ಕೊಲಂಬೊ: ತೀವ್ರ ವಿರೋಧದ ನಡುವೆಯೂ ಆರ್ಥಿಕ ದುಸ್ಥಿತಿಗೆ ಸಿಲುಕಿಕೊಂಡಿರುವ ದ್ವೀಪರಾಷ್ಟ್ರ ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ರಾನಿಲ್ ವಿಕ್ರಮಸಿಂಘೆ ಗುರುವಾರ (ಜುಲೈ 21) ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ 24 ಗಂಟೆಯಲ್ಲಿ 21,566 ಕೋವಿಡ್ ಸೋಂಕು ಪ್ರಕರಣ ಪತ್ತೆ, 45 ಮಂದಿ ಸಾವು
ಬುಧವಾರ ಶ್ರೀಲಂಕಾ ಸಂಸತ್ ನಲ್ಲಿ ಅಧ್ಯಕ್ಷರಾಗಿ ಆಯ್ಕೆ ಮಾಡುವ ಬಗ್ಗೆ ನಿರ್ಣಯ ಮಂಡಿಸಿ ಅಂಗೀಕರಿಸಲಾಗಿತ್ತು. 225 ಸದಸ್ಯ ಬಲದ ಸಂಸತ್ ನಲ್ಲಿ ವಿಕ್ರಮಸಿಂಘೆ ಪರವಾಗಿ 134 ಮತಗಳನ್ನು ಪಡೆದು ದ್ವೀಪರಾಷ್ಟ್ರದ 9ನೇ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
ರಾನಿಲ್ ಅಧ್ಯಕ್ಷರನ್ನಾಗಿ ಮುಂದುವರಿಸಿರು ವುದು ಪ್ರತಿಭಟನಾಕಾರರ ಆಕ್ರೋಶಕ್ಕೂ ಕಾರಣ ವಾಗಿದೆ. ಏಕೆಂದರೆ, ಪ್ರಧಾನಿ ಹುದ್ದೆಯಲ್ಲಿದ್ದ ರಾನಿಲ್ ಪೂರ್ಣ ಪ್ರಮಾಣದಲ್ಲಿ ಅಧಿಕಾರದಿಂದ ಹೊರಕ್ಕೆ ಉಳಿಯಬೇಕು ಎನ್ನುವುದೇ ಅವರ ಆಗ್ರಹವಾಗಿದೆ.
“ರಾನಿಲ್ ರಾಜೀನಾಮೆ ಕೊಟ್ಟು ಮನೆಗೆ ಹೋಗಿ’ ಎಂದು ಪ್ರತಿಭಟನಾಕಾರರು ಘೋಷಣೆ ಹಾಕುತ್ತಿದ್ದಾರೆ. ನೂತನ ಅಧ್ಯಕ್ಷ ರಾಜಪಕ್ಸ ಕುಟುಂಬದ ನಿಕಟವರ್ತಿ. ಸಂಸತ್‌ನಲ್ಲಿ 134 ಮಂದಿ ರಾನಿಲ್ ಪರ ಮತಹಾಕಿದ್ದಾರೆ ಎಂದರೆ ನಂಬಲು ಅಸಾಧ್ಯವಾಗುತ್ತದೆ ಎಂದಿದ್ದಾರೆ.