Advertisement

ರಣಜಿ: ಗುಜರಾತ್‌ಗೆ 100 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ

03:45 AM Jan 13, 2017 | Harsha Rao |

ಇಂದೋರ್‌: ಶ್ರೇಯಸ್‌ ಅಯ್ಯರ್‌ ಅವರ ತಾಳ್ಮೆಯ ಅರ್ಧಶತಕದಿಂದಾಗಿ ಹಲವು ಬಾರಿಯ ಚಾಂಪಿಯನ್‌ ಮುಂಬಯಿ ತಂಡವು ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ ಫೈನಲ್‌ನಲ್ಲಿ ತನ್ನ ಹೋರಾಟವನ್ನು ಮುಂದುವರಿಸಿದೆ. 

Advertisement

ಮೊದಲ ಇನ್ನಿಂಗ್ಸ್‌ ಮುನ್ನಡೆಯನ್ನು ಗುಜರಾತ್‌ಗೆ ಬಿಟ್ಟುಕೊಟ್ಟ ಬಳಿಕ ಮುಂಬಯಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಆಟದ ಪ್ರದರ್ಶನ ನೀಡಿದ್ದು ಗೆಲುವಿನ ವಿಶ್ವಾಸ ಮೂಡಿಸಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಮುಂಬಯಿ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟಿಗೆ 208 ರನ್‌ ಗಳಿಸಿದೆ. ಈಗಾಗಲೇ 108 ರನ್‌ ಮುನ್ನಡೆ ಸಾಧಿಸಿರುವ ಮುಂಬಯಿ ನಾಲ್ಕನೇ ದಿನ ಈ ಮುನ್ನಡೆಯನ್ನು ಮುನ್ನೂರಕ್ಕಿಂತ ಹೆಚ್ಚಿನ ಮೊತ್ತಕ್ಕೇರಿಸಿದರೆ ಗೆಲುವಿಗೆ ಪ್ರಯತ್ನಿಸಬಹುದು. ಇನ್ನೆರಡು ದಿನಗಳ ಆಟ ಬಾಕಿ ಉಳಿದಿರುವುದರಿಂದ ಗುಜರಾತ್‌ ಬಹಳಷ್ಟು ಜಾಗ್ರತೆ ವಹಿಸಿ ಆಡಬೇಕಾಗಿದೆ. 

ಆರು ವಿಕೆಟಿಗೆ 291 ರನ್ನಿನಿಂದ ದಿನದಾಟ ಆರಂಭಿಸಿದ ಗುಜರಾತ್‌ ಹೆಚ್ಚು ಹೊತ್ತು ಆಡಲು ವಿಫ‌ಲವಾಯಿತು. ಠಾಕುರ್‌ ಮತ್ತು ಬಲ್ವಿಂದರ್‌ ಸಂಧು ದಾಳಿಗೆ ಕುಸಿದ ಗುಜರಾತ್‌ 37 ರನ್‌ ಪೇರಿಸುವಷ್ಟರಲ್ಲಿ ಆಲೌಟಾಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 100 ರನ್‌ ಮುನ್ನಡೆ ಪಡೆಯಿತು. 

ಶಾದೂìಲ್‌ ಠಾಕುರ್‌ 84 ರನ್ನಿಗೆ 4 ವಿಕೆಟ್‌ ಪಡೆದರೆ ಬಲ್ವಿಂದರ್‌ ಸಂಧು ಮತ್ತು ಅಭಿಷೇಕ್‌ ನಾಯರ್‌ ತಲಾ ಮೂರು ವಿಕೆಟ್‌ ಕಿತ್ತರು.

ಮುಂಬಯಿ ಹೋರಾಟ: ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮುಂಬಯಿ ಉತ್ತಮ ಹೋರಾಟ ನೀಡುವಲ್ಲಿ ಯಶಸ್ವಿಯಾಯಿತು. ತಂಡದ ಮೊತ್ತ 66 ರನ್‌ ತಲುಪಿದಾಗ ಆರಂಭಿಕರು ಪೆವಿಲಿಯನ್‌ ಸೇರಿಕೊಂಡ ಬಳಿಕ ಶ್ರೇಯಸ್‌ ಅಯ್ಯರ್‌ ಮತ್ತು ಸೂರ್ಯಕುಮಾರ್‌ ಯಾದವ್‌ ತಾಳ್ಮೆಯಿಂದ ಆಡಿ ತಂಡವನ್ನು ಆಧರಿಸಿದರು. ಅವರಿಬ್ಬರು ಮೂರನೇ ವಿಕೆಟಿಗೆ 127 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಉತ್ತಮವಾಗಿ ಆಡುತ್ತಿದ್ದ ಅಯ್ಯರ್‌ ಅಂತಿಮ ಅವಧಿಯ ಆಟದ ವೇಳೆ ಔಟಾದರು. 137 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 82 ರನ್‌ ಹೊಡೆದರು.

Advertisement

ದಿನದಾಟದ ಅಂತ್ಯಕ್ಕೆ ಸೂರ್ಯಕುಮಾರ್‌ ಯಾದವ್‌ (45 ಬ್ಯಾಟಿಂಗ್‌) ಮತ್ತು ನಾಯಕ ಆದಿತ್ಯ ತಾರೆ 13 ರನ್ನಿನಿಂದ ಆಡುತ್ತಿದ್ದಾರೆ. ಅವರಿಬ್ಬರು ನಾಲ್ಕನೇ ದಿನ ಗುಜರಾತ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಮೊತ್ತ ಪೇರಿಸಿದರೆ ಮುಂಬಯಿ ಗೆಲುವಿಗೆ ಪ್ರಯತ್ನಿಸಬಹುದು. 

ಸಂಕ್ಷಿಪ್ತ ಸ್ಕೋರು: ಮುಂಬಯಿ 228 ಮತ್ತು 3 ವಿಕೆಟಿಗೆ 208 (ಪೃಥ್ವಿ ಶಾ 44, ಶ್ರೇಯಸ್‌ ಅಯ್ಯರ್‌ 82, ಸೂರ್ಯಕುಮಾರ್‌ ಯಾದವ್‌ 45 ಬ್ಯಾಟಿಂಗ್‌, ಚಿಂತನ್‌ ಗಾಜ 54ಕ್ಕೆ 3); ಗುಜರಾತ್‌ 328 (ಭಾರ್ಗವ್‌ ಮೆರಾಯ್‌ 45, ಪಾರ್ಥಿವ್‌ ಪಟೇಲ್‌ 90, ಮನ್‌ಪ್ರೀತ್‌ ಜುನೇಜ 77, ರುಜುಲ್‌ ಭಟ್‌ 25, ರಶ್‌ ಕಲಾರಿಯ 27, ಶಾದೂìಲ್‌ ಠಾಕುರ್‌ 84ಕ್ಕೆ 4, ಬಲ್ವಿಂದರ್‌ ಸಂಧು 63ಕ್ಕೆ 3, ಅಭಿಷೇಕ್‌ ನಾಯರ್‌ 101ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next