Advertisement

Kho Kho ಇಂಡಿಯಾಕ್ಕೆ ಒಡಿಶಾ ಪ್ರಾಯೋಜಕತ್ವ

11:28 PM Jan 06, 2025 | Team Udayavani |

ಭುವನೇಶ್ವರ: ಭಾರತೀಯ ಹಾಕಿಗೆ ಪ್ರಾಯೋಜಕತ್ವ ನೀಡಿ ಯಶಸ್ಸಿನ ಪಥದತ್ತ ಕೊಂಡೊಯ್ದ ಬೆನ್ನಲ್ಲೇ ಒಡಿಶಾ ಸರಕಾರವೀಗ ಭಾರತದ ಖೋ ಖೋ ತಂಡಕ್ಕೂ 3 ವರ್ಷಗಳ ಪ್ರಾಯೋಜಕತ್ವ ನೀಡಲು ನಿರ್ಧರಿಸಿದೆ.

Advertisement

ಒಡಿಶಾದ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ಸೋಮವಾರ ಈ ಘೋಷಣೆ ಮಾಡಿದರು. ಇದು 15 ಕೋಟಿ ರೂ. ಮೊತ್ತದ ಪ್ಯಾಕೇಜ್‌ ಆಗಿದೆ. ಅದರಂತೆ 2025ರ ಜನವರಿ ಯಿಂದ ಮೊದಲ್ಗೊಂಡು 2027ರ ಡಿಸೆಂಬರ್‌ ತನಕ ಖೋ ಖೋ ಇಂಡಿಯಾಗೆ ವಾರ್ಷಿಕ 5 ಕೋಟಿ ರೂ. ಆರ್ಥಿಕ ನೆರವು ನೀಡಲಿದೆ.

“ಭಾರತೀಯ ಖೋ ಖೋ ಪಾಲಿಗೆ ಇದೊಂದು ಸ್ಮರಣೀಯ ಕ್ಷಣವಾಗಿದೆ. ನಮ್ಮ ಸ್ಥಳೀಯ ಕ್ರೀಡೆಗ ಳನ್ನು ಬೆಂಬಲಿಸುವ ಮೂಲಕ ನಾವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಷ್ಟೇ ಅಲ್ಲ, ಕ್ರೀಡಾಪಟು ಗಳಿಗೆ ಹೆಚ್ಚಿನ ಅವಕಾಶವನ್ನು ಸೃಷ್ಟಿಸುತ್ತಿ ದ್ದೇವೆ’ ಎಂದು ಮಾಝಿ ಹೇಳಿದರು.

ಒಡಿಶಾ ಸರಕಾರದ ಈ ನಿರ್ಧಾರ ವನ್ನು ಭಾರತೀಯ ಖೋ ಖೋ ಫೆಡರೇಶನ್‌ ಅಧ್ಯಕ್ಷ ಸುಧಾಂಶು ಮಿತ್ತಲ್‌ ಸ್ವಾಗತಿಸಿದ್ದಾರೆ. “ಈ ನಿರ್ಧಾರದಿಂದ ನಮ್ಮ ಸಾಂಪ್ರದಾಯಿಕ ಕ್ರೀಡೆ ನೂತನ ಎತ್ತರ ತಲುಪಲಿದೆ. ಜಾಗತಿಕ ಮಟ್ಟದಲ್ಲಿ ಖೋ ಖೋವನ್ನು ಉತ್ತೇಜಿಸುವ ನಮ್ಮ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next