ಇಂದೋರ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಉತ್ತರಾಖಂಡ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ನಡೆದ ಟಿ20 “ಬಿ’ ಬಣದ ಪಂದ್ಯದಲ್ಲಿ ಕರ್ನಾಟಕವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಉತ್ತರಾಖಂಡ ತಂಡವು ಆರಂಭಿಕ ಆಟಗಾರ ಯುವರಾಜ್ ಚೌಧರಿ ಅವರ 123 ರನ್ ನೆರವಿನಿಂದ 5 ವಿಕೆಟಿಗೆ 215 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಕುಸಿತ ಅನುಭವಿಸಿದ ಕರ್ನಾಟಕ ತಂಡವು 19.5 ಓವರ್‌ಗಳಲ್ಲಿ 209 ರನ್ನಿಗೆ ಆಲೌಟಾಯಿತು. ಕೃಷ್ಣನ್ ಶ್ರೀಜಿತ್ ಏಕಾಂಗಿಯಾಗಿ ಹೋರಾಡಿ 40 ಎಸೆತಗಳಿಂದ 72 ರನ್ ಗಳಿಸಿ ಅಜೇಯರಾಗಿ ಉಳಿದರು. 5 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರ್: ಉತ್ತರಾಖಂಡ 20 ಓವರ್, 215/5 (ಯುವರಾಜ್ 123, ಶ್ರೇಯಸ್ 30ಕ್ಕೆ 2), ಕರ್ನಾಟಕ 19.5 ಓವರ್, 209/10 (ಕೃಷ್ಣನ್ 72, ಹಿಮಾಂಶು 33ಕ್ಕೆ 3).
ಶ್ರೇಯಸ್ ಶತಕ, ತಿಲಕ್ ಸತತ 3ನೇ ಟಿ20 ಶತಕ:
“ಎ’ ಬಣದ ಪಂದ್ಯದಲ್ಲಿ ಹೈದರಾಬಾದ್ ಪರ ಆಡಿದ ತಿಲಕ್ ವರ್ಮ, ಮೇಘಾಲಯ ವಿರುದ್ಧ 151 ರನ್ ಗಳಿಸಿ ಗಮನ ಸೆಳೆದರು. ಇದರೊಂದಿಗೆ ಅವರು ಟಿ20ಯಲ್ಲಿ ಸತತ 3ನೇ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಇದಕ್ಕೂ ಮುನ್ನ ಅವರು ದಕ್ಷಿಣ ಆಫ್ರಿಕಾ ವಿರುದ್ಧ 2 ಶತಕಗಳನ್ನು ಬಾರಿಸಿದ್ದರು. ಪಂದ್ಯದಲ್ಲಿ ಮೇಘಾಲಯ ಗೆದ್ದಿತು. ಇನ್ನೊಂದು ಪಂದ್ಯದಲ್ಲಿ ಮುಂಬೈ ನಾಯಕ ಶ್ರೇಯಸ್ ಅಯ್ಯರ್, ಗೋವಾ ವಿರುದ್ಧ 120 ರನ್ ಸಿಡಿಸಿದರು. ಪಂದ್ಯದಲ್ಲಿ ಮುಂಬೈ 26 ರನ್‌ನಿಂದ ಜಯಿಸಿತು.