Advertisement

ಆಸ್ಟ್ರೇಲಿಯ ಓಪನ್‌ ಟೆನಿಸ್‌ಗೆ ಈಗ ಇಲಿ ಕಾಟ

08:41 AM Jan 18, 2021 | Team Udayavani |

ಮೆಲ್ಬರ್ನ್: ಅಬುಧಾಬಿ ಮತ್ತು ಲಾಸ್‌ ಏಂಜಲೀಸ್‌ನಿಂದ ಮೆಲ್ಬರ್ನ್ಗೆ ತೆರಳಿದ ಎರಡು ವಿಶೇಷ ವಿಮಾನಗಳಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಪರಿಣಾಮ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ನಲ್ಲಿ ಭಾಗವಹಿಸಬೇಕಿರುವ 47 ಆಟಗಾರರು 14 ದಿನಗಳ ಬಿಗಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

Advertisement

ಈ ಪಟ್ಟಿಯಲ್ಲಿ ಕಝಕ್‌ಸ್ತಾನದ ಯುಲಿಯ ಪುಟಿನ್‌ತ್ಸೆವಾ ಕೂಡಾ ಸೇರಿದ್ದಾರೆ. ಇಷ್ಟರ ಮಧ್ಯೆ ಸಂಘಟಕರಿಗೆ ಇನ್ನೊಂದು ತಲೆನೋವು ಎದುರಾಗಿದೆ. ಪುಟಿನ್‌ತ್ಸೆವಾ ಉಳಿದು ಕೊಂಡಿರುವ ಮೆಲ್ಬರ್ನ್ ಹೋಟೆಲ್‌ ಕೊಠಡಿಯಲ್ಲಿ ಇಲಿ ಕಾಣಿಸಿಕೊಂಡಿದೆ. ಅದನ್ನು ನೋಡಿ ಅವರು ಗಾಬರಿಯಾಗಿದ್ದಾರೆ. 2 ಗಂಟೆ ಕಾದರೂ ಕೊರೊನಾ ಭೀತಿಯಿಂದ ಇಲಿಯನ್ನು ಹೊರಹಾಕಲು ಹೋಟೆಲ್‌ ಸಿಬ್ಬಂದಿಯೂ ಬಂದಿಲ್ಲ! ಆ ಕೊಠಡಿಯನ್ನೇ ಬದಲಿಸಲು ಪುಟಿನ್‌ತ್ಸೆವಾ ಮುಂದಾಗಿದ್ದಾರೆ.

ಇದನ್ನೂ ಓದಿ:ಸಿರಾಜ್ ಶಿಸ್ತುಬದ್ಧ ದಾಳಿ: ಮೊದಲ ಸೆಶನ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್

ಮೊದಲೇ ಕ್ವಾರಂಟೈನ್‌ ತಲೆಬಿಸಿಯಲ್ಲಿದ್ದ ಅವರು, ಈ ಇಲಿಯನ್ನು ನೋಡಿ ಇನ್ನಷ್ಟು ಬೇಸತ್ತಿದ್ದಾರೆ. ಇನ್ನೊಂದು ಕಡೆ ಸಾಮಾಜಿಕತಾಣಗಳಲ್ಲಿ ಆಟಗಾರರು ಸಣ್ಣಸಣ್ಣದಕ್ಕೆಲ್ಲ ತಗಾದೆ ತೆಗೆಯುತ್ತಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿವೆ. ಅದಕ್ಕೆ ಉತ್ತರಿಸಿರುವ ಆಟಗಾರರು, ನಮಗೆ ಕ್ವಾರಂಟೈನ್‌ ಬಗ್ಗೆ ಬೇಸರವಿಲ್ಲ. ತಾರತಮ್ಯದ ಬಗ್ಗೆ ಮಾತ್ರ ಬೇಸರವಿದೆ. ಮಹತ್ವದ ಕೂಟ ಎದುರಿಗಿರುವಾಗ ಅಸಮ ಅಭ್ಯಾಸ/ಆಟದ ವ್ಯವಸ್ಥೆ ಸರಿಯಲ್ಲ ಎಂದು ಹೇಳಿದ್ದಾರೆ. ಕ್ವಾರಂಟೈನ್‌ಗೆ ಒಳಪಡುವ ಆಟಗಾರರಿಗೆ ಸೂಕ್ತ ಅಭ್ಯಾಸ ನಡೆಸಲು ಸಾಧ್ಯವಿಲ್ಲದಿರುವುದು ದೂರಿಗೆ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next