡಿರುವುದರಿಂದ ಟೀಕಾಕಾರರ ಬಾಯಿಗೆ ಬೀಗ ಹಾಕಿದಂತಾಗಿದೆ.

ಎಂ.ಪಿ.ರವೀಂದ್ರ ನಿಧನದ ನಂತರ ಕಾಂಗ್ರೆಸ್‌ ಪಾಳೆಯದಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದ್ದ ಸಂದರ್ಭದಲ್ಲಿ ಎಂ.ಪಿ.ಲತಾ ಅವರು ನನ್ನ ಸಹೋದರ ರವೀಂದ್ರ ಸ್ಥಾನ ತುಂಬುತ್ತೇನೆಂಬ ಭರವಸೆ ನೀಡಿ ಪಕ್ಷದ ಯಾವುದೇ ಕಾರ್ಯ ಚಟುವಟಿಕೆಯಿದ್ದರೂ ಅದರ ನೇತೃತ್ವವಹಿಸಿ ಮುನ್ನಡೆಸಿಕೊಂಡು ಬಂದಿದ್ದರು. ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಕೆಲವರು ಅವರ ಆಗಮನವನ್ನು
ಟೀಕಿಸುತ್ತಲೇ ಬಂದಿದ್ದರು. ಇದಲ್ಲದೆ, ಇವರ ಸಹೋದರಿ ಎಂ.ಪಿ.ವೀಣಾ ಮಹಾಂತೇಶ್‌ ಅವರು ಸಹ ಎಂ.ಪಿ.ಪ್ರಕಾಶ್‌ ಸಮಾಜಮುಖೀ ಟ್ರಸ್ಟ್‌ ಹೆಸರಿನ ಮೂಲಕ ಸಮಾಜ ಸೇವೆ ನೆಪದಲ್ಲಿ ಫ್ಲೆಕ್ಸ್‌ಗಳಲ್ಲಿ ಕಾಂಗ್ರೆಸ್‌ ಮುಖಂಡರ ಭಾವಚಿತ್ರ ಹಾಕಿಸಿ ಕಾಂಗ್ರೆಸ್‌ ನಾಯಕಿ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಪಕ್ಷದಲ್ಲಿ ಯಾವುದೇ ಹುದ್ದೆ ಹೊಂದಿಲ್ಲದಿದ್ದರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರ ಸೇವೆಯನ್ನು ಗುರುತಿಸಿರುವ ಪಕ್ಷವು ಅವರಿಗೆ ರಾಜ್ಯ ಕಾರ್ಯದರ್ಶಿ ಹುದ್ದೆ ನೀಡುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಹುರಿದುಂಬಿಸಿದಂತಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳೆಯೊಬ್ಬರೂ ಪಕ್ಷದ ಚುಕ್ಕಾಣಿ ಹಿಡಿದು ಪಕ್ಷ ಸಂಘಟಿಸುತ್ತಿದ್ದಾರೆ.

ಕಳೆದ ಐದು ತಿಂಗಳಿಂದ ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಕೆಲಸಕ್ಕೆ ಮಾಡಿಕೊಂಡು ಬಂದಿದ್ದೇನೆ. ಪಕ್ಷದ ಹೈಕಮಾಂಡ್‌ ನನ್ನ ಕೆಲಸವನ್ನು ಗುರುತಿಸಿ ರಾಜ್ಯ ಕಾರ್ಯದರ್ಶಿ ಹುದ್ದೆ ನೀಡಿರುವುದರಿಂದ ಜವಾಬ್ಟಾರಿ ಹೆಚ್ಚಾಗಿದೆ. ನಾನು ಹೆಚ್ಚು ಮಾತನಾಡುವುದಕ್ಕಿಂತಹ ಕೆಲಸ ಮಾಡಿ ನಮ್ಮ ಸಾಧನೆ ಏನು ಎಂಬುವುದನ್ನು ತೋರಿಸುತ್ತೇವೆ.
 ಎಂ.ಪಿ.ಲತಾ ಮಲ್ಲಿಕಾರ್ಜುನ

Advertisement

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗಂಡೂರಾವ್‌ ಅವರು ಪಕ್ಷ ಸಂಘಟನೆಗಾಗಿ ಎಂ.ಪಿ.ಲತಾ ಅವರಿಗೆ ಸೂಚನೆ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷ ಎಂ.ಪಿ.ಲತಾ ಅವರಿಗೆ ರಾಜ್ಯ ಕಾರ್ಯದರ್ಶಿ ಹುದ್ದೆ ನೀಡಿರುವುದು ಕ್ಷೇತ್ರದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದಂತಾಗಿದೆ.
  ಎಂ.ವಿ.ಅಂಜಿನಪ್ಪ, ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next