Advertisement

Mumbai: 26/11ಕ್ಕೂ ಮುನ್ನವೇ ರಾಣಾ ಮುಂಬೈನಲ್ಲಿ ವಾಸ್ತವ್ಯ

09:10 PM Sep 26, 2023 | Team Udayavani |

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ 2008ರ ನವೆಂಬರ್‌ನಲ್ಲಿ ನಡೆಸಲಾಗಿದ್ದ ಉಗ್ರರ ದಾಳಿ ನಡೆಯುವುದಕ್ಕೆ ಎರಡು ದಿನಗಳ ಮೊದಲೇ ಲಷ್ಕರ್‌ ಉಗ್ರ ತಹವ್ವುರ್‌ ರಾಣಾ ಇಲ್ಲಿನ ಹೋಟೆಲ್‌ನಲ್ಲಿ ತಂಗಿದ್ದ. ಉಪನಗರ ಪೊವೈನಲ್ಲಿ ನ.21ರವರೆಗೆ ವಾಸ್ತವ್ಯ ಹೂಡಿದ್ದ ಎಂದು ಸ್ಥಳೀಯ ಕೋರ್ಟ್‌ಗೆ ಪೊಲೀಸರು ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

Advertisement

ಒಟ್ಟು 400 ಪುಟಗಳ ಪೂರಕ ಆರೋಪಪಟ್ಟಿಯಲ್ಲಿ 2008ರ ನ.11ರಿಂದ 21ರವರೆಗೆ ಭಾರತಕ್ಕೆ ಆಗಮಿಸಿದ್ದ. ಈ ಪೈಕಿ ಎರಡು ದಿನ ಪೊವೈನ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ. 26/11 ದಾಳಿ ಪ್ರಕರಣದಲ್ಲಿ ರಾಣಾ ಶಾಮೀಲಾಗಿದ್ದ ಎನ್ನುವುದರ ಬಗ್ಗೆ ದಾಖಲೆಗಳೂ ಇವೆ. ಪಾಕಿಸ್ತಾನಿ- ಅಮೆರಿಕನ್‌ ಭಯೋತ್ಪಾದಕ ಡೇವಿಡ್‌ ಕೋಲ್ಮನ್‌ ಹೆಡ್ಲಿಗೆ ಭಾರತಕ್ಕೆ ಪ್ರವಾಸ ಮಾಡುವ ನಿಟ್ಟಿನಲ್ಲಿ ಟೂರಿಸ್ಟ್‌ ವೀಸಾ ನೀಡಲು ರಾಣಾ ನೆರವು ನೀಡಿದ್ದ ಎಂದೂ ಆರೋಪಿಸಲಾಗಿದೆ.

ಅದಕ್ಕಾಗಿ ಹೆಡ್ಲಿ ಮತ್ತು ರಾಣಾ ನಡುವಿನ ಇ-ಮೇಲ್‌ ಸಂಪರ್ಕ ಕೂಡ ಪೂರಕ ಆರೋಪಪಟ್ಟಿಯೊಂದಿಗೆ ಲಗತ್ತಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next