Advertisement

ಟಿ20 ದಾಖಲೆಯತ್ತ ರಶೀದ್‌ ಖಾನ್‌

06:00 AM Dec 21, 2018 | |

ಬ್ರಿಸ್ಬೇನ್‌: ಅಫ್ಘಾನಿಸ್ಥಾನದ ಖ್ಯಾತ ಸ್ಪಿನ್ನರ್‌ ರಶೀದ್‌ ಖಾನ್‌ ಟಿ20 ಕ್ರಿಕೆಟ್‌ನಲ್ಲಿ ಐತಿಹಾಸ ದಾಖಲೆಯತ್ತ ದಾಪುಗಾಲಿಡುತ್ತಿದ್ದಾರೆ.  ಅಂತಾರಾಷ್ಟ್ರೀಯ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದಕೊಂಡಿರುವ ರಶೀದ್‌ ಖಾನ್‌, ಕ್ಯಾಲೆಂಡರ್‌ ವರ್ಷವೊಂದರ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಕಿತ್ತು ದಾಖಲೆ ಬರೆಯುವ ಎಲ್ಲ ಸಾಧ್ಯತೆ ಹೊಂದಿದ್ದಾರೆ. 

Advertisement

ರಶೀದ್‌ ಈ ವರ್ಷ ಈಗಾಗಲೇ 87 ವಿಕೆಟ್‌ಗಳ ಗಡಿ ದಾಟಿ ವೆಸ್ಟ್‌ ಇಂಡೀಸಿನ ಡ್ವೇನ್‌ ಬ್ರಾವೊ  ದಾಖಲೆಯನ್ನು ಮುರಿದಿದ್ದಾರೆ. ಬ್ರಾವೊ 2016ರಲ್ಲಿ 87 ವಿಕೆಟ್‌ ಉರುಳಿಸಿದ್ದರು. ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಿಗ್‌ ಬಾಶ್‌ ಲೀಗ್‌ನಲ್ಲಿ ಆಡುತ್ತಿರುವ ರಶೀದ್‌ ಮುಂದೆ “ವಿಕೆಟ್‌ ಶತಕ’ದ ಉಜ್ವಲ ಅವಕಾಶವಿದೆ. ಅಡಿಲೇಡ್‌ ಸ್ಟ್ರೀಕರ್‌ ತಂಡದ ಪರವಾಗಿ ಆಡುತ್ತಿರುವ ರಶೀದ್‌ ಈ ಆವೃತ್ತಿಯನ್ನು ಅತ್ಯುತ್ತಮ ರೀತಿಯಲ್ಲಿ ಆರಂಭಿಸಿದ್ದಾರೆ. ಬ್ರಿಸ್ಬೇನ್‌ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು 19 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದಾರೆ. ಸದ್ಯ ರಶೀದ್‌ ಈ ವರ್ಷ ಆಡಿರುವ 57 ಟಿ20 ಪಂದ್ಯಗಳಲ್ಲಿ 92 ವಿಕೆಟ್‌ ಕಿತ್ತಿದ್ದು, ಇನ್ನೂ 3 ಪಂದ್ಯಗಳನ್ನು ಆಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next