Advertisement

ರಾಣಿಬೆನ್ನೂರ: ಋತುಸ್ರಾವದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ಮಂಜುಳಾ

03:46 PM May 31, 2023 | Team Udayavani |

ರಾಣಿಬೆನ್ನೂರ: ಹೆಣ್ಣುಮಕ್ಕಳಲ್ಲಾಗುವ ಮಾಸಿಕ ಋತುಸ್ರಾವ ಸಹಜ ಕ್ರಿಯೆಯಾಗಿದ್ದು, ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮುಟ್ಟಿನ ದಿನಗಳಲ್ಲಿ ನಿಷ್ಕಾಳಜಿ ವಹಿಸಿದರೆ ಭವಿಷ್ಯದಲ್ಲಿ ಕ್ಯಾನ್ಸರ್‌ ನಂತಹ ಮಹಾಮಾರಿಯನ್ನು ಆಹ್ವಾನಿಸಿಕೊಳ್ಳುವಲ್ಲಿ ಸಂದೇಹವಿಲ್ಲ. ಹಾಗಾಗಿ, ಸ್ವಚ್ಛತೆ ಕಾಪಾಡಿಕೊಂಡು ಶುಭ್ರವಾಗಿರಬೇಕೆಂದು ನಗರದ ಹೆರಿಗೆ ಆಸ್ಪತ್ರೆ ಆರೋಗ್ಯ ಸಹಾಯಕಿ ಮಂಜುಳಾ ಮುದಕಣ್ಣನವರ ಹೇಳಿದರು.

Advertisement

ನಗರದ ಆರ್‌ಟಿಇಎಸ್‌ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಹಾಗೂ ಸ್ಥಳೀಯ ಜೆಸಿಐ ಸಂಸ್ಥೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಡಾ| ಮೇನಕಾ ಸಾಹುಕಾರ ಮಾತನಾಡಿ, ವಿದ್ಯಾರ್ಥಿನಿಯರು ಋತುಚಕ್ರಗಳಲ್ಲಾಗುವ ಸಮಸ್ಯೆಗಳ
ಬಗ್ಗೆ ಮುಚ್ಚುಮರೆಯಿಲ್ಲದೇ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು. ವಿದ್ಯಾರ್ಥಿನಿಯರು ಓದಿನಷ್ಟೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು. ಅಲ್ಲದೇ, ಮಹಿಳೆಯರಲ್ಲಿ ಮಾಸಿಕ ಋತುಸ್ರಾವದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೀತಾ ಕೋಟಿ ಮಾತನಾಡಿ, ಮಹಿಳೆಯರು ಸ್ವ ಚ್ಯ ಬಗ್ಗೆ ಹೆಚ್ಚಿನ ನಿಗಾ ವಹಿಸಿದರೆ ಇಡೀ ಕುಟುಂಬವೇ ಆರೋಗ್ಯಕರ ವಾತಾವರಣದಿಂದ ಕೂಡಿರಲು ಸಾಧ್ಯ. ಈ ನಿಟ್ಟಿನಲ್ಲಿ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ  ನೋಡಿಕೊಳ್ಳಬೇಕು. ಅಂದಾಗ ಸರ್ವರೂ ಆರೋಗ್ಯವಂತರಾಗಿರಲು ಸಾಧ್ಯ ಎಂದರು.

ಜೆಸಿಐ ಅಧ್ಯಕ್ಷೆ ಲಕ್ಷ್ಮೀ ಅಡಕೆ, ಪ್ರಾಚಾರ್ಯ ಸಿ.ಎ. ಹರಿಹರ, ಸೌಭಾಗ್ಯಲಕ್ಷ್ಮೀ , ಅಂಜನಾ ಪವಾರ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ. ಸರಸ್ವತಿ ಬಮ್ಮನಾಳ, ಚೇತನಾ ಮೇಲಗಿರಿ, ಕವಿತಾ ಎನ್‌., ತೇಜಸ್ವಿನಿ ಕುಲಕರ್ಣಿ, ಸುಧಾ ಹಿರೇಮಠ ಮತ್ತು ವಿದ್ಯಾರ್ಥಿನಿಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next