Advertisement

ಅಫ್ಘಾನ್ ನಲ್ಲಿ ಆತಂಕ: ಐಪಿಎಲ್ ನಲ್ಲಿ ಆಡಲಿದ್ದಾರಾ ರಶೀದ್ ಖಾನ್, ಮೊಹಮ್ಮದ್ ನಬಿ?

02:24 PM Aug 16, 2021 | Team Udayavani |

ಮುಂಬೈ: ಅಫ್ಘಾನಿಸ್ಥಾನದಲ್ಲಿ ಪರಿಸ್ಥಿತಿ ವಿಷಮವಾಗಿದೆ. ತಾಲಿಬಾನ್ ಉಗ್ರ ಸಂಘಟನೆಯು ರವಿವಾರ ಸಂಪೂರ್ಣ ಅಫ್ಘಾನ್ ನಲ್ಲಿ ತನ್ನ ಹಿಡಿತ ಸಾಧಿಸಿರುವುದಾಗಿ ಹೇಳಿಕೊಂಡಿದೆ. ಈ ಮಧ್ಯೆ ಅಫ್ಘಾನ್ ನ ಕ್ರಿಕೆಟ್ ಆಟಗಾರರು ಐಪಿಎಲ್ ನ ಮುಂದುವರಿದ ಭಾಗದಲ್ಲಿ ಆಡಲಿದ್ದಾರೆಯೇ ಎನ್ನುವ ಪ್ರಶ್ನೆಗಳು ಎದ್ದಿವೆ.

Advertisement

ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಮತ್ತು ಆಲ್ ರೌಂಡರ್ ಮೊಹಮ್ಮದ್ ನಬಿ ಅವರು ಯುಎಇ ನಲ್ಲಿ ನಡೆಯಲಿರುವ ಐಪಿಎಲ್ ನಲ್ಲಿ ಆಡಲಿದ್ದಾರೆ ಎಂದು ಫ್ರಾಂಚೈಸಿ ಹೇಳಿದೆ.

ಎಸ್ ಆರ್ ಎಚ್ ತಂಡದ ಸಿಎಓ ಕೆ.ಷಣ್ಮುಗನ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಇಬ್ಬರೂ ಆಟಗಾರರು ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದಿದ್ದಾರೆ. ನಾವು ಇದುವರೆಗೂ ಅವರಿಬ್ಬರ ಜೊತೆ ಪ್ರಸಕ್ತ ವಿಚಾರಗಳ ಬಗ್ಗೆ ಮಾತನಾಡಿಲ್ಲ. ಆದರೆ ಅವರಿಬ್ಬರೂ ಐಪಿಎಲ್ ನ ಮುಂದುವರಿದ ಭಾಗಕ್ಕೆ ಲಭ್ಯವಾಗಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:‘ಸರಿಯಾಗಿ ರಾಷ್ಟ್ರಗೀತೆ ಹಾಡಿ’ ಎಂದ ವ್ಯಕ್ತಿಗೆ ನಟ ಸುದೀಪ್ ಹೇಳಿದ್ದೇನು ?

ಸನ್ ರೈಸರ್ಸ್ ಹೈದರಾಬಾದ್ ತಂಡ ತಿಂಗಳ ಅಂತ್ಯಕ್ಕೆ ಅಂದರೆ ಆಗಸ್ಟ್ 31ಕ್ಕೆ ಯುಎಇ ಗೆ ತೆರಳಲಿದೆ ಎಂದು ಷಣ್ಮುಗನ್ ಹೇಳಿದರು. ಸೆ.19ರಿಂದ ಐಪಿಎಲ್ ಮುಂದುವರಿದ ಭಾಗ ಆರಂಭವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next