Advertisement
ಫೈಜ್ ಫಜಲ್ ನಾಯಕತ್ವದ ವಿದರ್ಭ ತಂಡದ್ದು ಈ ಬಾರಿ ಕನಸಿನ ಓಟ. ಅದು “ಡಿ’ ಗುಂಪಿನ ಅಗ್ರಸ್ಥಾನಿಯಾಗಿ ಮೊದಲ ಬಾರಿ ರಣಜಿ ಸೆಮಿಫೈನಲ್ ಪ್ರವೇಶಿಸಿದ್ದನ್ನು ಮರೆಯುವಂತಿಲ್ಲ. ಅಲ್ಲಿ ಬಲಿಷ್ಠ ಹಾಗೂ ನೆಚ್ಚಿನ ತಂಡವಾದ ಕರ್ನಾಟಕವನ್ನು ಮಣಿಸುವ ಮೂಲಕ ತಾನೆಷ್ಟು ಅಪಾಯಕಾರಿ ತಂಡ ಎಂಬುದನ್ನು ಸಾಬೀತುಪಡಿಸಿತ್ತು. ಈಗ ಪ್ರಥಮ ಬಾರಿ ಫೈನಲ್ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ. ವಿದರ್ಭದ ಈ ಅಜೇಯ ಓಟಕ್ಕೆ “ಸಂತಸದ ಮುಕ್ತಾಯ’ ಲಭಿಸೀತೇ ಎಂಬುದು ಕ್ರಿಕೆಟ್ ಪ್ರೇಮಿಗಳ ಕೌತುಕ.
ನಾಯಕ ಫೈಜ್ ಫಜಲ್ ಹೇಳುವಂತೆ ವಿದರ್ಭ “ಅಂಡರ್ ಡಾಗ್ಸ್’ ತಂಡ. ಗೆದ್ದರೆ ಬಂಪರ್, ಸೋತರೆ ಅವಮಾನವೇನಿಲ್ಲ. ಆದರೆ ಇಲ್ಲಿಯ ತನಕ ಬಂದು ಟ್ರೋಫಿ ಎತ್ತದೆ ಉಳಿಯುವುದರಲ್ಲಿ ಅರ್ಥವಿಲ್ಲ. ಅಂಡರ್ ಡಾಗ್ಸ್ ಆದರೂ “ಡೋಂಟ್ ಕೇರ್’ ರೀತಿಯಲ್ಲಿ ಆಡೋಣ ಎಂದು ಆತ್ಮವಿಶ್ವಾಸ ತುಂಬಿದ್ದಾರೆ ಫಜಲ್. ಅವರು ತಂಡದ ಭರವಸೆಯ ಆರಂಭಕಾರ. ಜತೆಗಾರ ಸಂಜಯ್ ರಾಮಸ್ವಾಮಿ ಕೂಡ ಕ್ರೀಸ್ ಆಕ್ರಮಿಸಿಕೊಳ್ಳಲು ಶಕ್ತರು. ಮುಂಬಯಿಯ ಮಾಜಿ ಆಟಗಾರ, ರಣಜಿಯಲ್ಲಿ ಸರ್ವಾಧಿಕ ರನ್ ಪೇರಿಸಿದ ದಾಖಲೆ ಹೊಂದಿರುವ ವಾಸಿಮ್ ಜಾಫರ್ ತಂಡದ ಆಧಾರಸ್ತಂಭ. ಕರ್ನಾಟಕವನ್ನು ತೊರೆದು ಹೋಗಿರುವ ಬ್ಯಾಟ್ಸ್‌ಮನ್ ಗಣೇಶ್ ಸತೀಶ್ ಕೂಡ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಎದ್ದು ಕಾಣುವ ಹೆಸರು ಮಧ್ಯಮ ವೇಗಿ ರಜನೀಶ್ ಗುರ್ಬಾನಿ ಅವರದು. ಗುರ್ಬಾನಿ ಕರ್ನಾಟಕದ ಮೇಲೆ ಹೇಗೆ ಆಕ್ರಮಣಗೈದರೆಂಬುದು ಗೊತ್ತೇ ಇದೆ. ದಿಲ್ಲಿ ವಿರುದ್ಧವೂ ಗುರ್ಬಾನಿ ಬೌಲಿಂಗ್ ಮ್ಯಾಜಿಕ್
ಮಾಡಿಯಾರೆಂಬುದು ತಂಡದ ನಿರೀಕ್ಷೆ.
Related Articles
7 ಸಲ ರಣಜಿ ಚಾಂಪಿಯನ್ ಆಗಿರುವ ದಿಲ್ಲಿ ತಂಡಕ್ಕೆ ಕಳೆದೊಂದು ದಶಕದಿಂದ ರಣಜಿ ಪ್ರಶಸ್ತಿ ಮರೀಚಿಕೆಯಾಗಿಯೇ ಉಳಿದಿದೆ. ಅದು ಕೊನೆಯ ಸಲ ಫೈನಲ್ ಪ್ರವೇಶಿಸಿದ್ದು, ಚಾಂಪಿಯನ್ ಆದದ್ದು 2007-08ರಲ್ಲಿ. ಅಂದು ಮುಂಬಯಿಯಲ್ಲಿ ನಡೆದ ಫೈನಲ್‌ನಲ್ಲಿ ಗೌತಮ್ ಗಂಭೀರ್ ನಾಯಕತ್ವದ ದಿಲ್ಲಿ ತಂಡ ಉತ್ತರಪ್ರದೇಶವನ್ನು 9 ವಿಕೆಟ್‌ಗಳಿಂದ ಮಣಿಸಿ ಟ್ರೋಫಿ ಹಿಡಿದಿತ್ತು. ಗಂಭೀರ್ ಮೊದಲ ಸರದಿಯಲ್ಲಿ ಸೊನ್ನೆಗೆ ಔಟಾದರೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜೇಯ 130 ರನ್ ಬಾರಿಸಿದ್ದರು. ಎಡಗೈ ಆರಂಭಕಾರ ಗಂಭೀರ್ ಈ ಸಲವೂ ದಿಲ್ಲಿ ತಂಡದಲ್ಲಿದ್ದಾರೆ, ಆದರೆ ನಾಯಕನಾಗಿ ಅಲ್ಲ. ತಂಡದ ಸಾರಥ್ಯ ಕೀಪರ್ ರಿಷಬ್ ಪಂತ್ ಹೆಗಲೇರಿದೆ.
Advertisement
ಗಂಭೀರ್ ಫಾರ್ಮ್ ದಿಲ್ಲಿಗೆ ನಿರ್ಣಾಯಕ. ಮಧ್ಯಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ 95 ರನ್ ಹೊಡೆದದ್ದು, ಬಂಗಾಲ ಎದುರಿನ ಸೆಮಿಫೈನಲ್‌ನಲ್ಲಿ ಸೆಂಚುರಿ ಬಾರಿಸಿದ್ದೆಲ್ಲ ಗಂಭೀರ್ ಬ್ಯಾಟಿಂಗ್ ಸಾಹಸವನ್ನು ತೆರೆದಿಡುತ್ತದೆ. ಈ ಎಡಗೈ ಆರಂಭಿಕನ ಜತೆಗಾರ ಕುಣಾಲ್ ಚಾಂಡೇಲ ಕೂಡ ಪ್ರಚಂಡ ಫಾರ್ಮ್ನಲ್ಲಿದ್ದಾರೆ.
ಸೆಮಿಫೈನಲ್‌ನಲ್ಲಿ ಬಂಗಾಲವನ್ನು ಇನ್ನಿಂಗ್ಸ್ ಸೋಲಿಗೆ ತಳ್ಳುವಲ್ಲಿ ಇವರಿಬ್ಬರ 232 ರನ್ ಜತೆಯಾಟ ನಿರ್ಣಾಯಕವಾಗಿತ್ತು. ನಿತೀಶ್ ರಾಣ, ಹಿಮ್ಮತ್ ಸಿಂಗ್, ಧ್ರುವ ಶೋರಿ ಬ್ಯಾಟಿಂಗ್ ವಿಭಾಗದ ಇತರ ಪ್ರಮುಖರು.ನವದೀಪ್ ಸೈನಿ, ವಿಕಾಸ್ ತೋಕಾಸ್, ಕುಲ್ವಂತ್ ಖೆಜೊÅàಲಿಯ ಬೌಲಿಂಗ್ ವಿಭಾಗದ ಹುರಿಯಾಳಾಗಿದ್ದಾರೆ. ಆದರೆ ಗಾತ್ರದಲ್ಲಿ ತುಸು ಚಿಕ್ಕದಾಗಿರುವ “ಹೋಳ್ಕರ್ ಸ್ಟೇಡಿಯಂ’ನಲ್ಲಿ ಬ್ಯಾಟ್ಸ್‌ಮನ್‌ಗಳು ಮೆರೆಯುವ ಸಾಧ್ಯತೆ ಹೆಚ್ಚಿದೆ. ಮೊನ್ನೆಯಷ್ಟೇ ಶ್ರೀಲಂಕಾ ವಿರುದ್ಧ ಇಲ್ಲಿ ನಡೆದ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮ 35 ಎಸೆತಗಳಿಂದ ಶತಕ ಸಿಡಿಸಿ ವಿಶ್ವದಾಖಲೆ ಸರಿಗಟ್ಟಿದ್ದನ್ನು ಮರೆಯುವಂತಿಲ್ಲ! ರಣಜಿ ತಂಡಗಳು
ವಿದರ್ಭ: ಫೈಜ್ ಫಜಲ್ (ನಾಯಕ), ಸಂಜಯ್ ರಾಮಸ್ವಾಮಿ, ವಾಸಿಮ್ ಜಾಫರ್, ಗಣೇಶ್ ಸತೀಶ್, ಅಪೂರ್ವ್ ವಾಂಖೇಡೆ, ವಿನೋದ್ ವಾಡ್ಕರ್ (ವಿ.ಕೀ.), ಆದಿತ್ಯ ಸರ್ವಟೆ, ಅಕ್ಷಯ್ ವಖಾರೆ, ಸಿದ್ದೇಶ್ ನೆರಾಲ್, ರಜನೀಶ್ ಗುರ್ಬಾನಿ, ಕಣ್ì ಶರ್ಮ, ಶಲಭ್ ಶ್ರೀವಾಸ್ತವ, ಸಿದ್ದೇಶ್ ವಾತ್, ಅಕ್ಷಯ್ ಕರ್ಣೆವಾರ್, ಸುನಿಕೇತ್ ಬಿಂಗೇವಾರ್, ರವಿಕುಮಾರ್ ಠಾಕೂರ್, ಆದಿತ್ಯ ಠಾಕ್ರೆ. ದಿಲ್ಲಿ: ರಿಷಬ್ ಪಂತ್ (ನಾಯಕ, ವಿ.ಕೀ.), ಗೌತಮ್ ಗಂಭೀರ್, ಕುಣಾಲ್ ಚಾಂಡೇಲ, ಧ್ರುವ ಶೋರಿ, ನಿತೀಶ್ ರಾಣ, ಹಿಮ್ಮತ್ ಸಿಂಗ್, ಮನನ್ ಶರ್ಮ, ವಿಕಾಸ್ ಮಿಶ್ರ, ವಿಕಾಸ್ ತೋಕಾಸ್, ನವದೀಪ್ ಸೈನಿ, ಕುಲ್ವಂತ್ ಖೆಜೊÅàಲಿಯಾ, ಆಕಾಶ್ ಸುದಾನ್, ಶಿವಂ ಶರ್ಮ, ಉನ್ಮುಕ್¤ ಚಂದ್, ಮಿಲಿಂದ್ ಕುಮಾರ್.