Advertisement

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

05:23 PM Sep 19, 2021 | Team Udayavani |

ಉಡುಪಿ : ಪರ್ಕಳ ರಾ.ಹೆ. 169 (ಎ) ಭೂ ಸಂತ್ರಸ್ತರಿಗೆ ಶೀಘ್ರ ಪರಿಹಾರ ಹಣ ಬಿಡುಗಡೆಗೆ ಮತ್ತು ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ರವಿವಾರ ಪರ್ಕಳದ ಬಾಬುರಾಯ ಸರ್ಕಲ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆ‌ಸಲಾಯಿತು.

Advertisement

ಪರ್ಕಳ ಪ್ರದೇಶದಲ್ಲಿ ಹಾದು ಹೋಗುವ ರಾ.ಹೆ.169ಎ ಸಂಪೂರ್ಣ ಹದಗೆಟ್ಟಿರುವುದರಿಂದ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ. ಇದರ ಜತೆಗೆ ಭೂಸಂತ್ರಸ್ತರಿಗೆ ಕಳೆದ ನಾಲ್ಕು ತಿಂಗಳಿಂದ ಪರಿಹಾರ ಹಣ ಬಿಡುಗಡೆ ಮಾಡದೆ ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಕಾರರು ಆರೋಪಿದರು. ಇದೇ ವೇಳೆ ಹದಗೆಟ್ಟ ರಸ್ತೆಯಲ್ಲಿ ಬಾಳೆಗಿಡ ನೆಡವು ಮೂಲಕ ಜಿಲ್ಲಾಡಳಿತ ಹಾಗೂ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ರಾಷ್ಟ್ರೀಯ ಹೆದ್ದಾರಿ ವಿಚಾರವಾಗಿ ಪರ್ಕಳದ ಜನತೆ ಕಳೆದ ಎರಡು ವರ್ಷಗಳಿಂದ ಕಷ್ಟ ಅನುಭವಿಸುತ್ತಿದ್ದಾರೆ. ಈಗಿನ ಜನಪ್ರತಿನಿಧಿಗಳು ಇದನ್ನು ನೋಡಿಯೂ ನೋಡದಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಶಾಸಕರು, ಸಂಸದರು ಎಚ್ಚೆತ್ತು ಕೂಡಲೇ ರಸ್ತೆಯ ಕಾಮಗಾರಿ ಅವಧಿಯೊಳಗೆ ಪೂರ್ಣ ಗೊಳಿಸಬೇಕು ಮತ್ತು ಭೂಸಂತ್ರಸ್ತರಿಗೆ ಪರಿಹಾರ ಹಣ ಶೀಘ್ರ ಬಿಡುಗಡೆ ಮಾಡಬೇಕು ಒತ್ತಾಯಿಸಿದರು.

ಇದನ್ನೂ ಓದಿ :ಕುಟುಂಬದವರಿಗೆ ವಿಷವುಣಿಸಿ ಪ್ರಿಯಕರನೊಂದಿಗೆ ಪರಾರಿಯಾದ ಯುವತಿ

ಭೂಸಂತ್ರಸ್ತ ಗೋಪಾಲ ಆಚಾರ್ಯ ಮಾತನಾಡಿ, ಪರಿಹಾರ ನೀಡುವ ಬಗ್ಗೆ ಸಭೆ ನಡೆಸಿ ನಾಲ್ಕು ತಿಂಗಳು ಕಳೆ‌ದರೂ ನಮ್ಮ ಖಾತೆಗೆ ಯಾವುದೇ ಪರಿಹಾರ ಹಣ ಬಂದಿಲ್ಲ. ಎಲ್ಲ ದಾಖಲೆಗಳನ್ನು ನೀಡಿ, ಭೂಮಿ ಬಿಟ್ಟು ಕೊಟ್ಟರೂ ಜಿಲ್ಲಾಡಳಿತ ಹಾಗೂ ಸರಕಾರ ಈ ವಿಚಾರದಲ್ಲಿ ವಿಳಂಬ ಮಾಡುತ್ತಿದೆ. ನಮ್ಮ ಅಂಗಡಿ, ಮನೆಗಳನ್ನು ಈಗಾಗಲೇ ತೆರವು ಮಾಡಿದ್ದಾರೆ. ಆದರೆ ಕೊಟ್ಟ ಭರವಸೆ ಮಾತ್ರ ಇನ್ನೂ ಈಡೇರಿಸಿಲ್ಲ ಎಂದು ದೂರಿದರು.

Advertisement

ಕಾಂಗ್ರೆಸ್‌ ಮುಖಂಡ ಅಮೃತ ಶೆಣೈ ಮಾತನಾಡಿ, ಪರ್ಕಳದ ಅಂಗಡಿಗಳನ್ನು ತೆರವುಗೊಳಿಸಿ ಪರಿಹಾರ ನೀಡದ ಪರಿಣಾಮ ಭೂಸಂತ್ರಸ್ತರಿಗೆ ಅತ್ತ ಹಣವೂ ಇಲ್ಲ, ಇತ್ತ ಜೀವನ ಸಾಗಿಸಲು ದಾರಿಯೂ ಇಲ್ಲವಾಗಿದೆ. ಅದೇ ರೀತಿ ಇಲ್ಲಿನ ರಸ್ತೆ ಕೂಡ ಸಂಪೂರ್ಣ ಮಾಡಿಕೊಡಲಾಗುತ್ತಿದೆ. ಇದೀಗ ಸಾಂಕೇತಿಕವಾಗಿ ಮಾತ್ರ ಪ್ರತಿಭಟನೆ ನಡೆಸಲಾಗಿದೆ. ಮುಂದಿನ 15 ದಿನಗಳೊಳಗೆ ಪರಿಹಾರ ಹಾಗೂ ರಸ್ತೆ ದುರಸ್ತಿ ಮಾಡದಿದ್ದರೆ ರಸ್ತೆ ತಡೆ ತೀವ್ರ ಹೋರಾಟ ನಡೆಸಲಾಗು ವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ :ಕೋವಿಡ್ ಸಮಯದಲ್ಲಿ ಮನಮೋಹನ್‌ ಸಿಂಗ್ ಪಿಎಂ ಆಗಿದ್ದರೆ ಏನಾಗಿರುತ್ತಿತ್ತೋ: ಅರುಣ್ ಸಿಂಗ್ ಲೇವಡಿ

ಕಾಂಗ್ರೆಸ್‌ ಮುಖಂಡರಾದ ಸುಕೇಶ್‌ ಕುಂದರ್‌ ಹೆರ್ಗ, ಮೋಹನ್‌ದಾಸ್‌ ನಾಯಕ್‌, ಗಣೇಶ್‌ರಾಜ್ ಸರಳೇಬೆಟ್ಟು, ಗಣೇಶ್‌ ನೆರ್ಗಿ, ಸುಧಾಕರ್‌ ಪೂಜಾರಿ, ಸದಾನಂದ ಪೂಜಾರಿ, ಸತೀಶ್‌ ಶೆಟ್ಟಿ ಕೆಳಪರ್ಕಳ, ಅಶೋಕ್‌ ಸಾಲಿಯಾನ್‌ ಹೆರ್ಗ, ಗಣೇಶ್‌ ಮಾರುತಿನಗರ, ನವೀನ್‌ ಪೂಜಾರಿ ಶೆಟ್ಟಿಬೆಟ್ಟು, ದಿನೇಶ್‌ ಪೂಜಾರಿ ಮದಗ, ತುಳಜಾ ಉಪೇಂದ್ರ ನಾಯ್ಕ, ಶಂಭು ಶೆಟ್ಟಿ, ರಾಜೇಶ್ ಪ್ರಭು ಪರ್ಕಳ ಮೊದಲಾದವರು ಉಪಸ್ಥಿತರಿದ್ದರು. ಮುಖೇಶ್‌ ಶೆಟ್ಟಿಗಾರ್‌ ಸ್ವಾಗತಿಸಿದರು. ವೆಂಕಟೇಶ್‌ ಶೆಟ್ಟಿಗಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next