Advertisement

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

06:05 PM Dec 23, 2024 | ಶ್ರೀರಾಮ್ ನಾಯಕ್ |

ಬೆಟ್ಟದ ನೆಲ್ಲಿಕಾಯಿ ಹಲವು ಗುಣಗಳನ್ನು ಹೊಂದಿದ್ದು, ಇದರಲ್ಲಿ ಹಲವಾರು ಔಷಧಿಯ ಗುಣಗಳಿವೆ. ಚಳಿಗಾಲದಲ್ಲಿ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆಲ್ಲಿಕಾಯಿಯನ್ನು ತಿನ್ನುವುದು ಉತ್ತಮ. ನೆಲ್ಲಿಕಾಯಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ.

Advertisement

ಬೆಟ್ಟದ ನೆಲ್ಲಿಕಾಯಿಯನ್ನು ಬಳಸಿ ಉಪ್ಪಿನಕಾಯಿ, ಚಿತ್ರಾನ್ನ ಸೇರಿದಂತೆ ಹಲವು ಬಗೆಯ ರುಚಿಕರವಾದ ಅಡುಗೆಯನ್ನು ತಯಾರಿಸಿ ಸವಿಯಬಹುದು. ಇಂದು ನಾವು ನಿಮಗೆ ನೆಲ್ಲಿಕಾಯಿ ಚಟ್ನಿಯ ಬಗ್ಗೆ ಹೇಳಿಕೊಡುತ್ತೇವೆ ನೀವು ಇದುವರೆಗೆ ನೆಲ್ಲಿಕಾಯಿ ಚಟ್ನಿ ಮಾಡಿಲ್ಲ ಎಂದಾದರೆ ನಾವು ಹೇಳಿಕೊಡುತ್ತೇವೆ ನೋಡಿ.

ಬನ್ನಿ ಹಾಗಾದರೆ ನೆಲ್ಲಿಕಾಯಿ ಚಟ್ನಿ ಹೇಗೆ ಮಾಡುವುದು ಅದಕ್ಕೆ ಏನೆಲ್ಲಾ ಪದಾರ್ಥಗಳು ಬೇಕು ಎಂಬುದನ್ನು ತಿಳಿದುಕೊಂಡು ಬರೋಣ…

ಬೆಟ್ಟದ ನೆಲ್ಲಿಕಾಯಿ ಚಟ್ನಿ
ಬೇಕಾಗುವ ಸಾಮಗ್ರಿಗಳು
ಬೆಟ್ಟದ ನೆಲ್ಲಿಕಾಯಿ-10, ಹಸಿಮೆಣಸು-4, ಒಣಮೆಣಸು-5, ಜೀರಿಗೆ-1ಚಮಚ,ಕರಿಬೇವಿನ ಎಲೆ-ಸ್ವಲ್ಪ, ಕಡ್ಲೆಬೇಳೆ-2ಚಮಚ, ಉದ್ದಿನಬೇಳೆ-2ಚಮಚ, ಅರಿಶಿನ ಪುಡಿ-ಒಂದು ಟೀಸ್ಪೂನ್‌, ಬೆಲ್ಲ-ಸ್ವಲ್ಪ, ಕೊತ್ತಂಬರಿ ಸೊಪ್ಪು, ಸಾಸಿವೆ-ಅರ್ಧ ಚಮಚ, ಮೆಂತ್ಯ-ಅರ್ಧ ಟೀಸ್ಪೂನ್‌, ಎಣ್ಣೆ-3ಚಮಚ, ಇಂಗು-ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ
ಮೊದಲಿಗೆ ಬೆಟ್ಟದ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಒಂದು ನೆಲ್ಲಿಕಾಯಿಯನ್ನು 3 ಅಥವಾ 4ಭಾಗ ಆಗುವಂತೆ ಕಟ್‌(ತುಂಡು) ಮಾಡಿ ಒಂದು ಪಾತ್ರೆಗೆ ಹಾಕಿಕೊಳ್ಳಿ (ನೆಲ್ಲಿಕಾಯಿಯಲ್ಲಿರುವ ಬೀಜವನ್ನು ಬಳಸಬೇಡಿ). ನಂತರ ಒಂದು ಬಾಣಲೆಯನ್ನು ಒಲೆ ಮೇಲೆ ಇಟ್ಟು 3ಚಮಚದಷ್ಟು ಎಣ್ಣೆಯನ್ನು ಹಾಕಿ, ಅದಕ್ಕೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಜೀರಿಗೆ ಮತ್ತು ಸ್ವಲ್ಪ ಇಂಗನ್ನು ಹಾಕಿ ಎರಡು ನಿಮಿಷಗಳ ವರೆಗೆ ಫ್ರೈ ಮಾಡಿಕೊಳ್ಳಿ. (ಸಣ್ಣ ಉರಿಯಲ್ಲಿ ಹುರಿಯಿರಿ). ತದನಂತರ ಇದಕ್ಕೆ ಹಸಿಮೆಣಸು, ಒಣಮೆಣಸು, ಕರಿಬೇವಿನ ಎಲೆ ಹಾಕಿಕೊಂಡು ಪುನಃ ಫ್ರೈ ಮಾಡಿಕೊಳ್ಳಿ.

Advertisement

ನಂತರ ಕಟ್‌ ಮಾಡಿಟ್ಟ ನೆಲ್ಲಿಕಾಯಿಯನ್ನು ಹಾಕಿ ಸ್ವಲ್ಪ ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ, ಸುಮಾರು 10 ನಿಮಿಷಗಳ ಕಾಲ ಬೇಯಿಸಿರಿ. ನಂತರ ಒಂದು ಮಿಕ್ಸಿಜಾರಿಗೆ ಬೇಯಿಸಿದ ನೆಲ್ಲಿಕಾಯಿ ಮಿಶ್ರಣ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ತರಿತರಿಯಾಗಿ ರುಬ್ಬಿಕೊಂಡರೆ ಆರೋಗ್ಯಕರವಾದ ನೆಲ್ಲಿಕಾಯಿ ಚಟ್ನಿ ಸವಿಯಲು ಸಿದ್ಧ. ಇದನ್ನು ಊಟದ ಜೊತೆ ಅಥವಾ ಯಾವುದೇ ಖಾದ್ಯದ ಜೊತೆ ತಿನ್ನಲು ಬಲು ರುಚಿ.

ನೀವು ಸಹ ಒಮ್ಮೆ ಮನೆಯಲ್ಲಿ ಟ್ರೈ ಮಾಡಿ ನೋಡಿ Comment Boxನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ…

-ಶ್ರೀರಾಮ್ ಜಿ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next