Advertisement

Ravi Bishnoi: ಟಿ20 ವಿಶ್ವಕಪ್‌ಗೆ ತೃತೀಯ ಸ್ಪಿನ್ನರ್‌?

11:17 PM Dec 04, 2023 | Team Udayavani |

ಹೊಸದಿಲ್ಲಿ: ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ಮುಂದಿನ ವರ್ಷದ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಟೀಮ್‌ ಇಂಡಿಯಾದ ತೃತೀಯ ಸ್ಪಿನ್ನರ್‌ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವುದು ಬಹುತೇಕ ಖಚಿತ. ಅವರು ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ತಂಡಕ್ಕೆ ಆಯ್ಕೆಯಾಗು ವುದರೊಂದಿಗೆ ಇಂಥದೊಂದು ಸಾಧ್ಯತೆ ತೆರೆದುಕೊಂಡಿದೆ.

Advertisement

ಇದರಿಂದ ಹಿರಿಯ ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಅವರಿಗೆ ಟಿ20 ಬಾಗಿಲು ಬಹುತೇಕ ಮುಚ್ಚಲ್ಪಟ್ಟಿದೆ. ದಕ್ಷಿಣ ಆಫ್ರಿಕಾ ಸರಣಿಗೆ ಚಹಲ್‌ ಬದಲು ಬಿಷ್ಣೋಯಿ ಅವಕಾಶ ಪಡೆದ ಕಾರಣ, ಟಿ20 ವಿಶ್ವಕಪ್‌ಗ್ೂ ಇವರೇ ಮುಂದುವರಿಯುವುದು ಖಚಿತ ಎಂದೇ ವಿಶ್ಲೇಷಿಸಲಾಗುತ್ತಿದೆ.

ಚಹಲ್‌ಗಿಂತ ಕಿರಿಯ
ಚಹಲ್‌ಗೆ ಹೋಲಿಸಿದರೆ ಬಿಷ್ಣೋಯಿ 10 ವರ್ಷ ಕಿರಿಯ. ಚಹಲ್‌ಗೆ 33 ವರ್ಷವಾದರೆ, ಬಿಷ್ಣೋಯಿಗೆ 23 ವರ್ಷ. ಚಹಲ್‌ ಈ ವರ್ಷದ 9 ಟಿ20 ಪಂದ್ಯಗಳಲ್ಲಿ 9 ವಿಕೆಟ್‌ ಉರುಳಿಸಿದರೆ, ಬಿಷ್ಣೋಯಿ 11 ಪಂದ್ಯಗಳಿಂದ 18 ವಿಕೆಟ್‌ ಕೆಡವಿದ್ದಾರೆ. ರವಿವಾರವಷ್ಟೇ ಮುಗಿದ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ಬಿಷ್ಣೋಯಿ “ಮ್ಯಾನ್‌ ಆಫ್ ದ ಸೀರಿಸ್‌’ ಗೌರವಕ್ಕೆ ಭಾಜನ ರಾಗಿದ್ದನ್ನು ಮರೆಯುವಂತಿಲ್ಲ.

ಇಲ್ಲಿ ಸಾಧನೆ ಹಾಗೂ ಭವಿಷ್ಯಕ್ಕಿಂತ ಮುಖ್ಯವಾಗಿ ಯಾವುದೇ ಪರಿಸ್ಥಿತಿ ಯಲ್ಲೂ ವಿಕೆಟ್‌ ಕೀಳುವ ಸಾಮರ್ಥ್ಯ ಹೊಂದಿ ರುವುದು ರವಿ ಬಿಷ್ಣೋಯಿ ವೈಶಿಷ್ಟé. ಆದರೆ ಇದಕ್ಕೆ ವಿಶಾಖಪಟ್ಟಣ ದಲ್ಲಿ ಸಾಗಿದ ಆಸ್ಟ್ರೇಲಿಯ ವಿರುದ್ಧದ ಮೊದಲ ಪಂದ್ಯ ಮಾತ್ರ ಅಪವಾದ ವಾಗಿತ್ತು. ಅಲ್ಲಿ 54 ರನ್‌ ಸೋರಿ ಹೋಗಿತ್ತು. ಜತೆಗೆ ಫೀಲ್ಡಿಂಗ್‌ ಕೂಡ ಕಳಪೆ ಆಗಿತ್ತು. ಆದರೆ ಸರಣಿ ಮುಂದು ವರಿದಂತೆ ಬಿಷ್ಣೋಯಿ ತಮ್ಮ ತಪ್ಪನ್ನು ತಿದ್ದಿಕೊಳ್ಳುವಲ್ಲಿ ಯಶಸ್ವಿ ಯಾದರು.

ಈ ಸರಣಿಯಲ್ಲಿ ಬಿಷ್ಣೋಯಿ 20 ಓವರ್‌ ಎಸೆದಿದ್ದು, ಇದರಲ್ಲಿ 7 ಓವರ್‌ಗಳನ್ನು ಪವರ್‌ ಪ್ಲೇಯಲ್ಲಿ ಎಸೆದಿರುವುದು ಗಮನಾರ್ಹ. ಇಲ್ಲಿ 6.45ರ ಇಕಾನಮಿ ರೇಟ್‌ನಲ್ಲಿ 5 ವಿಕೆಟ್‌ ಉರುಳಿಸಿದ್ದು, 20 ಡಾಟ್‌ ಬಾಲ್‌ ಎಸೆದಿದ್ದೆಲ್ಲ ಬಿಷ್ಣೋಯಿ ಸಾಧನೆಗೆ ಸಾಕ್ಷಿ. ಬ್ಯಾಟಿಂಗ್‌ ಟ್ರ್ಯಾಕ್‌ನಲ್ಲೂ ಬಿಷ್ಣೋಯಿ ಎಸೆತಗಳನ್ನು ಎದುರಿಸುವುದು ಸುಲಭ ವಲ್ಲ ಎಂದು ಆಸ್ಟ್ರೇಲಿಯ ತಂಡದ ನಾಯಕ ಮ್ಯಾಥ್ಯೂ ವೇಡ್‌ ಹೇಳಿರು ವುದು ಭಾರತದ ಯುವ ಬೌಲರ್‌ಗೆ ನೀಡಿದ ಸರ್ಟಿಫಿಕೆಟ್‌ ಆಗಿದೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next