Advertisement

ಟೀಂ ಇಂಡಿಯಾದ ನೂತನ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆ ಆಗಿಲ್ಲ; ಬಿಸಿಸಿಐ

04:49 PM Jul 11, 2017 | Team Udayavani |

ನವದೆಹಲಿ: ಟೀಂ ಇಂಡಿಯಾದ ನೂತನ ಕೋಚ್ ಆಗಿ ನಿರೀಕ್ಷೆಯಂತೆಯೇ ರವಿಶಾಸ್ತ್ರಿ ಅವರನ್ನು ಮಂಗಳವಾರ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಏತನ್ಮಧ್ಯೆ ನೂತನ ಕೋಚ್ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಬಿಸಿಸಿಐ ಹೇಳಿದೆ.

Advertisement

ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಸುದ್ದಿಗೋಷ್ಠಿ ನಡೆಸಿ, ಟೀಂ ಇಂಡಿಯಾಕ್ಕೆ ಕೋಚ್ ಆಗಿ ರವಿಶಾಸ್ತ್ರಿ ಅವರ ಹೆಸರನ್ನೂ ಕೂಡಾ ಅಂತಿಮಗೊಳಿಸಲಾಗಿಲ್ಲ ಎಂದು ತಿಳಿಸಿದರು.

ರವಿಶಾಸ್ತ್ರಿ ಅವರನ್ನು ಬಿಸಿಸಿಐನ ನೂತನ ಕೋಚ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಪ್ರಸಾರ ಮಾಡಿದ್ದವು. ಬಿಸಿಸಿಐನ ಮುಖ್ಯ ಕಚೇರಿಯಲ್ಲಿ ಸೋಮವಾರ ಕ್ರಿಕೆಟ್ ಸಲಹಾ ಸಮಿತಿ ಮಾಜಿ ಕೋಚ್ ರವಿಶಾಸ್ತ್ರಿ ಅವರ ಸಂದರ್ಶನವನ್ನು ನಡೆಸಿತ್ತು ಎಂದು ವಿವರಿಸಿದ್ದವು.

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಂದ ತೆರವಾಗಿದ್ದ ಕೋಚ್ ಸ್ಥಾನಕ್ಕೆ ಈ ರವಿಶಾಸ್ತ್ರಿ ಅರ್ಜಿ ಸಲ್ಲಿಸಿದ್ದರು. ಕೋಚ್ ರೇಸ್ ನ ಆಯ್ಕೆಯಲ್ಲಿ ಆರು ಮಂದಿಯ ಹೆಸರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next